Advertisement

60 ದಿನದಲ್ಲಿ ರೈಲ್ವೇ ಸೇತುವೆ ರಿಪೇರಿ !

08:58 AM Nov 20, 2017 | Team Udayavani |

ಹೊಸದಿಲ್ಲಿ: ಮನಸ್ಸಿದ್ದರೆ ಮಾರ್ಗ ಎಂಬ ಮಾತು ಇಲ್ಲಿ ನಿಜವಾಗಿದೆ. ರಿಪೇರಿಗೆ ಇನ್ನೆಷ್ಟು ತಿಂಗಳುಗಳು ಬೇಕೋ ಎನ್ನುವಂತಿದ್ದ ಮುರಿದು ಬಿದ್ದ ರೈಲ್ವೇ ಸೇತುವೆಯೊಂದನ್ನು ಸಮರೋಪಾದಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಮುಗಿಸಿ ತೋರಿಸಿದ್ದಾರೆ ರೈಲ್ವೇ ಸಿಬಂದಿ.

Advertisement

ಆಂಧ್ರಪ್ರದೇಶದ ಅರಕು ಕಣಿವೆ ಪ್ರದೇಶದಲ್ಲಿ ಅ.7ರಂದು ರೈಲು ಹಳಿಯ ಮೇಲೆ ಬೃಹತ್‌ ಗಾತ್ರದ ಬಂಡೆ ಬಿದ್ದು 28 ಮೀ. ಉದ್ದಕ್ಕೆ ಸೇತುವೆ ಮುರಿದು ಬಿತ್ತು. ಅದು ದೇಶದಲ್ಲಿ ಸದ್ಯ ಬಳಕೆಯಲ್ಲಿರುವ ಅತ್ಯಂತ ಎತ್ತರದ ಬ್ರಾಡ್‌ಗೆàಜ್‌ ರೈಲು ಮಾರ್ಗ. ಘಟನೆ ನಡೆದ 5 ದಿನಗಳ ಬಳಿಕ ದುರಸ್ತಿ ಕಾರ್ಯ ಶುರು ಮಾಡಿದ ರೈಲ್ವೇ ಇಲಾಖೆ ಕೇವಲ 60 ದಿನಗಳಲ್ಲಿ ಅದನ್ನು ಪೂರ್ಣಗೊಳಿಸಿದೆ.

50 ವರ್ಷಗಳ ಹಿಂದೆ ಈ ಮಾರ್ಗ ನಿರ್ಮಿಸಲಾಗಿತ್ತು. ಇದರ ಮರು ನಿರ್ಮಾಣವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಕಡಿದಾದ ಗುಡ್ಡದ ನಡುವೆಯೇ ಕಾಮಗಾರಿ ನಡೆಸಬೇಕಾಗಿತ್ತು ಮತ್ತು ಮುರಿದ ಸ್ಥಳದಲ್ಲಿಯೇ ಇರುವ 8 ಡಿಗ್ರಿ ಕೋನದಲ್ಲಿ ಜಲಪಾತ ಹರಿವ ದಿಕ್ಕನ್ನು ತಾತ್ಕಾಲಿಕವಾಗಿ ಬದಲಿಸುವುದೂ ಸವಾ ಲಾಗಿತ್ತು. ಈಗಾಗಲೇ ಹೆಚ್ಚಿನ ಕಾಮಗಾರಿ ಮುಕ್ತಾಯವಾಗಿದ್ದು, ಡಿ.12ರಂದು ಕೆಲಸ ಪೂರ್ತಿಯಾಗಲಿದೆ. ದಿನದ 24 ಗಂಟೆ ಕಾಲ ಡ್ರೋನ್‌ ಕೆಮರಾ ಮತ್ತು ಇತರ ಅತ್ಯಾಧುನಿಕ ವ್ಯವಸ್ಥೆ ಮೂಲಕ ಕೆಲಸದ ಮೇಲೆ ನಿಗಾ ವಹಿಸಲಾಗುತ್ತಿದೆ. 445 ಕಿಮೀ ದೂರದ ಕೊತವಲಸದಿಂದ ಕಿರಾಂದುಲ್‌ ನಡುವಿನ ರೈಲ್ವೇ  ಮಾರ್ಗವನ್ನು 1960ರಲ್ಲಿ ಜಪಾನ್‌ ತಂತ್ರಜ್ಞಾನ ಮತ್ತು ಹಣಕಾಸಿನ ನೆರವಿನಿಂದ ಆರಂಭಿಸಲಾಯಿತು. ಈ ಲೈನ್‌ನಲ್ಲಿ 58 ಸುರಂಗ ಮಾರ್ಗಗಳು, 84 ದೊಡ್ಡ ಸೇತುವೆಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next