Advertisement

ರೈಲ್ವೆ ಫ್ಲಾಟ್‌ಫಾರ್ಮಲ್ಲಿ ಮದುವೆ, ಪಾಠಕ್ಕೆ ಸರ್ಕಾರದ ಅನುಮತಿ

03:45 AM Jan 11, 2017 | Harsha Rao |

ನವದೆಹಲಿ: ಇನ್ನು ರೈಲ್ವೇ ಫ್ಲಾಟ್‌ ಫಾರಂನಲ್ಲಿ ಮದುವೆ, ಪಾಠ ಮಾಡುವುದು ಕಂಡರೆ ಅಚ್ಚರಿಯಿಲ್ಲ. ಕಾರಣ ವಾರ್ಷಿಕ 2 ಸಾವಿರ ಕೋಟಿ ರೂ.ಗಳ ಆದಾಯದ ಗುರಿ ಇಟ್ಟು ರೈಲ್ವೇ ಇಲಾಖೆ ಇದಕ್ಕಾಗಿ ಹೊಸ ನೀತಿಯೊಂದನ್ನು ಹೊರತಂದಿದೆ. 

Advertisement

ಪ್ರಯಾಣ ದರ ಹೊರತಾದ ಆದಾಯ ನೀತಿ (ಎನ್‌ಎಫ್ಆರ್‌) ಅನ್ವಯ ಲೆವೆಲ್‌ ಕ್ರಾಸಿಂಗ್‌ ಮತ್ತು ರೈಲ್ವೇ ಮಾರ್ಗದುದ್ದಕ್ಕೂ ಜಾಹೀರಾತುಗಳ ಪ್ರದರ್ಶನಕ್ಕೆ ಅನುಮತಿ ನೀಡಲು ಯೋಜಿಸಲಾಗಿದೆ. ಎನ್‌ಎಫ್ಆರ್‌ ನೀತಿ ಅನ್ವಯ ವಿವಿಧ ಆದಾಯ ಮೂಲಗಳ ಶೋಧನೆ, ರೈಲು ಬ್ರ್ಯಾಂಡಿಂಗ್‌, ರೈಲು ರೇಡಿಯೋ ಯೋಜನೆ, ರೈಲುಗಳಲ್ಲಿ ಎಟಿಎಂ ಅಳವಡಿಕೆ ಮೂಲಕ ಬಾಡಿಗೆಯಿಂದ ಆದಾಯ, ಫ್ಲಾಟ್‌ಫಾರಂಗಳಲ್ಲಿ ಮದುವೆ, ಬೋಧನೆಗೆ ಅವಕಾಶ ಕಲ್ಪಿಸುವುದು ಇತ್ಯಾದಿಗಳೂ ಸೇರಿವೆ. 

ಕೇವಲ ಪ್ರಯಾಣಿಕ, ಸರಕು ಸಾಗಾಟಗಳಲ್ಲೇ ದೀರ್ಘಾವಧಿ ಆದಾಯಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಇತರ ಆದಾಯ ಮೂಲಗಳನ್ನು ಹುಡುಕುತ್ತಿದ್ದೇವೆ ಎಂದು ರೈಲ್ವೇ ಸಚಿವ ಸುರೇಶ್‌ ಪ್ರಭು ಹೊಸ ನೀತಿಯನ್ನು ಬಿಡುಗಡೆಗೊಳಿಸಿದ ಬಳಿಕ ಮಂಗಳವಾರ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next