Advertisement

ರೈಲ್ವೆ ಇಲಾಖೆಯ ವೆಬ್‌ಸೈಟ್‌ ಹ್ಯಾಕ್ ‌ಮಾಡಿ ವಂಚನೆ ಪ್ರಕರಣ: ಸಿಬಿಐ ತನಿಖೆ ಆರಂಭ

09:07 PM Nov 25, 2020 | sudhir |

ಬೆಂಗಳೂರು: ರೈಲ್ವೆ ಇಲಾಖೆಯ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಇ-ಟಿಕೆಟ್‌ ಮಾರಾಟ ಮಾಡುವ ಮೂಲಕ ರೈಲ್ವೆ ಇಲಾಖೆಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದೆ.

Advertisement

ಪ್ರಕರಣ ಸಂಬಂಧ ಸೌತ್‌ ವೆಸ್ಟರ್ನ್ ರೈಲ್ವೆ ಯಶವಂತಪುರ ವಿಭಾಗದ ಆರ್‌ಪಿಎಫ್‌ನ ಪೋಸ್ಟ್‌ ಕಮಾಂಡರ್‌ ಅಖೀಲೇಶ್‌ ಕುಮಾರ್‌ ತಿವಾರಿ ನೀಡಿದ ದೂರಿನ ಮೇರೆಗೆ ಝಾರ್ಖಂಡ್‌ ಮೂಲದ ಗುಲಾಮ್‌ ಮುಸ್ತಾಫ್‌ ಹಾಗೂ ಪೀಣ್ಯದ ಹನುಮಂತರಾಜು ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿದೆ.

ಪಾಕ್‌ ಜತೆ ನಂಟು?
ಗುಲಾಮ್‌ ಮುಸ್ತಾಫ್‌ ಪಾಕಿಸ್ಥಾನದ ಸಂಘಟನೆಗಳ ಜತೆ ನಂಟು ಹೊಂದಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಅಲ್ಲಿನ “ಡಾರ್ಕ್‌ನೆಟ್‌’ ಸಾಫ್ಟ್‌ವೇರ್‌ ಅನ್ನು ಬಳಸಿಕೊಂಡಿದ್ದ. ಜತೆಗೆ ಸಾಫ್ಟ್‌ವೇರ್‌ಗಳನ್ನು ಹ್ಯಾಕ್‌ ಮಾಡಲು “ಲಿನಕ್ಸ್‌’ ಸಾಫ್ಟ್‌ವೇರ್‌ ಬಳಸಿದ್ದ. ಕೇಂದ್ರ ಸರಕಾರ ಸ್ವಾಮ್ಯದ ಹಲವು ಕಚೇರಿಗಳ ಬ್ಯಾಂಕ್‌ ಖಾತೆ ವಿವರ ಹಾಗೂ ಸಾಫ್ಟ್‌ವೇರ್‌ಗಳ ಡೇಟಾವನ್ನೂ ಈತ ಸಂಗ್ರಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಪ.ಬಂಗಾಳ: BJP ಅಧಿಕಾರಕ್ಕೆ ಬಂದರೆ ಪೊಲೀಸರು ಬೂಟು ನೆಕ್ಕುವಂತೆ ಮಾಡುವೆ: ರಾಜು ಬ್ಯಾನರ್ಜಿ

ಗುಲಾಮ್‌ ಮುಸ್ತಾಫ 2017ರ ಅಕ್ಟೋಬರ್‌ನಲ್ಲಿ ರೈಲ್ವೆ ಇಲಾಖೆಯಿಂದ ಆನ್‌ಲೈನ್‌ ಮೂಲಕ ಇ-ಟಿಕೆಟ್‌ ಬುಕಿಂಗ್‌ ಮಾಡಿಕೊಡುವ ಐಆರ್‌ಟಿಸಿ ಏಜೆಂಟ್‌ ಐಡಿ ಪಡೆದುಕೊಂಡಿದ್ದ. ನಂತರ ಇತರ ಆರೋಪಿಗಳ ಜತೆ ಸೇರಿ ಅನಧಿಕೃತವಾಗಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಎಎನ್‌ಎಮ್‌ಎಸ್‌ ಸಾಫ್ಟ್ವೇರ್‌’ ಹ್ಯಾಕ್‌ ಮಾಡಿದ್ದ. ನಕಲಿ ಹೆಸರು ಮತ್ತು ವಿಳಾಸಗಳಿಂದ 563ಕ್ಕೂ ಹೆಚ್ಚು ನಕಲಿ ಪರ್ಸನಲ್‌ ಐಡಿ ಸೃಷ್ಟಿಸಿಕೊಂಡಿದ್ದ. ನಕಲಿ ಐಡಿಗಳ ಮುಖಾಂತರ ಆನ್‌ಲೈನ್‌ನಲ್ಲಿ ರೈಲ್ವೆ ಇ-ಟಿಕೆಟ್‌ ಪಡೆದುಕೊಂಡು ಮಾರಾಟ ಮಾಡುತ್ತಿದ್ದ. ಎಎನ್‌ಎಮ್‌ಎಸ್‌ ಸಾಫ್ಟ್‌ವೇರ್‌ನ್ನು ಬಾಡಿಗೆಗೆ ನೀಡಿ ಅಕ್ರಮ ವ್ಯವಹಾರ ನಡೆಸಿ ರೈಲ್ವೆ ಇಲಾಖೆಗೆ ಕೋಟ್ಯಂತರ ರೂ. ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ.

Advertisement

ಕೃತ್ಯ ಬಯಲಾಗಿದ್ದು ಹೇಗೆ ?
ರೈಲ್ವೆ ನಕಲಿ ಇ-ಟಿಕೆಟ್‌ ಮಾರಾಟ ದಂಧೆಯಲ್ಲಿ 2019 ಅಕ್ಟೋಬರ್‌ನಲ್ಲಿ ಹನುಮಂತರಾಜುನ್ನು ಯಶವಂತಪುರ ರೈಲ್ವೆ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆತ ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ಮುಂದುವರಿಸಿದಾಗ ಗುಲಾಮ್‌ ಮುಸ್ತಾಫ್‌ನ ಸುಳಿವು ಸಿಕ್ಕಿತ್ತು. ಕಳೆದ ಜ.8ರಂದು ಈತನನ್ನು ಬಂಧಿಸಿದಾಗ ಅಸಲಿ ಕೃತ್ಯ ಬಯಲಾಗಿದೆ.

ಗುಲಾಮ್‌ ಬಳಿಯಿದ್ದ ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಹಾರ್ಡ್‌ ಡಿಸ್ಕ್ ಹಾಗೂ ಇತರೆ ಉಪಕರಣಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟ ಹಲವು ಇಲಾಖೆಗಳ ಡೇಟಾ ಪತ್ತೆಯಾಗಿತ್ತು. ಡಾರ್ಕ್‌ನೆಟ್‌ ವೆಬ್‌ಸೈಟ್‌ನಿಂದ ಪಾಕಿಸ್ತಾನದ ಸಂಘಟನೆಗಳನ್ನು ಸಂಪರ್ಕಿಸಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next