Advertisement

36 ಲಕ್ಷ ಕಾರ್ಮಿಕರ ಪ್ರಯಾಣಕ್ಕೆ ಸಿದ್ಧತೆ

11:59 PM May 23, 2020 | Sriram |

ನವದೆಹಲಿ: ಮುಂದಿನ ಹತ್ತು ದಿನಗಳಲ್ಲಿ 19 ರಾಜ್ಯಗಳಿಂದ 2,600 ಶ್ರಮಿಕ್‌ ವಿಶೇಷ ರೈಲುಗಳಲ್ಲಿ ಒಟ್ಟು 36 ಲಕ್ಷ ವಲಸೆ ಕಾರ್ಮಿಕರನ್ನು 16 ರಾಜ್ಯಗಳಿಗೆ ಕರೆದುಕೊಂಡು ಹೋಗಲು ರೈಲ್ವೆ ಇಲಾಖೆ ವೇಳಾಪಟ್ಟಿ ಸಿದ್ಧಪಡಿಸಿದೆ ಎಂದು ಕೇಂದ್ರ ರೈಲ್ವೆ ಸಚಿವಾಲಯ ತಿಳಿಸಿದೆ. ಶನಿವಾರ ಮಾಧ್ಯಮ ಭಾಷಣದಲ್ಲಿ ರೈಲ್ವೆ ಸಚಿವಾಲಯವು ಈ ವಿಷಯವನ್ನು ಬಹಿರಂಗಪಡಿಸಿತು.

Advertisement

ಮೇ1ರಿಂದ ಇದುವರೆಗೆ ವಿವಿಧ ರಾಜ್ಯಗಳ ಒಳಗಡೆ ಹಾಗೂ ಹೊರಗಡೆಗೆ ಒಟ್ಟಾರೆ 45 ಲಕ್ಷ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಸುರಕ್ಷಿತವಾಗಿ ತಲುಪಿಸಲಾಗಿದೆ ಎಂದು ತಿಳಿಸಿದ್ದಲ್ಲದೆ ಜೂನ್‌ 1ರಿಂದ ಪ್ರಯಾಣಿಕರಿಗೆ ರೈಲ್ವೆ ಸೇವೆಗಳನ್ನು ಆರಂಭಿಸುವುದಾಗಿ ಸಚಿವಾಲಯ ಮಾಹಿತಿ ನೀಡಿದೆ.

ಇದೇ ವೇಳೆ ಶ್ರಮಿಕ್‌ ರೈಲಿನ ದರದ ಬಗೆಗಿನ ವಿವಾದವನ್ನು ರೈಲ್ವೆ ಸಚಿವಾಲಯ ಬಗೆಹರಿಸಿದೆ, “ಶ್ರಮಿಕ್‌ ರೈಲಿನ ಪ್ರಯಾಣದ ಶೇ.85ರಷ್ಟು ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ, ಶೇ.15ರಷ್ಟು ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳು ಭರಿಸಲಿವೆ. ವಲಸೆ ಕಾರ್ಮಿಕರಿಗಾಗಿ ರೈಲ್ವೆ ಸಚಿವಾಲಯ ಉಚಿತ ಆಹಾರ ವ್ಯವಸ್ಥೆಯನ್ನು ಮಾಡಿದೆ ಎಂದು ಸಚಿವಾಲ ಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

13 ದಿನದಲ್ಲಿ 66 ಲಕ್ಷ ಮಂದಿ ಪ್ರಯಾಣ
ವಲಸಿಗರು ಅವರವರ ಮನೆ ತಲುಪಲು ಸರ್ಕಾರ ರೈಲುಗಳ ವ್ಯವಸ್ಥೆ ಮಾಡಿದ ಬಳಿಕ ಏಪ್ರಿಲ್‌ 30ರಿಂದ ಮೇ 12ರವರೆಗೆ ಸುಮಾರು 66 ಲಕ್ಷಕ್ಕೂ ಅಧಿಕ ಸಂಖ್ಯೆಯ ಭಾರತೀಯರು ವಿವಿಧ ರಾಜ್ಯಗಳ ನಡುವೆ ಪ್ರಯಾಣಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಏ.30ರಿಂದ ಮೇ 6ರನಡುವೆ ಒಟ್ಟು 27.15 ಲಕ್ಷ ಭಾರತೀಯರು ಒಂದು ರಾಜ್ಯದಿಂದ ಮತ್ತೂಂದು ರಾಜ್ಯದ ನಡುವೆ ಸಂಚರಿಸಿದ್ದಾರೆ. ಇನ್ನೊಂದೆಡೆ ಮೇ 7ರಿಂದ 12ರ ನಡುವೆ, ಅಂದರೆ ಕೇವಲ ಆರು ದಿನಗಳ ಅವಧಿಯಲ್ಲಿ ಬರೋಬ್ಬರಿ 39.71 ಲಕ್ಷ ಮಂದಿ ವಿವಿಧ ರಾಜ್ಯಗಳ ನಡುವೆ ಪ್ರಯಾಣಿಸಿದ್ದಾರೆ. ಕೋವಿಡ್-19 ಲಾಕ್‌ಡೌನ್‌ನ ಪರಿಣಾಮ ದೇಶಾದ್ಯಂತ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ನಡುವೆ ಲಾಕ್‌ಡೌನ್‌ 3ರ ವೇಳೆ ವಲಸಿಗರನ್ನು ಅವರ ತವರಿಗೆ ಕಳುಹಿಸಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೂರಕ ವ್ಯವಸ್ಥೆ ಮಾಡಿದ್ದರಿಂದ ಎರಡು ವಾರಕ್ಕೂ ಕಡಿಮೆ ಅವಧಿಯಲ್ಲಿ ಇಷ್ಟೋಂದು ಜನ ಪ್ರಯಾಣಿಸಲು ಸಾಧ್ಯವಾಗಿದೆ ಎಂದು ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next