ನವದೆಹಲಿ: ರೈಲ್ವೆ ಇಲಾಖೆಯ ಭಾರತೀಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಿಗಮ (ಐಆರ್‌ಎಸ್‌ಡಿಸಿ)ವನ್ನು ಸ್ಥಗಿತಗೊಳಿಸಿರುವುದಾಗಿ ಸೋಮವಾರದಂದು ಇಲಾಖೆ ಆದೇಶ ಹೊರಡಿಸಿದೆ.
ವಿವಿಧ ಸಚಿವಾಲಯಗಳ ಸರ್ಕಾರಿ ಸಂಸ್ಥೆಗಳನ್ನು ವಿಲೀನಗೊಳಿಸಲು ಆರ್ಥಿಕ ಸಚಿವಾಲಯದಿಂದ ಶಿಫಾರಸು ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಐಆರ್‌ಎಸ್‌ಡಿಸಿ ನಿರ್ವಹಣೆಯಲ್ಲಿದ್ದ ರೈಲ್ವೆ ನಿಲ್ದಾಣಗಳನ್ನು ಆಯಾ ವಲಯ ರೈಲ್ವೆಯ ನಿರ್ವಹಣೆಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.
2012ರ ಮಾರ್ಚ್‌ನಲ್ಲಿ ಆರಂಭಿಸಲಾದ ಐಆರ್‌ಎಸ್‌ಡಿಸಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಜೊತೆಗೆ, ಮುಂಬೈನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದ ಪುನಾರಭಿವೃದ್ಧಿಗೆ ಬಿಡ್ಡಿಂಗ್ ಪ್ರಕ್ರಿಯೆಯನ್ನೂ ನಡೆಸಿತ್ತು.
ಇದನ್ನೂ ಓದಿ:100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ
ಇತ್ತೀಚೆಗೆ ಬೆಂಗಳೂರಿನ ಕೆಎಸ್‌ಆರ್ ರೈಲ್ವೆ ನಿಲ್ದಾಣ ಮತ್ತು ಚಂಡೀಗಢದ ನಿಲ್ದಾಣದಲ್ಲಿ ರೈಲ್ವೆ ಆರ್ಕೇಡ್ ನಿರ್ಮಾಣಕ್ಕೆ ಬಿಡ್‌ಗೆ ಆಹ್ವಾನ ನೀಡಿತ್ತು.
ರೈಲ್ವೆ ಇಲಾಖೆಯು ಈ ಹಿಂದೆ ಸೆ.7ರಂದು ಇಲಾಖೆಯ ಐಆರ್‌ಒಎಎಫ್ ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸಿತ್ತು.