Advertisement
ಪ್ರತಿಕೂಲ ಹವಾಮಾನದಿಂದಾಗಿ ಮೊದಲ ದಿನ ಕೇವಲ 49 ಓವರ್‌ಗಳ ಆಟವಷ್ಟೇ ಸಾಧ್ಯವಾಯಿತು. ಈ ಅವಧಿಯಲ್ಲಿ ಪ್ರತೀಕ್ ಜೈನ್ ಅಮೋಘ ದಾಳಿ ಸಂಘಟಿಸಿ 14ಕ್ಕೆ 4 ವಿಕೆಟ್ ಉಡಾಯಿಸಿದರು. ಉಳಿದೆರಡು ವಿಕೆಟ್ ಅಭಿಮನ್ಯು ಮಿಥುನ್ ಪಾಲಾಯಿತು.
ರೈಲ್ವೇಸ್ ಮೇಲೆ ಮಧ್ಯಮ ವೇಗಿ ಪ್ರತೀಕ್ ಜೈನ್ ಮಿಂಚಿನ ಬೌಲಿಂಗ್ ದಾಳಿ ನಡೆಸಿದರು. ಮತ್ತೂಂದು ಕಡೆಯಿಂದ ಅನುಭವಿ ಬೌಲರ್ ವೇಗಿ ಅಭಿಮನ್ಯು ಮಿಥುನ್ ಕೂಡ ಕಂಟಕವಾಗಿ ಪರಿಣಮಿಸಿದರು. ಇವರಿಬ್ಬರ ಬೌಲಿಂಗ್ ಆಕ್ರಮಣಕ್ಕೆ ಸಿಲುಕಿ ರೈಲ್ವೇಸ್ ಬ್ಯಾಟ್ಸ್‌ಮನ್‌ಗಳು ದಿಕ್ಕಾಪಾಲಾದರು.
Related Articles
Advertisement
ಸಂಕ್ಷಿಪ್ತ ಸ್ಕೋರ್: ರೈಲ್ವೇಸ್-6 ವಿಕೆಟಿಗೆ 98 (ಘೋಷ್ ಬ್ಯಾಟಿಂಗ್ 32, ಯಾದವ್ಬ್ಯಾಟಿಂಗ್ 29, ದೇವಧರ್ 12, ಜೈನ್ 14ಕ್ಕೆ 4, ಮಿಥುನ್ 18ಕ್ಕೆ 2). ಅರಿಂದಮ್-ಅವಿನಾಶ್ ಹೋರಾಟ
ರೈಲ್ವೇಸ್ ನಿರಂತರ ವಿಕೆಟ್ ಕಳೆದುಕೊಳ್ಳುತ್ತ ಹೋದಾಗ 7ನೇ ವಿಕೆಟಿಗೆ ಜತೆಗೂಡಿದ ಅರಿಂದಮ್ ಘೋಷ್-ಅವಿನಾಶ್ ಯಾದವ್ ಕ್ರೀಸ್ ಆಕ್ರಮಿಸಿಕೊಂಡರು. 24.5 ಓವರ್ ನಿಭಾಯಿಸಿ 7ನೇ ವಿಕೆಟಿಗೆ 53 ರನ್ ಜತೆಯಾಟ ನಿರ್ವಹಿಸಿದರು. ಘೋಷ್ 32 ರನ್ನಿಗೆ 88 ಎಸೆತ ಎದುರಿಸಿದ್ದಾರೆ. ಇದರಲ್ಲಿ 4 ಬೌಂಡರಿ ಸೇರಿದೆ. ಯಾದವ್ 92 ಎಸೆತ ಎದುರಿಸಿ 29 ಮಾಡಿದ್ದಾರೆ (5 ಬೌಂಡರಿ). ಸದ್ಯ ಪ್ರತಿಕೂಲ ಹವಾಮಾನ ರೈಲ್ವೇಸ್ ನೆರವಿಗೆ ಬಂದಿದೆ.