Advertisement

ಫೆ.18ರಿಂದ 21ರವರೆಗೆ ಉಡುಪಿ, ದಕ್ಷಿಣಕನ್ನಡ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

09:18 PM Feb 17, 2021 | Team Udayavani |

ಬೆಂಗಳೂರು: ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಫೆ.18ರಿಂದ ಫೆ.21ರ ವರೆಗೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಫೆ.19ರಿಂದ ಫೆ.21ರ ವರೆಗೆ 20ರಿಂದ 25 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ತುಮಕೂರು ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಫೆ.20ರ ವರೆಗೆ ಅಲ್ಲಲ್ಲಿ ಚದುರಿದಂತೆ ಮಳೆ ಆಗಲಿದೆ.

ಬುಧವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಹವಾಮಾನ ಇಲಾಖೆಯ ವರದಿಯ ಪ್ರಕಾರ, ರಾಜ್ಯದಲ್ಲಿ ಒಣಹವೆ ಮುಂದುವರಿದಿದ್ದು, ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ 13 ಡಿ.ಸೆಲ್ಸಿಿಯಸ್ ದಾಖಲಾಗಿದೆ.

ಇದನ್ನೂ ಓದಿ:ಬಾಲ್ಕನಿಂದ ಕೆಳಗೆ ಬಿದ್ದು ಮೃತಪಟ್ಟ ಹಸುಗೂಸು: ಅಂಗಾಂಗ ದಾನಮಾಡಿ 5 ಜೀವ ಉಳಿಸಿದ ಧನಿಷ್ಥಾ

Advertisement

ಕರಾವಳಿ ಭಾಗದಲ್ಲಿ ಗರಿಷ್ಠ 31ರಿಂದ 32ಡಿ. ಸೆಲ್ಸಿಯಸ್ ಹಾಗೂ ಕನಿಷ್ಠ 21ರಿಂದ 23 ಡಿ.ಸೆಲ್ಸಿಯಸ್ ದಾಖಲಾಗಿತ್ತು. ಉತ್ತರ ಒಳನಾಡಿನಲ್ಲಿ ಗರಿಷ್ಠ 30ರಿಂದ 32 ಡಿ.ಲ್ಸಿಯಸ್, ಕಲುಬುರಗಿಯಲ್ಲಿ 34ರಿಂದ 35 ಡಿ.ಸೆಲ್ಸಿಯಸ್,

ಬೀದರನಲ್ಲಿ ಕನಿಷ್ಠ 14, ದಾವಣಗೆರೆಯಲ್ಲಿ 13 ಡಿ. ಸೆ.,ಬೆಳಗಾವಿಯಲ್ಲಿ 15 ಹಾಗೂ ಬೆಂಗಳೂರಿನಲ್ಲಿ ಕನಿಷ್ಠ 14 ಡಿ.ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ರಾಜ್ಯದಲ್ಲಿ ಗರಿಷ್ಠ ತಾಪಮಾನ 32 ಡಿ.ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 17 ಡಿ.ಸೆಲ್ಸಿಯಸ್ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next