Advertisement
ರೈತರ ಸಾಲಮನ್ನಾ, ಶಾಶ್ವತ ಕುಡಿಯುವ ನೀರು, ಸ್ವಾಮಿನಾಥನ್ ವರದಿ, ಬೆಳೆಗಳಿಗೆ ಬೆಂಬಲ ಬೆಲೆ, ಪೆಟ್ರೋಲ್, ಡೀಸೆಲ್ ದರದ ನಿಯಂತ್ರಣ ಹಾಗೂ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಗಳ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ನಿರಾಸೆ ಮೂಡಿಸಿದೆ.
Related Articles
Advertisement
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಕೀರ್ಣ ಮತ್ತು ಜಿಲ್ಲಾ ಕೇಂದ್ರವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಹೆಚ್ಚಿನ ಯೋಜನೆ ಇದ್ದ ಭರವಸೆ ಇದ್ದ ಜನರಿಗೆ ತಣ್ಣಿರು ಎರಚುವಂತಾಗಿದೆ.
ರೇಷ್ಮೆ ಆಮದು ಸುಂಕ ಹೆಚ್ಚಿನ ಹೆಚ್ಚು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು ಮಾಡದೇ ಇರುವುದು ಬೇಸರ ತಂದಿದೆ. ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಬಗ್ಗೆ ಘೋಷಣೆ ಮಾಡದಿರುವುದು. ರೈತ ವಿರೋಧಿ ನೀತಿ ಆಗಿದೆ.-ಕಲ್ಯಾಣ್‌ಕುಮಾರ್ ಬಾಬು, ರೇಷ್ಮೆ ಹಿತ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ರೈತರು ಸಂಕಷ್ಟದಲ್ಲಿದ್ದು ಬರಗಾಲ ಹಾಗೂ ನೀರಿನ ಸಮಸ್ಯೆಯಿಂದ ಪರಿತಪಿಸುತ್ತಿದ್ದರೂ ಸಹ ರೈತ ಸಮಸ್ಯೆಗೆ ಸ್ಪಂದಿಸದೆ ರೈತರಿಗೆ ಅನಾಕೂಲವಾದ ಬಜೆಟ್ ಆಗಿದೆ. ರೈತರ ಸಾಲ ಮನ್ನಾ, ಸ್ವಾಮಿನಾಥನ್ ವರದಿ ಸಂಬಂಧಿಸಿದಂತೆ ವಿಷಯವೇ ಪ್ರಸ್ತಾ ಪವಾಗಿಲ್ಲ ರೈತರ ಆತ್ಮಹತ್ಯೆ ತಡೆಯುವಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ. ಕೃಷಿಗೆ ಶಾಶ್ವತವಾಗಿ ಅನುಕೂಲವಾಗುವ ಕಾರ್ಯಕ್ರಮಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ.
-ಬಿದಲೂರು ಆರ್.ರಮೇಶ್, ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರೈತರ, ಬಡ ವರ್ಗದ ಜನರಿಗೆ ಈ ಬಜೆಟ್‌ನಿಂದ ಯಾವುದೇ ಉಪಯೋಗವಿಲ್ಲ. ಇದು ತೃಪ್ತಿದಾಯಕ ಬಜೆಟ್ ಅಲ್ಲ. ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕೇವಲ ಪತ್ರಕ್ಕೆ ಸೀಮಿತವಾಗಿದೆ. ಈ ಮುಂಗಡ ಪತ್ರ ಉಳ್ಳವರಿಗೆ ಕೈಗಾರಿಕೋದ್ಯಮಿಗಳ ಪರ ಬಜೆಟ್ ಆಗಿದೆ.
-ಕೆ.ಸಿ.ಮಂಜುನಾಥ್, ಜಿಪಂ ಸದಸ್ಯ ಪೆಟ್ರೋಲ್, ಡೀಸೆಲ್‌ಗಳ ಬೆಲೆ ಒಂದು ರೂ. ಸೆಸ್ಕ್ ಹೆಚ್ಚಿಸಿ ಶ್ರೀಮಂತ ಬಡವರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಇಂದ ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. 5 ವರ್ಷದಲ್ಲಿ ಮಾಡದ ಸಾಧನೆಯನ್ನು ಈಗ ಹೇಗೆ ಮಾಡುತ್ತಾರೆ.
-ಬಿ.ಮುನೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರೈತರ, ಬಡವರ ದೀನ ದಲಿತರ ಹಿಂದುಳಿದ ವರ್ಗದವರ ಹಾಗೂ ಎಲ್ಲಾ ಸಾಮಾನ್ಯ ಜನರ ಪರವಾದ ಬಜೆಟ್ ಆಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದೆ. ಗ್ರಾಮೀರ ಬದುಕನ್ನು ಹಸನು ಮಾಡುವ ಬಜೆಟ್ ಆಗಿದೆ.
-ಬಿ.ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ ಸಾಮಾನ್ಯರ ಮತ್ತು ರೈತರ ಪರ ಬಜೆಟ್ ಆಗಿದೆ. ಕಿಸಾನ್ ಸಮ್ಮಾನ್ ಯೋಜನೆಗೆ 86 ಸಾವಿರ ಕೋಟಿ ಮೀಸಲಿಟ್ಟಿದೆ. 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ 3 ಸಾವಿರ ಪಿಂಚಣಿ, ಸ್ವತ್ಛ ಭಾರತ್ ಯೋಜನೆ ಅಡಿಯಲ್ಲಿ 9.5 ಕೋಟಿ ಶೌಚಾಲಯ ನಿರ್ಮಾಣ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ 5 ವರ್ಷಗಳಲ್ಲಿ 1,25,000 ಕಿ.ಲೋ. ರಸ್ತೆ ಅಭಿವೃದ್ಧಿ ಹಲವಾರು ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ರಾಷ್ಟ್ರದ ಮಾದರಿ ಬಜೆಟ್ ಆಗಿದೆ.
-ಎಚ್.ಎಂ.ರವಿಕುಮಾರ್, ತಾಲೂಕು ಕೃಷಿಕ ಸಮಾಜದ ನಿರ್ದೇಶಕ