ಮೊರೆನಾ: ‘ಅತಿಕ್ರಮಣ ಮಾಡಿರುವ ಜಾಗವನ್ನು ತೆರವು ಮಾಡಿ’ ಎಂದು ಬಜರಂಗ ಬಲಿ ದೇವರಿಗೆ ರೈಲ್ವೇ ಇಲಾಖೆ ನೋಟಿಸ್ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಬಲ್‌ಗಢ್ ಪಟ್ಟಣದಲ್ಲಿರುವ ರೈಲ್ವೇ ಭೂಮಿ ಮೇಲಿನ ಅತಿಕ್ರಮಣವನ್ನು ತೆಗೆದುಹಾಕುವಂತೆ ಕೋರಿ ಭಜರಂಗ ಬಲಿ ಗೆ ರೈಲ್ವೆ ಇಲಾಖೆ ನೋಟಿಸ್ ನೀಡಿದ್ದು, ತಪ್ಪಿನ ಅರಿವಾದ ನಂತರ ಅದನ್ನು ಹಿಂಪಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಜರಂಗ ಬಲಿಯನ್ನು ಉದ್ದೇಶಿಸಿ ಫೆಬ್ರವರಿ 8 ರಂದು ನೀಡಲಾದ ನೋಟಿಸ್ ನಲ್ಲಿ ಏಳು ದಿನಗಳಲ್ಲಿ ಅತಿಕ್ರಮಣವನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ ಅಥವಾ ಕ್ರಮ ಎದುರಿಸಬೇಕಾಗುತ್ತದೆ. ರೈಲ್ವೆ ಇಲಾಖೆಯು ಕಟ್ಟಡವನ್ನು ತೆಗೆದುಹಾಕಲು ಕ್ರಮ ಕೈಗೊಂಡರೆ ಅತಿಕ್ರಮಣದಾರರು ವೆಚ್ಚವನ್ನು ಪಾವತಿಸಬೇಕಾಗುತ್ತದೆ ಎಂದು ಅದು ಹೇಳಿದೆ.
ದೇವರ ದೇವಸ್ಥಾನದಲ್ಲಿ ನೋಟಿಸ್ ಅಂಟಿಸಲಾಗಿದೆ. ನೋಟಿಸ್ ವೈರಲ್ ಆಗಿದ್ದು ನಂತರ ರೈಲ್ವೆ ಇಲಾಖೆ ತಪ್ಪನ್ನು ಸರಿಪಡಿಸಿ ದೇವಸ್ಥಾನದ ಅರ್ಚಕರ ಹೆಸರಿನಲ್ಲಿ ಹೊಸ ನೋಟಿಸ್ ನೀಡಿದೆ.
ಇದನ್ನೂ ಓದಿ:ಕಾಂತಾರ ಕೇಸ್: ಕೇರಳ ಪೊಲೀಸರ ಮುಂದೆ ಹಾಜರಾದ ರಿಷಬ್ ಶೆಟ್ಟಿ – ವಿಜಯ್ ಕಿರಂಗದೂರು
ಝಾನ್ಸಿ ರೈಲ್ವೇ ವಿಭಾಗದ ಪಿಆರ್ ಓ (ಸಾರ್ವಜನಿಕ ಸಂಪರ್ಕ ಅಧಿಕಾರಿ) ಮನೋಜ್ ಮಾಥುರ್ ಅವರು ಈ ಆರಂಭಿಕ ಸೂಚನೆಯನ್ನು ತಪ್ಪಾಗಿ ನೀಡಲಾಗಿದೆ. ಈಗ ದೇವಸ್ಥಾನದ ಅರ್ಚಕರಿಗೆ ಹೊಸ ನೋಟಿಸ್ ನೀಡಲಾಗಿದೆ ಎಂದರು.