Advertisement

ರೈಲ್ವೇ ಯಾತ್ರಿ ಸಂಘ ಮುಂಬಯಿ ನಿಯೋಗದಿಂದ ಕೊಂಕಣ್‌ ಭವನಕ್ಕೆ ಭೇಟಿ

11:40 AM Jan 02, 2019 | Team Udayavani |

ನವಿ ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಪಶ್ಚಿಮ ವಲಯ ಸಂಸ್ಥೆಯ ನಿಯೋ ಗವು ಡಿ. 26ರಂದು  ಬೇಲಾಪುರದಲ್ಲಿರುವ  ಕೊಂಕಣ್‌ ಭವನಕ್ಕೆ ಭೇಟಿಯನ್ನಿತ್ತು ಕೊಂಕಣ್‌ ರೈಲ್ವೇ ಕಾರ್ಪೊರೇಶನ್‌ ಲಿಮಿಟೆಡ್‌ (ಕೆಆರ್‌ಸಿಎಲ್‌) ಆಡಳಿತ ನಿರ್ದೇಶಕ ಸಂಜಯ್‌ ಗುಪ್ತ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿತು.

Advertisement

ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಗೌರವಾಧ್ಯಕ್ಷ  ಶಂಕರ್‌ ಬಿ. ಶೆಟ್ಟಿ ವಿರಾರ್‌ ಪದಾಧಿಕಾರಿಗಳನ್ನು ಒಳಗೊಂಡು ಮುಂಬಯಿ ಮಂಗಳೂರು ಪ್ರಯಾಣಿಕರಿಗೆ‌ ಸರ್ವೋತ್ತಮ ಸೇವೆ ಒದಗಿಸುವಂತೆ  ಮನವಿ ಸಲ್ಲಿಸಿತು. ಈ ಸಂದರ್ಭ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ, ಉಪಾಧ್ಯಕ್ಷ ಪ್ರೇಮನಾಥ ಪಿ. ಕೋಟ್ಯಾನ್‌, ಜೊತೆ ಕಾರ್ಯದರ್ಶಿ ರಜಿತ್‌ ಎಂ. ಸುವರ್ಣ, ಜಯ ಎ. ಶೆಟ್ಟಿ, ಕೆಆರ್‌ಸಿಎಲ್‌ ಪಿಆರ್‌ಒ ಗಿರೀಶ್‌ ಕರಂಡೇಕರ್‌  ಉಪಸ್ಥಿತರಿದ್ದರು.

ಮಂಗಳೂರು ಎಕ್ಸ್‌ಪ್ರೆಸ್‌ ಮತ್ತು ಮತ್ಸÂಗಂಧ ರೈಲುಗಳನ್ನು ನೂತನ ತಂತ್ರಜ್ಞಾನ ಬಳಸಿ ವೇಗ ಹೆಚ್ಚಿಸುವುದು, ಈ ರೈಲು  ಮಾರ್ಗದಲ್ಲಿ ಸಂಚಾರಿಸುವ ಸಂದರ್ಭದಲ್ಲಿ ಲೂಟಿಕೋರರ ಮತ್ತು ಕಳ್ಳತನದ ಘಟನೆಗಳು ದಿನೇದಿನೇ ಹೆಚ್ಚಾಗುತ್ತಿದ್ದು ಇವುಗಳಿಗೆ ಕಡಿವಾಣ ಹಾಕಿ ಅಪರಾಧಮುಕ್ತ ಯಾನಕ್ಕೆ ಮುಂಜಾಗ್ರತಾ  ಕ್ರಮವಾಗಿಸಿ ಕೆಆರ್‌ಸಿಎಲ್‌ ಅತಿಯಾದ ಕಾಳಜಿ ವಹಿಸುವುದು, ಸೂಕ್ಷ¾ವಾದ ಪ್ರದೇಶಗಳಲ್ಲಿ ಹಾಗೂ ಎಲ್ಲಾ ರೈಲ್ವೆ ಬೋಗಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು  ಮತ್ತು ಸಾಮಾನ್ಯ ಬೋಗಿಯ ಟಿಕೇಟ್‌ ಪಡೆದ ಪ್ರಯಾಣಿಕರು ರಿಸರ್ವೇಶನ್‌  ಟಿಕೇಟು ಪಡೆದ ಪ್ರಯಾಣಿಕರ ಬೋಗಿಗಳಲ್ಲಿ ಪ್ರಯಾಣಿಸದಂತೆ ನೋಡಿಕೊಳ್ಳುವುದು, ಕನಿಷ್ಠ ರತ್ನಗಿರಿ ರೈಲ್ವೆ ನಿಲ್ದಾಣ ತನಕ ಇತರ ಪ್ರಯಾಣಿಕರು ಒಳಸೇರದಂತೆ ನೋಡಿಕೊಳ್ಳಲು  ಆರ್‌ಪಿಫ್‌ ಸಿಬ್ಬಂದಿಗಳನ್ನು ನೇಮಿಸುವುದು, ಮಂಗಳೂರು ಎಕ್ಸ್‌ಪ್ರೆಸ್‌ ರೈಲನ್ನು ಮೂಲ್ಕಿ ರೈಲ್ವೆ  ನಿಲ್ದಾಣದಲ್ಲಿ ನಿಲುಗಡೆಗೊಳಿಸುವುದು ಹಾಗೂ ಪ್ರಯಾಣಿಕರ ಅನುಕೂಲಕರ ಸೇವೆಯನ್ನಾಗಿಸಿ ನೂತನ ರೇಕ್‌ಗಳನ್ನು ಅಳವಡಿಸುವುದು ಇನ್ನಿತರ ಸಮಸ್ಯೆಗಳ ಬಗೆಹರಿಸುವಿಕೆಗಾಗಿ ನಿರ್ದೇಶಕ ಸಂಜಯ್‌ ಗುಪ್ತ ಅವರಿಗೆ ಮನವಿ ಸಲ್ಲಿಸಲಾಯಿತು.

ಸುಮಾರು ಒಂದೂವರೆ ತಾಸುಗಳ ಸುದೀರ್ಘ‌ವಾದ ಚರ್ಚೆಯ ಬಳಿಕ ಸಂಜಯ್‌ ಗುಪ್ತ ಭರವಸೆಗಳನ್ನು ತ್ವತರಿತವಾಗಿ ಈಡೇರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ರೈಲ್ವೇ ಯಾತ್ರಿ ಸಂಘದ ಈ ಬೇಡಿಕೆಗಳನ್ನು ಶೀಘ್ರವೇ ಪರಿಶೀಲಿಸಿ ಸೂಕ್ತವಾದ ಕ್ರಮಗಳನ್ನು ಕೈಗೊಂಡು ಸುರಕ್ಷಿತ ಪ್ರಯಾಣಕ್ಕೆ ಕೆಆರ್‌ಸಿಎಲ್‌ ಸದಾ ಬದ್ಧವಾಗಿದೆ ಎಂದ ತಿಳಿಸಿದರು. 

ಚಿತ್ರ-ವರದಿ: ರೊನಿಡಾ ಮುಂಬಯಿ

Advertisement
Advertisement

Udayavani is now on Telegram. Click here to join our channel and stay updated with the latest news.

Next