Advertisement

ಕೇಂದ್ರ ಭಾರತದಲ್ಲಿ ಮಳೆ ಕಡಿಮೆ: ಐಎಂಡಿ

11:48 PM Aug 29, 2021 | Team Udayavani |

ಹೊಸದಿಲ್ಲಿ: ಜುಲೈ ಬಳಿಕ ಹಾಲಿ ತಿಂಗಳೂ ಕೂಡ ಸಾಮಾನ್ಯಕ್ಕಿಂತ ಕಡಿಮೆ ದಾಖಲಾಗಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ರವಿವಾರ ಮಾಹಿತಿ ನೀಡಿದೆ.

Advertisement

ಜುಲೈಯಲ್ಲಿ ಶೇ.7, ಆ.28ರ ವರೆಗೆ ಸಂಗ್ರಹಿಸಲಾಗಿರುವ ಮಳೆಯ ದಾಖಲೆಗಳ ಪ್ರಕಾರ ಹಾಲಿ ತಿಂಗಳಲ್ಲಿ ಶೇ.26ರಷ್ಟು ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ರವಿವಾರ ತಿಳಿಸಿದ್ದಾರೆ.

ಉತ್ತರ ಮತ್ತು ಕೇಂದ್ರ ಭಾರತದಲ್ಲಿ ವಿಶೇಷವಾಗಿ ಮಳೆಯ ಕೊರತೆ ಕಂಡುಬಂದಿದೆ ಎಂದು ಹೇಳಿದ್ದಾರೆ. ಮುಂದಿನ ತಿಂಗಳಿಗೆ ಸಂಬಂಧಿಸಿದಂತೆ ಇರುವ ಮುಂಗಾರು ಮುನ್ಸೂಚನೆಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next