Advertisement

ಪ್ರಯಾಣಿಕರೇ ಗಮನಿಸಿ: ರೈಲ್ವೆ ಪ್ರಯಾಣ ಎಸಿ, ಸ್ಲೀಪರ್ ಕ್ಲಾಸ್ ಟಿಕೆಟ್ ದರ ದುಬಾರಿ ಸಾಧ್ಯತೆ?

05:56 PM Sep 28, 2020 | Nagendra Trasi |

ನವದೆಹಲಿ: ಪ್ರಯಾಣಿಕ (ಗ್ರಾಹಕ) ಅಭಿವೃದ್ಧಿ ಶುಲ್ಕ (ಯುಡಿಎಫ್) ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಇನ್ಮುಂದೆ ರೈಲ್ವೆ ಪ್ರಯಾಣದ ಟಿಕೆಟ್ ದರ ದುಬಾರಿಯಾಗುವ ನಿರೀಕ್ಷೆ ಇದ್ದಿರುವುದಾಗಿ ವರದಿ ತಿಳಿಸಿದೆ.

Advertisement

ಜೀ ಮಾಧ್ಯಮಕ್ಕೆ ತಿಳಿಸಿರುವ ಮೂಲಗಳ ಪ್ರಕಾರ, ಮುಂದಿನ ತಿಂಗಳು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಯಾಣಿಕ ಅಭಿವೃದ್ಧಿ ಶುಲ್ಕ(ಯುಡಿಎಫ್) ಹೆಚ್ಚಳ ಮಾಡುವ ಬಗ್ಗೆ ಅನುಮತಿ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಸ್ಲೀಪರ್ ಕ್ಲಾಸ್ ಹಾಗೂ ಎಸಿ ರೈಲ್ವೆ ಪ್ರಯಾಣದ ಟಿಕೆಟ್ ದರ 10ರಿಂದ 35 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದೆ.

ಯೂಸರ್ ಡೆವಲಪ್ ಮೆಂಟ್ ಫೀ (ಪ್ರಯಾಣಿಕ ಅಭಿವೃದ್ಧಿ ಶುಲ್ಕ) ರೈಲು ಪ್ರಯಾಣದ ವಿವಿಧ ಕೆಟಗರಿ ಹಾಗೂ ಕ್ಲಾಸ್ ಗಳಿಗೆ ಭಿನ್ನವಾಗಿರುತ್ತದೆ. ಯುಡಿಎಫ್ ಶುಲ್ಕವನ್ನು ಐದು ವಿವಿಧ ಕೆಟಗರಿಗಳಿಗೆ ಏರಿಸಲಾಗುತ್ತದೆ.

ರೈಲಿನ ಎಸಿ ಕ್ಲಾಸ್ ಪ್ರಯಾಣಿಕರು ಹೆಚ್ಚು ಶುಲ್ಕ ಪಾವತಿಸುತ್ತಾರೆ, ಸ್ಲೀಪರ್ ಕ್ಲಾಸ್ ಪ್ರಯಾಣಿಕರು ಕಡಿಮೆ ಯುಡಿಎಫ್ ಪಾವತಿಸುತ್ತಾರೆ. ಒಂದು ವೇಳೆ ಯುಡಿಎಫ್ ಶುಲ್ಕ ಏರಿಕೆಯಾದರೆ ರೈಲು ಪ್ರಯಾಣದ ಟಿಕೆಟ್ ದರ ಈ ಪ್ರಮಾಣದಲ್ಲಿ ಏರಿಕೆಯಾಗಲಿದೆ:

ಎಸಿ ಫಸ್ಟ್ ಟಯರ್: 35ರಿಂದ 40 ರೂಪಾಯಿ

Advertisement

ಎಸಿ ಟು ಟಯರ್ : 30 ರೂಪಾಯಿ

ಎಸಿ ತ್ರಿ ಟಯರ್ : 30 ರೂಪಾಯಿ

ಸ್ಲೀಪರ್ ಕ್ಲಾಸ್: 10 ರೂಪಾಯಿ

ಯುಡಿಎಫ್ ಶುಲ್ಕ ಖಾಸಗಿ ರೈಲ್ವೆ ನಿಲ್ದಾಣ ಬಳಸುವ ಪ್ರಯಾಣಿಕರಿಗೆ ಅನ್ವಯವಾಗಲಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ರೈಲ್ವೆ ಭೂ ಅಭಿವೃದ್ದಿ ಪ್ರಾಧಿಕಾರ (ಆರ್ ಎಲ್ ಡಿ) ನವದೆಹಲಿಯ 5 ಲಕ್ಷ ಸ್ಕ್ವಾರ್ ಮೀಟರ್ ನಷ್ಟು ಪ್ರದೇಶವನ್ನು ಮರು ನವೀಕರಣಕ್ಕಾಗಿ ಖಾಸಗಿ ಟೆಂಡರ್ ಗಳನ್ನು ಬಿಡ್ ಗೆ ಆಹ್ವಾನಿಸಿದೆ. ಇದರಲ್ಲಿ ಇನ್ನುಳಿದ 2.6 ಲಕ್ಷ ಸ್ಕ್ವಾರ್ ಮೀಟರ್ ಪ್ರದೇಶ ವಾಣಿಜ್ಯ ಉದ್ದೇಶದ ಬಳಕೆಗೆ ಬಳಸಲಾಗುವುದು ಎಂದು ವರದಿ ತಿಳಿಸಿದೆ.

ಆರ್ ಎಲ್ ಡಿಎ ಆದ್ಯತೆ ಮೇರೆಗೆ ನವದೆಹಲಿ, ತಿರುಪತಿ, ಡೆಹ್ರಾಡೂನ್, ನೆಲ್ಲೂರು ಹಾಗೂ ಪಾಂಡಿಚೇರಿ ರೈಲ್ವೆ ನಿಲ್ದಾಣಗಳ ಮರು ನವೀಕರಣಕ್ಕೆ ಸಿದ್ಧತೆ ನಡೆಸಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next