Advertisement

ರೈಲು ವಸ್ತು ಸಂಗ್ರಹಾಲಯ: ಶುಲ್ಕ ಪಾವತಿಸಿ ಫೋಟೋ ತೆಗೆಯಿರಿ

05:50 PM Aug 22, 2021 | Team Udayavani |

ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ನಿರ್ಮಿಸಿರುವ ರೈಲು ವಸ್ತು ಸಂಗ್ರಹಾಲಯದ ಆವರಣದಲ್ಲಿ ಪ್ರವಾಸಿಗರು ಶುಲ್ಕ ಪಾವತಿಸಿ ಫೋಟೋ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದೆ.

Advertisement

ಮ್ಯೂಸಿಯಂ ಆವರಣದಲ್ಲಿ ಡಿಜಿಟಲ್‌ ಡಿಎಸ್‌ಎಲ್‌ಆರ್‌ ಕ್ಯಾಮರಾ ಮತ್ತು ವಿಶೇಷ ಕಾರ್ಯಕ್ರಮಗಳ ಫೋಟೋ ಶೂಟ್‌ಗಳಿಗೆ ಅವಕಾಶ ನೀಡಲಾಗಿದ್ದು, ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವವರು ಪೂರ್ವಾನುಮತಿ ಪಡೆದು, ನಿಗದಿತ ಶುಲ್ಕ ಪಾವತಿಸಿ ಪ್ರೊಫೆಷನಲ್‌ ಕ್ಯಾಮರಾ ಬಳಸಿ ಫೋಟೋ ತೆಗೆಯಬಹುದಾಗಿದೆ.

ಈ ಹೊಸ ನಿಯಮ ಆ.23ರಿಂದ ಜಾರಿಗೆ ಬರಲಿದ್ದು, ಪ್ರತಿ ಮಂಗಳವಾರ ವಸ್ತು ಪ್ರದರ್ಶನಾಲಯಕ್ಕೆ ರಜಾ ಇರಲಿದೆ. ಈ ವೇಳೆ ಸಂದರ್ಶಕರು ಮತ್ತು ವೀಕ್ಷಕರಿಗೆ ಪ್ರವೇಶ ಇರುವುದಿಲ್ಲ. ಆದರೆ ಪೂರ್ವಾನುಮತಿ ಪಡೆದವರು ಮಂಗಳವಾರ ಟ್ರೈಪಾಡ್‌ ಮತ್ತು ವಿಶೇಷ ದೀಪಗಳನ್ನು ಬಳಸಿ ವೃತ್ತಿಪರ ಛಾಯಾಚಿತ್ರ ಮತ್ತು ವಿಡಿಯೋಗ್ರಫಿ ತೆಗೆಯಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ:ಮಗಳ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದ ಸಿಎಂ

ಈ ಸಂಬಂಧ ಮಾಹಿತಿಯನ್ನು ಮ್ಯೂಸಿಯಂನ ಸ್ವಾಗತಕೇಂದ್ರದಲ್ಲಿ ಪಡೆಯಬಹುದು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ನೈಋತ್ಯ ರೈಲ್ವೆ ಒದಗಿಸಿರುವ ಈ ಸದಾವಕಾಶವನ್ನು ಸಾರ್ವಜನಿಕರು, ಪ್ರೇಕ್ಷಕರು ಮತ್ತು ಪ್ರವಾಸಿಗರು ಸದುಪಯೋಗಪಡಿಸಿಕೊಳ್ಳಬೇಕೆಂದು
ವಿಭಾಗೀಯ ರೆಲ್ವೆ ವ್ಯವಸ್ಥಾಪಕ ರಾಹುಲ್‌ ಅಗರ್ವಾಲ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next