ಬೆಳಗಾವಿ: ರಾಜ್ಯದಲ್ಲಿ ಬಸ್ ಸೇವೆ ಆರಂಭವಾದ ಬೆನ್ನಲ್ಲೇ ರೈಲು ಸಂಚಾರ ಪುನರಾರಂಭವಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನವಿ ಮೇರೆಗೆ ಮೇ 22ರಿಂದ ರಾಜ್ಯದಲ್ಲಿ ಪ್ರಾಯೋ ಗಿಕವಾಗಿ ಎರಡು ವಿಶೇಷ ರೈಲುಗಳ ಸಂಚಾರ ಆರಂಭಿಸುವುದಾಗಿ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.
ಬುಧವಾರ ಪತ್ರಕರ್ತರ ಜತೆ ಮಾತ ನಾಡಿದ ಅವರು, ಪ್ರಯಾಣಿಕರು ಕಡ್ಡಾಯ ವಾಗಿ ಆನ್‌ಲೈನ್‌ನಲ್ಲೇ ಟಿಕೆಟ್ ಬುಕ್ಕಿಂಗ್ ಮಾಡಬೇಕು. ಟಿಕೆಟ್ ಖಚಿತವಾದ ಬಳಿಕ ವಷ್ಟೇ ನಿಲ್ದಾಣಕ್ಕೆ ಬರಬೇಕು ಎಂದು ಹೇಳಿದರು. ಮಾಸ್ಕ್ ಮತ್ತು ಸಾಮಾ ಜಿಕ ಅಂತರ ಕಡ್ಡಾಯ ಎಂದು ಅವರು ಹೇಳಿದರು.
ಮೇ 22ರಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಹೊರಡುವ ರೈಲು ಸಂಜೆ 6.30 ಗಂಟೆಗೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ಬೆಳಗ್ಗೆ 8ಕ್ಕೆ ಹೊರಡುವ ರೈಲು ಸಂಜೆ 6.30ಕ್ಕೆ ಬೆಂಗಳೂರು ತಲುಪಲಿದೆ. ಅದೇ ರೀತಿ ಬೆಂಗಳೂರು-ಮೈಸೂರು ರೈಲು ಬೆಳಗ್ಗೆ 9.20ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12.45ಕ್ಕೆ ಮೈಸೂರು ತಲುಪಲಿದೆ ಎಂದರು.
ರಾಜ್ಯದ ಇತರ ಪ್ರದೇಶಗಳ ನಡುವೆ ರೈಲು ಓಡಾಟ ಕುರಿತು ಅನಂತರ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು.