Advertisement

ರೈಲಿನಲ್ಲಿ ಟೀ ಕಾಫಿಗೆ ಟಾಯ್‌ಲೆಟ್‌ ನೀರು ಬಳಕೆ: 1 ಲಕ್ಷ ರೂ. ದಂಡ

11:16 AM May 03, 2018 | udayavani editorial |

ಹೊಸದಿಲ್ಲಿ : ರೈಲಿನಲ್ಲಿ ಪ್ರಯಾಣಿಕರಿಗೆ ಪೂರೈಸುವ ಟೀ ಕಾಫಿಗೆ ರೈಲಿನ ಟಾಯ್‌ಲೆಟ್‌ ನೀರನ್ನು ಬಳಸಿದ ಪೂರೈಕೆದಾರನಿಗೆ ರೈಲ್ವೆ ಇಲಾಖೆ ಒಂದು ಲಕ್ಷ ರೂ. ದಂಡ ಹೇರಿದೆ. 

Advertisement

ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆಲಂಗಾಣದಲ್ಲಿ  ಚೆನ್ನೆ ಸೆಂಟ್ರಲ್‌ – ಹೈದರಾಬಾದ್‌ ಚಾರ್‌ಮಿನಾರ್‌ ಎಕ್ಸ್‌ಪ್ರೆಸ್‌ ರೈಲಿನ ಟಾಯ್‌ಲೆಟ್‌ಲ್ಲಿ  ನೀಲಿ ಶರ್ಟ್‌ಧಾರಿ ವ್ಯಕ್ತಿಯೊಬ್ಬ ಟೀ ಕಾಫಿ ಗಾಗಿ  ಕ್ಯಾನ್‌ಗಳಲ್ಲಿ  ನೀರು ತುಂಬಿಸಿಕೊಂಡು ಶೌಚಾಲಯದ ಹೊರಗೆ ನಿಂತಿದ್ದ ಟೀ-ಕಾಫಿ ಪೂರೈಕೆದಾರನಿಗೆ ಕೊಡುತ್ತಿದ್ದ ದೃಶ್ಯವನ್ನು ರೈಲು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದರು.

ಬಳಿಕ ಅದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿತ್ತು. ಈ ವಿಡಿಯೋ ಕಂಡು ತೀವ್ರ ಜುಗುಪ್ಸೆ ಪಟ್ಟು ಆಕ್ರೋಶಿತರಾಗಿದ್ದ  ಪ್ರಯಾಣಿಕರು ರೈಲಿನಲ್ಲಿ ಶುದ್ಧ ಆಹಾರ ಪೂರೈಸುವ ರೈಲು ಅಧಿಕಾರಿಗಳ ಬದ್ಧತೆಯನ್ನು ಪ್ರಶ್ನಿಸಿದ್ದರು. 

ಕಳೆದ ತಿಂಗಳಲ್ಲಷ್ಟೇ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಅವರು ರೈಲುಗಳಲ್ಲಿ ಟೀ ಕಾಫಿ ಆಹಾರ ಪೂರೈಸುವವರಿಗೆ ಗುಣಮಟ್ಟದೊಂದಿಗೆ ಎಂದೂ ರಾಜಿ ಮಾಡಕೂಡದೆಂದು ಅಪ್ಪಣೆ ಕೊಡಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next