Advertisement

ಹಳಿ ದ್ವಿಪಥ: ರೈಲು ಸಂಚಾರ ವ್ಯತ್ಯಯ

01:11 AM Feb 21, 2020 | Team Udayavani |

ಉಡುಪಿ: ಮಂಗಳೂರು ಜಂಕ್ಷನ್‌-ಪಣಂಬೂರು ನಡುವೆ ರೈಲು ಮಾರ್ಗದ ದ್ವಿಪಥ ಕಾಮಗಾರಿ ಹಿನ್ನೆಲೆಯಲ್ಲಿ ಫೆ.28ರ ತನಕ ಮಂಗಳೂರು ಜಂಕ್ಷನ್‌ ಜೋಕಟ್ಟೆ ನಡುವೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.

Advertisement

ಮಂಗಳೂರು-ಮಡಗಾಂವ್‌ ಇಂಟರ್‌ ಸಿಟಿ ರೈಲು 22636/22635 ಫೆ. 28ರಂದು ಮಾತ್ರ ರದ್ದಾಗಲಿದೆ. ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್ಸ್‌ 12133, 12134 ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲು ಸುರತ್ಕಲ್‌ನಿಂದ ಸಂಚರಿಸಲಿದ್ದು ಸುರತ್ಕಲ್‌, ಮಂಗಳೂರು ಜಂಕ್ಷನ್‌ ನಡುವೆ ಫೆ. 19ರಿಂದ 28ರ ತನಕ ರೈಲು ಸಂಚರಿಸುವುದಿಲ್ಲ.

ಮಡಗಾಂವ್‌ ಮಂಗಳೂರು ಡೆಮು ಪ್ಯಾಸೆಂಜರ್‌ ರೈಲು 70105, 70106 ತೋಕೂರಿನಿಂದ ಮಡಂಗಾವ್‌ಗೆ ತೆರಳಲಿದ್ದು, ತೋಕೂರು ಮಂಗಳೂರು ನಡುವೆ ಸಂಚಾರ ನಡೆಸುವುದಿಲ್ಲ. ಎರ್ನಾಕುಲಂ ಪುಣೆ 22149 ಎಕ್ಸ್‌ ಪ್ರಸ್‌ ಫೆ. 28ಕ್ಕೆ ಎರ್ನಾಕುಲದಿಂದ ಬೆಳಗ್ಗೆ 6.15ಕ್ಕೆ ಒಂದು ತಾಸು ತಡವಾಗಿ ಹೊರಡಲಿದೆ. ಮಂಗಳೂರು ಕುರ್ಲಾ ಲೋಕಮಾನ್ಯ ತಿಲಕ್‌ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ 12620 ಫೆ. 19ರಿಂದ ಮಂಗಳೂರು ಜಂಕ್ಷನ್‌ನಿಂದ 15 ನಿಮಿಷ ತಡವಾಗಿ ಹೊರಡಲಿದೆ. ನಿಜಾಮುದ್ದೀನ್‌ ತಿರುವನಂತಪುರ ರಾಜಧಾನಿ 12432 ಎಕ್ಸ್‌ಪ್ರೆಸ್‌ ಫೆ. 20ಕ್ಕೆ ಜೋಕಟ್ಟೆಯಿಂದ 15 ನಿಮಿಷ ತಡವಾಗಿ ಹೊರಡಲಿದೆ.

ಹಿಸ್ಸಾರ್‌ ಕೊಯಮತ್ತೂರು 22475 ಎಸಿ ಎಕ್ಸ್‌ಪ್ರೆಸ್‌ ಸಾಪ್ತಾಹಿಕ ರೈಲು ಫೆ. 20ರಂದು ಜೋಕಟ್ಟೆಯಿಂದ 30 ನಿಮಿಷ ತಡವಾಗಿ ಹೊರಡಲಿದೆ. ವಾರಕ್ಕೆ ಮೂರು ಬಾರಿ ಓಡುವ ಯಶವಂತಪುರ ಕಾರವಾರ ಎಕ್ಸ್‌ಪ್ರೆಸ್‌ 16515 ಎಕ್ಸ್‌ ಪ್ರಸ್‌ ಫೆ. 21ರಿಂದ ಮಂಗಳೂರು ಜಂಕ್ಷನ್‌ನಿಂದ ಎರಡು ತಾಸು ತಡವಾಗಿ ಸಂಚಾರ ಆರಂಭಿಸಲಿದೆ. ನಿಜಾಮುದ್ದಿನ್‌ ತಿರುವನಂತಪುರ ರಾಜಧಾನಿ 12432 ಎಕ್ಸ್‌ಪ್ರೆಸ್‌ ರೈಲು ಫೆ. 23ರಂದು 15ನಿಮಿಷ ತಡವಾಗಿ ಜೋಕಟ್ಟೆಯಿಂದ ಹೊರಡಲಿದೆ.

