ನವ ದೆಹಲಿ : ಇನ್ನು ಮುಂದೆ ರೈಲಿನ ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗುವುದು ಎಂದು ರೈಲ್ವೇ ಸಚಿವ ಪಿಯೂಶ್ ಗೊಯಲ್ ಹೇಳಿದ್ದಾರೆ.
ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಸೂಕ್ತ ಕ್ರಮ : ರವಿ ಶಂಕರ್ ಪ್ರಸಾದ್
ಮಹಿಳೆಯರ ಸುರಕ್ಷತಾ ಕ್ರಮವಾಗಿ ರೈಲುಗಳಿಗೆ ಹೈ ಟೆಕ್ ಟಚ್ ನೀಡಲಾಗುತ್ತಿದೆ. ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಸಿಸಿ ಟಿವಿ ಅಳವಡಿಸುವುದರ ಜೊತೆಗೆ ಟಾಕ್ ಬ್ಯಾಕ್ ಸಿಸ್ಟಮನ್ನು ಕೂಡ ಹಾಕಲಾಗುತ್ತದೆ. ಇಲ್ಲಿಯ ತನಕ 2391 ಹೊಸ ಬೋಗಿ ಮತ್ತು 668 ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಸುವುದರ ಮೂಲಕ ಸುರಕ್ಷತೆಯನ್ನು ಬಲಗೊಳಿಸಲಾಗಿದೆ ಎಂದು ಗೋಯಲ್ ತಿಳಿಸಿದ್ದಾರೆ.
ಇನ್ನು, ಪ್ರಯಾಣದ ವೇಳೆ ಸಮಸ್ಯೆ ಎದುರಾದರೆ ಹೆಲ್ಪ್ ಲೈನ್ ಅಥವಾ ಸಹಾಯ ವಾಣಿಯನ್ನು ಕೂಡ ಜಾರಿ ಮಾಡಲಾಗಿದೆ. ಇನ್ನು ಮುಂದೆ ರೈಲಿನಲ್ಲಿ ಪ್ರಯಾಣಿಕರು ತಮಗಾದ ಸಮಸ್ಯೆಯ ಬಗ್ಗೆ 139 ನಂಬರ್ ಗೆ ಡಯಲ್ ಮಾಡುವುದರ ಮೂಲಕ ಪರಿಹರಸಿಕೊಳ್ಳಬಹುದಾಗಿದೆ. ಈ ಸಹಾಯ ವಾಣಿ 24 ಗಂಟೆಗಳು ಕೂಡ ಕಾರ್ಯಚರಿಸಲಿದೆ.
ಅಸುರಕ್ಷಿತ ರೈಲು ಮಾರ್ಗಗಳ ಬಗ್ಗೆಯೂ ಕೂಡ ಇಲಾಖೆ ಸಮೀಕ್ಷೆ ನಡೆಸಿದ್ದು, ಮಹಿಳೆಯರ ಸುರಕ್ಷಿತ ಕ್ರಮವಾಗಿ ಇಲಾಖೆ ಹೆಚ್ಚುವರಿ ಆರ್ ಪಿ ಎಫ್ (Railway Protection Force) ಸಿಬ್ಬಂದಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಗೋಯಲ್ ತಿಳಿಸಿದರು.
ಓದಿ : ಜೈ ಶ್ರೀರಾಮ್ ಘೋಷಣೆ ಕೂಗುವುದು ಬಂಗಾಳದಲ್ಲಿ ಅಪರಾಧವಾದ್ರೆ;…ಮಮತಾ ವಿರುದ್ಧ ಶಾ ಕಿಡಿ