Advertisement

ಮುಂದಿನ ತಿಂಗಳಿಂದ ರೈಲ್ವೆ ಫ್ಲೆಕ್ಸಿ ದರ ಯೋಜನೆ

06:00 AM Aug 26, 2018 | |

ನವದೆಹಲಿ: ಪರಿಷ್ಕೃತ ಫ್ಲೆಕ್ಸಿ ದರ ಯೋಜನೆಯನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲು ರೈಲ್ವೆ ಇಲಾಖೆ ಯೋಜಿಸಿದೆ. ನೂತನ ಯೋಜನೆ ಜಾರಿಗೊಂಡರೆ, ವಿಮಾನಯಾನ ದರದಷ್ಟು ದುಬಾರಿ ಹಣ ತೆರಬೇಕಿದ್ದ ಕೆಲವು ಮಾರ್ಗಗಳ ಪ್ರಯಾಣಿಕರಿಗೆ ತುಸು ನಿರಾಳತೆಯನ್ನು ತರಲಿದೆ ಎಂದು ಮೂಲಗಳು ತಿಳಿಸಿವೆ. ಕಡಿಮೆ ಟ್ರಾಫಿಕ್‌ನ ತಿಂಗಳ ವೇಳೆಯ ಪ್ರಯೋಗದಲ್ಲಿ ಕೆಲವು ನಿರ್ದಿಷ್ಟ ರೈಲುಗಳಲ್ಲಿ ಕೇವಲ ಶೇ.30ರಷ್ಟೇ ಸೀಟುಗಳು ಭರ್ತಿಯಾದ ಕಾರಣದಿಂದ ತಾತ್ಕಾಲಿಕವಾಗಿ ಈ ಯೋಜನೆಯನ್ನು ಸ್ಥಗಿತಗೊಳಸಲು ರೈಲ್ವೆ ಸಚಿವಾಲಯ ಯೋಜಿಸಿದೆ. 

Advertisement

ಹಮ್‌ಸಫ‌ರ್‌ ರೈಲುಗಳಲ್ಲಿ ಯಶಸ್ವಿಯಾದ ಸೂತ್ರದಂತೆ ಯೋಜನೆಯನ್ನು ಪರಿಷ್ಕರಿಸಲು ಯೋಜಿಸಿದ್ದು, ಇದರ ಪ್ರಕಾರ, ಮೊದಲ ಶೇ.50ರಷ್ಟು ಸೀಟುಗಳನ್ನು ಎಸಿ-3 ಟೈರ್‌ ಅಥವಾ ಎಕ್ಸ್‌ ಪ್ರಸ್‌ ರೈಲು ಟಿಕೆಟ್‌ಗಳ ದರಕ್ಕಿಂತ ಶೇ.15ರಷ್ಟು ಅಧಿಕ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಆ ನಂತರ ಪ್ರತಿ ಶೇ.10ರಷ್ಟು ಸೀಟುಗಳಿಗೆ ಸ್ಲಾಬ್‌ ಹೆಚ್ಚಿಸಲಾಗುತ್ತದೆ. ಅದೇ ರೀತಿ ಕಡಿಮೆ ದಟ್ಟಣೆ ಇರುವ ಮಾರ್ಗಗಳಲ್ಲಿ ವಿಶೇಷ ರಿಯಾಯ್ತಿ ನೀಡಲು ಕೂಡಾ ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪರಿಷ್ಕೃತ ಯೋಜನೆಯ ಅಂತಿಮ ಸ್ವರೂಪವನ್ನು ಮುಂದಿನ ವಾರ ಪ್ರಕಟಿಸುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಸಿಎಜಿ ತನ್ನ ವರದಿಯಲ್ಲಿ ರೈಲ್ವೆಯ ಫ್ಲೆಕ್ಸಿ ದರ ಯೋಜನೆಯನ್ನು ಟೀಕಿಸಿತ್ತು. ಕೆಲ ಮಾರ್ಗಗಳಲ್ಲಿ ವಿಮಾನಯಾನ ದರ ರೈಲು ದರಕ್ಕಿಂತ ಅಗ್ಗವಾಗಿದೆ ಎಂದು ಬೊಟ್ಟು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next