Advertisement

ಮಂಗಳೂರು : ಅನಧಿಕೃತ ರೈಲ್ವೇ ಆ್ಯಪ್‌ ನಂಬಿ ಬೇಸ್ತು ಬಿದ್ದ ಪ್ರಯಾಣಿಕರು!

09:31 AM Nov 03, 2022 | Team Udayavani |

ಮಂಗಳೂರು : ಕೊಂಕಣ ರೈಲು ಮಾರ್ಗದಲ್ಲಿ ಈಗ ಎಲ್ಲ ರೈಲುಗಳು ಮಾಮೂಲಿ ವೇಳಾಪಟ್ಟಿಯಂತೆ ಸಂಚಾರ ಆರಂಭಿಸಿದ್ದರೂ ಕೆಲವು ಅನಧಿಕೃತ ರೈಲ್ವೇ ಆ್ಯಪ್‌ ಬಳಸುವ ಗ್ರಾಹಕರಿಗೆ ಕೆಲವು ರೈಲುಗಳು ತಪ್ಪಿ ಹೋಗುತ್ತಿರುವುದಾಗಿ ತಿಳಿದುಬಂದಿದೆ.

Advertisement

ಈಗಾಗಲೇ ರೈಲುಗಳು ಮಾನ್ಸೂನ್‌ ವೇಳಾಪಟ್ಟಿ ಅವಧಿ ಮುಗಿದ ಬಳಿಕ ಮಾಮೂಲಿ ವೇಳಾಪಟ್ಟಿಯನ್ವಯ ಸಂಚರಿಸುತ್ತಿವೆ. ಆದರೆ ಕೆಲವೊಂದು ಅನಧಿಕೃತ ರೈಲ್ವೇ ಆ್ಯಪ್‌ಗ್ಳು ಮಾತ್ರ ಹಳೆಯ ವೇಳಾಪಟ್ಟಿಯನ್ನೇ ತೋರಿಸುತ್ತಿರುವ ಕಾರಣ ಅವುಗಳನ್ನು ಬಳಸಿದ ಕೆಲವು ಪ್ರಯಾಣಿಕರಿಗೆ ರೈಲುಗಳು ತಪ್ಪಿಹೋಗುತ್ತಿವೆ.

ನ. 2ರಂದು ದಿಲ್ಲಿಯಿಂದ ತಿರುವನಂತಪುರ ಕಡೆಗೆ ತೆರಳುವ ರಾಜಧಾನಿ ಎಕ್ಸ್‌ಪ್ರೆಸ್‌ ಮಾಮೂಲಿ ವೇಳಾಪಟ್ಟಿಯಂತೆ ಮಧ್ಯಾಹ್ನ 12.10ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೋಗಿದೆ. ಅನಧಿಕೃತ ಆ್ಯಪ್‌ ಬಳಸಿದ ಪ್ರಯಾಣಿಕರು ಮಾನ್ಸೂನ್‌ ವೇಳಾಪಟ್ಟಿಯನ್ವಯ ಮಧ್ಯಾಹ್ನ 2.15ಕ್ಕೆ ನಿಲ್ದಾಣಕ್ಕೆ ಆಗಮಿಸುವಾಗ ರೈಲು ತೆರಳಿರುವುದು ತಿಳಿದುಬಂದಿದೆ.

ಇಂತಹ ಪ್ರಕರಣಗಳು ಸಂಭವಿಸುವ ಕಾರಣದಿಂದ ಪ್ರಯಾಣಿಕರು ಪರಿಷ್ಕೃತ ವೇಳಾಪಟ್ಟಿಯನ್ನು ನೋಡಿ ಸಮಯ ದೃಢಪಡಿಸಿಕೊಳ್ಳಬೇಕು, ಅದಕ್ಕಾಗಿ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (ಎನ್‌ಟಿಇಎಸ್‌)ಯನ್ನು ವೆಬ್‌ ಅಥವಾ ಆ್ಯಪ್‌ ಮೂಲಕ ಅಥವಾ 139 ಸಹಾಯವಾಣಿ ನೆರವು ಪಡೆದುಕೊಳ್ಳಬಹುದು. ಈಗಲೂ ಮಾನ್ಸೂನ್‌ ವೇಳಾಪಟ್ಟಿಯನ್ನೇ ತೋರಿಸುತ್ತಿರುವ ಆ್ಯಪ್‌ಗ್ಳನ್ನು ನೋಡಿ ಮೋಸಹೋಗಬಾರದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಇಂದು ವೆಸ್ಟ್‌ಕೋಸ್ಟ್‌ ವಿಳಂಬ
ತಲಶೆರಿ ಎಟಕ್ಕೋಟ್‌ ರೈಲು ನಿಲ್ದಾಣದ ಮಧ್ಯೆ ಹೊಸ ಸೇತುವೆಯ ಕಾಮಗಾರಿ ಇರುವುದರಿಂದ ನ. 3ರಂದು ನಂ. 22638 ಮಂಗಳೂರು ಸೆಂಟ್ರಲ್‌ – ಚೆನ್ನೈ ಸೆಂಟ್ರಲ್‌ ವೆಸ್ಟ್‌ಕೋಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿಯಲ್ಲಿ ವ್ಯತ್ಯಾಸ ಇರಲಿದೆ. ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 11.45ರ ಬದಲು 3.30 ಗಂಟೆ ತಡವಾಗಿ ನ. 4ರಂದು ಮುಂಜಾನೆ 3.15ಕ್ಕೆ ತೆರಳಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

ಇದನ್ನೂ ಓದಿ : ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಮಡಿಕೇರಿಯ ತುಫೈಲ್‌ಗೆ ತೀವ್ರ ಶೋಧ

Advertisement

Udayavani is now on Telegram. Click here to join our channel and stay updated with the latest news.

Next