ರಾಯಚೂರು: 2009ರಲ್ಲಿ ಜಿಲ್ಲೆಯನ್ನು ಕಾಡಿದ್ದ ಭೀಕರ ನೆರೆಗೆ ನಲುಗಿ ಹೋಗಿದ್ದ ಸಂತ್ರಸ್ತರಿಗೆ ಆಗಿನ ಬಿಜೆಪಿ ಸರ್ಕಾರ ಪುನರ್ವಸತಿ ಕಲ್ಪಿಸಿತ್ತು. ಆದರೆ, ಇಂದು ಆ ಮನೆಗಳಲ್ಲಿ ಅನ್ಯರು ವಾಸವಾಗಿದ್ದು, ನಡುಗಡ್ಡೆ ಜನ ಮಾತ್ರ ಅಲ್ಲಿಂದ ಕಾಲ್ಕಿತ್ತಿಲ್ಲ.
Advertisement
ತಾಲೂಕಿನ ಕುರ್ವಕುಲಾ ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶವಾಗಿದೆ. ಹಿಂದೆ ಬಂದಿದ್ದ ನೆರೆಗೆ ಕುರ್ವಕುಲಾ ನಲುಗಿ ಹೋಗಿತ್ತು. ಇದನ್ನರಿತ ಆಗಿನ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತಾ ಅಮೃತಾನಂದಮಯಿ ಅವರ ಆಶ್ರಮದ ನೆರವಿನೊಂದಿಗೆ ಆತ್ಕೂರು ಬಳಿ 180ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಆದರೆ, ಈಗ ಆ ಮನೆಗಳಲ್ಲಿ ಬಹುತೇಕ ಖಾಲಿ ಬಿದ್ದು ಹಾಳಾಗುತ್ತಿದ್ದರೆ, ಇನ್ನೂ ಅನೇಕ ಮನೆಗಳಲ್ಲಿ ಆತ್ಕೂರು ಗ್ರಾಮದವರು ಬಂದು ಸೇರಿಕೊಂಡಿದ್ದಾರೆ.
Related Articles
Advertisement
ಸ್ಥಳಾಂತರಕ್ಕಿಂತ ಸೇತುವೆ ನಿರ್ಮಿಸಿ: ಇದು ಜುರಾಲಾ ಜಲಾಶಯದ ನಿರಾಶ್ರಿತ ತಾಣ. ಹೀಗಾಗಿ ಈ ಹಿಂದೆಯೇ ಆಂಧ್ರ ಸರ್ಕಾರ ಇಲ್ಲಿಗೆ ಸೇತುವೆ ನಿರ್ಮಿಸಲು ಜಿಲ್ಲಾಡಳಿತ ಅಗತ್ಯ ಅನುದಾನ ಮಂಜೂರು ಮಾಡಿದೆ. ಈಗಾಗಲೇ ಸೇತುವೆ ಕಾಮಗಾರಿ ಕೂಡ ಅರ್ಧ ಮುಗಿದಿದ್ದು, ಸ್ಥಗಿತಗೊಂಡಿದೆ. ನಮ್ಮನ್ನು ಇಲ್ಲಿಂದ ಸ್ಥಳಾಂತರಿಸುವುದಕ್ಕಿಂತ ಆ ಸೇತುವೆ ಕಾಮಗಾರಿ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂಬುದು ಅಲ್ಲಿನ ನಿವಾಸಿಗಳ ಒತ್ತಾಯ. ಆದರೆ, ಆಗಿನ ಅಂದಾಜು ಪಟ್ಟಿಗೂ ಈಗಿನ ಮೊತ್ತಕ್ಕೂ ತಾಳೆ ಆಗದ ಕಾರಣ ಆ ಸೇತುವೆ ಕಾಮಗಾರಿ ನಿರ್ವಹಣೆಗೆ ಯಾವುದೇ ಸಂಸ್ಥೆಗಳು ಮುಂದೆ ಬರುತ್ತಿಲ್ಲ ಎಂಬುದು ಅಧಿಕಾರಿಗಳ ವಿಶ್ಲೇಷಣೆ.
ಕುರ್ವಕುಲಾ ಜನರ ಪುನರ್ವಸತಿಗಾಗಿ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಆದರೆ, ಪಂಚಾಯಿತಿಗಳಲ್ಲಿ ಅವುಗಳ ದಾಖಲಾತಿ ಸರಿಯಾಗಿ ಮಾಡಿಲ್ಲ. ಅಲ್ಲದೇ, ನಮಗೆ ಸಂಚಾರಕ್ಕೆ ಸೇತುವೆ ನಿರ್ಮಿಸಿಕೊಟ್ಟರೆ ಸಾಕಷ್ಟು ಅನುಕೂಲವಾಗಲಿದೆ. ಈಗ ಅಲ್ಲಿ ಆತ್ಕೂರು ಗ್ರಾಮದವರು ತಾತ್ಕಾಲಿಕವಾಗಿ ಇರುತ್ತೇವೆ ಎಂದು ಕೇಳಿಕೊಂಡಿದ್ದಕ್ಕೆ ಕೆಲವರು ಒಪ್ಪಿಗೆ ಸೂಚಿಸಿದ್ದಾರೆ.•ಕುರುಮಪ್ಪ,
ಕುರ್ವಕುಲಾ ನಿವಾಸಿ