Advertisement
ಕರಾವಳಿ ಕರ್ನಾಟಕದಲ್ಲಿ ಬಿರುಗಾಳಿಯ ವೇಗವು ಗಂಟೆಗೆ ಸುಮಾರು 55 ಕಿ.ಮೀ. ವರೆಗೆ ಹೋಗುವ ಸಾಧ್ಯತೆಗಳಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಇನ್ನು ಬೆಂಗಳೂರು ನಗರ ಮತ್ತು ಸುತ್ತಮುತ್ತ ಸ್ಥಳೀಯ ಮುನ್ಸೂಚನೆ ಗಮನಿಸಿದರೆ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶವಿರಲಿದೆ. ಹಗುರ ಮಳೆಯಾಗುವ ಸಾಧ್ಯತೆ ಇದೆ.ಸಿನೋಪ್ಟಿಕ್ ಹವಾಮಾನ ಶಾಸ್ತ್ರದ ವೈಶಿಷ್ಟ್ಯ:
ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ ಗಮನಿಸಿದಾಗ ಸುಳಿಗಾಳಿಯ ಪರಿಚಲನೆಯು ಈಗ ಉತ್ತರ ಮಧ್ಯ ಮಹಾರಾಷ್ಟ್ರ ಮತ್ತು ನೆರೆಹೊರೆಯಲ್ಲಿದ್ದು, ಸಮುದ್ರ ಮಟ್ಟದಿಂದ 5.8 ಕಿ.ಮೀ. ವರೆಗಿನ ಎತ್ತರದೊಂದಿಗೆ ದಕ್ಷಿಣಕ್ಕೆ ವಾಲುತ್ತದೆ. ಉತ್ತರ ಮಧ್ಯ ಮಹಾರಾಷ್ಟ್ರ ಮತ್ತು ನೆರೆಹೊರೆಯ ಸುಳಿಗಾಳಿಯ ಪರಿಚಲನೆಯಿಂದ ಉತ್ತರ ಬಾಂಗ್ಲಾದೇಶದವರೆಗೆ ವಿದರ್ಭ, ಛತ್ತೀಸ್‌ಗಢ, ಝಾರ್ಖಂಡ್, ಗಂಗಾನದಿ ಪಶ್ಚಿಮ ಬಂಗಾಲದ ಮೂಲಕ ಒಂದು ಟ್ರಫ್ ಸಾಗುತ್ತದೆ.
Related Articles
Advertisement