ದಾವಣಗೆರೆ: ನಕಲಿ ಸ್ಯಾನಿಟೈಸರ್ ಪ್ಯಾಕಿಂಗ್ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಕಾಸ್ಮೋ ಸೆಂಟರ್ ಎಂಬ ಹೆಸರಿನ ಕಾಸ್ಮೆಟಿಕ್ಸ್ ಅಂಗಡಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 200ಕ್ಕೂ ಹೆಚ್ಚು ನಕಲಿ ಸ್ಯಾನಿಟೈಸರ್ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರು ನೀಡಿದ ಸುಳಿವಿನ ಆಧಾರದ ಮೇಲೆ ಶುಕ್ರವಾರ ಔಷಧ ನಿಯಂತ್ರಣ ಇಲಾಖೆ ವತಿಯಿಂದ ಜಂಟಿಯಾಗಿ ಈ ದಾಳಿ ನಡೆಸಿದ್ದಾರೆ.
ದಾವಣಗೆರೆ ನಗರದ ಕಾಯಿಪೇಟೆ ಬಸವೇಶ್ವರ ದೇವಸ್ಥಾನ ಬಳಿಯ ಕಾಸ್ಮೋ ಸೆಂಟರ್ ಎಂಬ ಅಂಗಡಿಯಲ್ಲಿ ನಕಲಿ ಸ್ಯಾನಿಟೈಸರ್ ಗಳನ್ನು ಪ್ಯಾಕ್ ಮಾಡಿ, ಮಾರಾಟ ಮಾಡಲಾಗುತ್ತಿತ್ತು.
ಇದನ್ನೂ ಓದಿ:ಕೋವಿಡ್-19 ವಾರಿಯರ್ಸ್ ಮೃತರಾದರೆ ಹುತಾತ್ಮರೆಂದು ಕರೆಯಿರಿ: ಡಾ. ಸಿ.ಎನ್.ಮಂಜುನಾಥ
ಸುಮಾರು 200 ವಿವಿಧ ಗಾತ್ರದ ಸ್ಯಾನಿಟೈಸರ್ ಬಾಟಲಿಗಳು, ನಕಲಿ ಲೇಬಲ್ ಗಳು, ಸ್ಯಾನಿಟೈಸರ್ ಲಿಕ್ವಿಡ್, ಪ್ಲಾಸ್ಟಿಕ್ ಕ್ಯಾನ್ ಗಳನ್ನು ಔಷಧ ನಿಯಂತ್ರಣ ಇಲಾಖೆ ವಶಪಡಿಸಿಕೊಂಡಿದೆ.