Advertisement

ವಿವಿಧೆಡೆ ಅನಧಿಕೃತ ಕ್ಲಿನಿಕ್‌ ಮೇಲೆ ದಾಳಿ

12:20 PM May 10, 2021 | Team Udayavani |

ಕೊಪ್ಪಳ: ಕೋವಿಡ್ ಸೋಂಕು ಉಲ್ಬಣಕ್ಕೆ ನಕಲಿ ವೈದ್ಯರೇ ಕಾರಣ ಎಂದು ಜಿಲ್ಲಾಡಳಿತ ನಿರ್ಧರಿಸಿ ವಿವಿಧೆಡೆ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸುತ್ತಿದ್ದು, ಕೊಪ್ಪಳ ತಾಲೂಕಿನ ಅಳವಂಡಿಯ ಐದು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗಿದೆ.

Advertisement

ಬಹುಪಾಲು ಸೋಂಕಿತರು ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸಿ ಚಿಕಿತ್ಸೆ ಪಡೆಯದೇ ಸ್ಥಳೀಯ ಅನಧಿಕೃತ ಕ್ಲಿನಿಕ್‌ ಹಾಗೂ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ತೀವ್ರ ಏರುಪೇರಾದ ವೇಳೆಗೆ ಕೊನೆಯ ಹಂತಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ವೇಳೆ ಸಾವು-ನೋವು ಹೆಚ್ಚು ಸಂಭವಿಸುತ್ತಿವೆ ಎನ್ನುವ ಮಾಹಿತಿ ಅರಿತ ಜಿಲ್ಲಾಡಳಿತವು ಕೆಲ ಅನಧಿಧೀಕೃತ ಕ್ಲಿನಿಕ್‌ಗಳ ಮೇಲೂ ದಾಳಿ ನಡೆಸುತ್ತಿದೆ.

ತಾಲೂಕಿನ ಪೈಕಿ ಅಳವಂಡಿಯ ಐದು ಕ್ಲಿನಿಕ್‌ಗಳ ಮೇಲೆ ತಾಲೂಕು ಆರೋಗ್ಯ ಇಲಾಖೆ, ಪೊಲೀಸರ ಅಧಿ ಕಾರಿಗಳ ತಂಡವು ದಾಳಿ ನಡೆಸಿದೆ. ಐವರು ಆಯುರ್ವೇದ ವೈದ್ಯರಾಗಿದ್ದು, ಅದರಲ್ಲಿ ಇಬ್ಬರು ವೈದ್ಯರು ಆರೋಗ್ಯ ಇಲಾಖೆಯ ಅನುಮತಿ ಪಡೆಯದೇ ಕ್ಲಿನಿಕ್‌ ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರಿಗೆ ಕೂಡಲೇ ಅನುಮತಿ ಪಡೆಯುವಂತೆಯೂ ನೋಟಿಸ್‌ ನೀಡಲಾಗಿದೆ.

ನಾಲ್ವರು ನಕಲಿ ವೈದ್ಯರ ವಿರುದ್ಧ ಕೇಸ್‌ ಕುಷ್ಟಗಿ:

ವೈದ್ಯಕೀಯ ಪದವಿ ಪಡೆಯದೇ, ಭಾರತೀಯ ವೈದ್ಯಕೀಯ ಕಾಯ್ದೆಯಲ್ಲಿ ನೋಂದಣಿಯಾಗದೇ ವೈದ್ಯಕೀಯ ಸೇವೆ ನೀಡುತ್ತಿದ್ದ ತಾಲೂಕಿನ ನಾಲ್ವರು ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಹಶೀಲ್ದಾರ್‌ ಎಂ. ಸಿದ್ದೇಶ, ತಾಲೂಕು ವೈದ್ಯಾ ಧಿಕಾರಿ ಡಾ| ಆನಂದ ಗೋಟೂರು ನೇತೃತ್ವದಲ್ಲಿ ನಕಲಿ ವೈದ್ಯಕೀಯ ಕ್ಲಿನಿಕ್‌ ಮೇಲೆ ದಾಳಿ ನಡೆಸಲಾಯಿತು.

Advertisement

ತಾವರಗೇರಾದ ವಿಜಯಲಕ್ಷ್ಮೀ ಕ್ಲಿನಿಕ್‌ನ ನಕಲಿ ವೈದ್ಯ ಶರಣಪ್ಪ ಕೂಡ್ಲೆಪ್ಪ ರೊಟ್ಟಿ, ಸಂಗಮೇಶ್ವರ ಕ್ಲಿನಿಕ್‌ನ ವೈದ್ಯ ರಮೇಶ ಶರಣಪ್ಪ ಬಂಡರಗಲ್ಲ, ಗುರುಕೃಪಾ ಕ್ಲಿನಿಕ್‌ ವೈದ್ಯ ರಫಿಕ್‌ ಖಾಜಾಹುಸೇನ್‌ ತಹಶೀಲ್ದಾರ್‌, ದೋಟಿಹಾಳದ ಕಲ್ಯಾಣಮಠ ಕ್ಲಿನಿಕ್‌ನ ಸಂತೋಷ ಭೋಜಪ್ಪ ಬಾಪರಿ ವಿರುದ್ಧ ದೂರು ದಾಖಲಾಗಿದೆ. ಈ ನಕಲಿ ವೈದ್ಯರು ಭಾರತೀಯ ವೈದ್ಯಕೀಯ ಕಾಯ್ದೆಯನ್ವಯ ನೋಂದಣಿಯಾಗದೇ ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ಸ್ಪಷ್ಟ ಉಲ್ಲಂಘನೆ ಹಿನ್ನೆಲೆಯಲ್ಲಿ ಹಾಗೂ ಕೊರೊನಾ ವೈರಸ್‌ ಹರಡುವುದು ಗೊತ್ತಿದ್ದರೂ, ನಿರ್ಲಕ್ಷÂ ವಹಿಸಿದ ಹಿನ್ನೆಲೆಯಲ್ಲಿ ಕುಷ್ಟಗಿ ಹಾಗೂ ತಾವರಗೇರಾ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next