Advertisement

ಬೇಕಾಬಿಟ್ಟಿ ಕಾಮಗಾರಿಗೆ ಸಿಡಿಮಿಡಿ

03:20 PM Aug 28, 2019 | Team Udayavani |

ರಾಯಚೂರು: ಜಿಲ್ಲಾ ಕ್ರೀಡಾಂಗಣ ಕಾಮಗಾರಿಯನ್ನು ಬೇಕಾಬಿಟ್ಟಿ ಮಾಡಿರುವ ಜತೆಗೆ ನಿಗದಿತ ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಳ್ಳದ್ದಕ್ಕೆ ಅಧಿಕಾರಿಗಳು, ಗುತ್ತಿಗೆದಾರರನ್ನು ಕಲಬುರಗಿ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್‌ ಮಂಗಳವಾರ ತರಾಟೆಗೆ ತೆಗೆದುಕೊಂಡರು.

Advertisement

ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿದ ಅವರು, ಎಲ್ಲ ಕಡೆ ಸಿಂಥೆಟಿಕ್‌ ಟ್ರ್ಯಾಕ್‌ಗಳನ್ನು ನಿರ್ಮಿಸುತ್ತಿದ್ದರೆ. ನೀವಿನ್ನು ಹಳೇ ಕಾಲದಲ್ಲೇ ಬೂದಿ ಬಳಸಿ ನಿರ್ಮಿಸಿದ್ದೀರಿ. ಇದನ್ನು ಮಾಡಿದ ಗುತ್ತಿಗೆದಾರರಿಗೆ ಹಣ ಪಾವತಿಸದಂತೆ ಸೂಚಿಸಿದರು.

ಕಾಲಾವಧಿ ಮುಗಿದರೂ ಇನ್ನೂ ಕೆಲಸ ಮುಗಿದಿಲ್ಲ ಎಂದರೆ ಏನರ್ಥ. ನಿಮಗೆ ದುಡ್ಡಿನ ಕೊರತೆ ಇದ್ದರೆ ಹೇಳಬೇಕು. ನಮ್ಮಲ್ಲೂ ಹಣವಿಲ್ಲವಾದರೆ ಸರ್ಕಾರಕ್ಕೆ ಪತ್ರ ಬರೆದು ಹಣ ತರಬಹುದು. ಆದರೆ, ಈ ರೀತಿ ಬೇಕಾಬಿಟ್ಟಿ ಕೆಲಸ ಯಾಕೆ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ಕ್ರೀಡಾಂಗಣದ ನಿರ್ಮಾಣದ ಕಾರ್ಯ ಸಂಪೂರ್ಣ ಅವೈಜ್ಞಾನಿಕವಾಗಿದೆ. ಎರಡು ದಿನದಲ್ಲಿ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಎಚ್ಕೆಆರ್‌ಡಿಬಿ ಅನುದಾನದಡಿ ಕಾಮಗಾರಿ ಕೈಗೊಂಡಿದ್ದು, ಮನಸೋಇಚ್ಛೆ ಕೆಲಸ ಮಾಡಿರುವುದಕ್ಕೆ ಕಾಮಗಾರಿ ಹಳಿ ತಪ್ಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

13 ಎಕರೆ ಪ್ರದೇಶದಲ್ಲಿ 10 ಎಕರೆ ಪ್ರದೇಶ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸುಪರ್ದಿಯಲ್ಲಿದೆ. ಉಳಿದ 3 ಎಕರೆಯಲ್ಲಿ ಎರಡು ಎಕರೆ ಪೊಲೀಸ್‌ ಇಲಾಖೆ ವ್ಯಾಪ್ತಿಯಲ್ಲಿದ್ದು, ಇನ್ನುಳಿದ ಒಂದು ಎಕರೆ ಪ್ರದೇಶ ಒತ್ತುವರಿಯಾಗುತ್ತಿದೆ ಎಂಬ ಮಾಹಿತಿ ಇದೆ. ಅದನ್ನು ಸರ್ವೇ ಮಾಡಲಾಗುವುದು ಎಂದರು.

Advertisement

ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗೆ ಮಳೆ ನೀರು ಬರುವಂತೆ ಮಾಡಲಾಗಿದೆ. ಕೆಳಗೆ ಕುಳಿತ ಪ್ರೇಕ್ಷಕರಿಗೆ ಮಳೆ ನೀರು ಬೀಳುವಂತೆ ಮಾಡಲಾಗಿದೆ. ಶೆಡ್‌ನ‌ ಶೀಟ್ ಹಿಂದಕ್ಕೆ ಹಾಕಬೇಕು ಎಂದರು. ಬಳಿಕ ಶಟಲ್ ಕೋರ್ಟ್‌ ಮತ್ತು ಕಬಡ್ಡಿ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿ ತ್ವರಿತಗತಿಯಲ್ಲಿ ಕೆಲಸ ಮಾಡಿ ಎಂದು ಸೂಚಿಸಿದರು.

ಈ ವೇಳೆ ಬ್ಯಾಡ್ಮಿಂಟನ್‌ ಸಂಘಟನೆ ಸದಸ್ಯರು ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ಸಾಕಷ್ಟು ದೂರು ನೀಡಿದರು. ಕ್ರೀಡಾಂಗಣ ಪಕ್ಕದ ರೈಲ್ವೆ ಟ್ರ್ಯಾಕ್‌ ಬದಿಯಲ್ಲಿನ ಜಾಗ ಖಾಲಿಯಿದ್ದು, ಅದರ ಮಾಲೀಕರ ವಿವರ ಪಡೆಯಿರಿ. ಸ್ಥಳದ ಮಾಲೀಕರಿಗೆ ದಾಖಲೆ ಸಲ್ಲಿಸಲು ತಿಳಿಸಲು ಸೂಚಿಸಿ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next