Advertisement

Railway: ಎಸಿ ಬೋಗಿಗಳ ಬದಲು ಸಾಮಾನ್ಯ ಬೋಗಿ ಸೇರ್ಪಡೆ ಹೆಚ್ಚಳಕ್ಕೆ ಕ್ರಮ: ರೈಲ್ವೇ ಸಚಿವ

03:39 AM Dec 05, 2024 | Team Udayavani |

ಹೊಸದಿಲ್ಲಿ: ರೈಲುಗಳಲ್ಲಿ ಹವಾನಿಯಂತ್ರಿತ (ಎ.ಸಿ.) ಬೋಗಿಗಳ ಸೇರ್ಪಡೆಯನ್ನು ಹೆಚ್ಚಿಸುವುದಕ್ಕಿಂತ ಸಾಮಾನ್ಯ ಬೋಗಿಗಳ ಸಂಖ್ಯೆ ಹೆಚ್ಚಿಸಲು ರೈಲ್ವೇ ಇಲಾಖೆ ಮುಂದಾಗಿದೆ. ಮಾಸಾಂ­­ತ್ಯದ ಒಳಗಾಗಿ 1,000 ಸಾಮಾನ್ಯ ಬೋಗಿಗಳನ್ನು ಸೇರ್ಪಡೆ ಮಾಡಲು ಗುರಿ ಹಾಕಿಕೊಳ್ಳಲಾಗಿದೆ ಎಂದು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಮಾತನಾಡಿದ ಅವರು, ಪ್ರತೀ ಟಿಕೆಟ್‌ ಮೇಲೆ ಶೇ.46ರಷ್ಟು ರಿಯಾ­ಯಿ­ತಿಯೊಂದಿಗೆ ತನ್ನ ಎಲ್ಲಾ  ವರ್ಗದ ಪ್ರಯಾಣಿಕರಿಗೆ ಪ್ರತಿವರ್ಷ ಒಟ್ಟು 56,993 ಕೋಟಿ ರೂ.ಗಳ ಸಬ್ಸಿಡಿ ನೀಡುತ್ತಿದೆ. ಪ್ರತೀ ರೈಲ್ವೇ ಟಿಕೆಟ್‌ನ ಬೆಲೆ 100 ರೂ.ಗಳಾಗಿದ್ದರೆ, 54 ರೂ. ಪಡೆಯಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next