ಯಶವಂತಪುರ-ಕಾರವಾರ ನಡುವೆ ವಾರಕ್ಕೆ ಮೂರು ಬಾರಿ ಓಡುವ 16515 ಎಕ್ಸ್‌ಪ್ರೆಸ್‌ ರೈಲು ಫೆ. 24ರಿಂದ ಮಂಗಳೂರು ಜಂಕ್ಷನ್‌ನಿಂದ 90 ನಿಮಿಷ ತಡವಾಗಿ ಹೊರಡಲಿದೆ. ನಿಜಾಮುದ್ದೀನ್‌ ತಿರುವನಂತಪುರ ರಾಜಧಾನಿ ಎಕ್ಸ್‌ಪ್ರೆಸ್‌ 12432 ಫೆ. 25ರಿಂದ 25 ನಿಮಿಷ ತಡವಾಗಿ ಜೋಕಟ್ಟೆಯಿಂದ ಹೊರಡಲಿದೆ. ನಿಜಾಮುದ್ದಿನ್‌ ತಿರುವನಂತಪುರ ರಾಜಧಾನಿ ಎಕ್ಸ್‌ಪ್ರೆಸ್‌ 12432 ಫೆ.26ಕ್ಕೆ ಜೋಕಟ್ಟೆಯಿಂದ 15 ನಿಮಿಷ ತಡವಾಗಿ ಹೊರಡಲಿದೆ. ಎರ್ನಾಕುಲಂ ಪುಣೆ 22149 ಎಕ್ಸ್‌ ಪ್ರಸ್‌ ರೈಲು ಫೆ.28ಕ್ಕೆ ಮಂಗಳೂರು ಜಂಕ್ಷನ್‌ನಿಂದ 30 ನಿಮಿಷ ತಡವಾಗಿ ಸಂಚಾರ ಆರಂಭಿಸಲಿದೆ.

Advertisement

ಮಂಗಳೂರು ಜಂಕ್ಷನ್‌-ಪಡೀಲ್‌ ರೈಲು ಮಾರ್ಗದಲ್ಲಿ ಹಳಿ ದ್ವಿಗುಣ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಫೆ. 21ರಂದು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ-ಸುಬ್ರಹ್ಮಣ್ಯ ರೋಡ್‌ ನಿಲ್ದಾಣ- ಮಂಗಳೂರು ಸೆಂಟ್ರಲ್‌ ನಿಲ್ದಾಣ ನಡುವಿನ ಸಂಚಾರ (ರೈ.ನಂ.: 56647/56647) ರದ್ದಾಗಿದೆ.

ಫೆ. 21 ಮತ್ತು 22ರಂದು ಮಡ್‌ಗಾಂವ್‌ ನಿಲ್ದಾಣ-ಮಂಗಳೂರು ಜಂಕ್ಷನ್‌-ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ಆಗಮಿಸುವ (ರೈ.ನಂ: 70105/70106) ಡೆಮೂ ರೈಲು ತೋಕೂರಿನಿಂದ ಮಂಗಳೂರು ಜಂಕ್ಷನ್‌ ವರೆಗೆ ಭಾಗಶಃ ರದ್ದಾಗಿದೆ. ಸಿಟಿಎಂಎಸ್‌-ಮಂಗಳೂರು ಜಂಕ್ಷನ್‌-ಸಿಟಿಎಂಎಸ್‌ ನಡುವೆ ಸಂಚರಿಸುವ (ರೈ.ನಂ.: 12133/12134) ಸಿಎಸ್‌ಟಿ ಎಕ್ಸ್‌ ಪ್ರಸ್‌ ರೈಲು ಸಂಚಾರವು ಸುರತ್ಕಲ್‌ ನಿಲ್ದಾಣದಿಂದ ಮಂಗಳೂರು ಜಂಕ್ಷನ್‌ ವರೆಗೆ ರದ್ದಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next