ರಾಯಚೂರು: ಶ್ರೀಕೃಷ್ಣ ಜನ್ಮಾಷ್ಟಮಿ ಸಡಗರ ಬಿಸಿಲೂರಿನಲ್ಲಿ ಶುಕ್ರವಾರ ಜೋರಾಗಿ ನಡೆಯಿತು. ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಕೃಷ್ಣ ಜನಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರ ಸೇವೆ ಸಂದರೆ, ಮನೆಗಳಲ್ಲಿ ಮುದ್ದು ಮಕ್ಕಳಿಗೆ ಕೃಷ್ಣನ ವೇಷ ಧರಿಸಿ ತಾಯಂದಿರು ಸಂಭ್ರಮಿಸಿದರು.
ನಗರದ ಎಲ್ವಿಡಿ ಕಾಲೇಜು ಎದುರಿನ ಜಿಲ್ಲಾ ಗೊಲ್ಲರ (ಯಾದವ) ಸಂಘದ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತ್ಯುತ್ಸವ ಆಚರಣೆಯನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾ ಟಿಸಿದರು.
ಬಳಿಕ ಮಾತನಾಡಿ ದ ಸಂಸದರು, ಶ್ರೀಕೃಷ್ಣನ ಸಂದೇಶ ಗಳು ಎಂದೆಂದಿ ಗೂ ಪ್ರಸ್ತುತ. ಶ್ರೀಕೃಷ್ಣ ನೀಡಿದ ಸಂದೇಶಗಳು ಮಾನವ ಕುಲಕ್ಕೆ ಎಲ್ಲಕಾಲಕ್ಕೂ ಸಲ್ಲುವಂಥವು. ಶ್ರೀಕೃಷ್ಣನ ಜಯಂತಿ ಭಾರತೀಯ ಸಂಸ್ಕೃತಿಯಲ್ಲಿ ಬಹು ದೊಡ್ಡ ಆಚರಣೆಯಾಗಿದೆ. ಇಂದು ವಿದೇಶ ಗಳಲ್ಲೂ ಶ್ರೀಕೃಷ್ಣನನ್ನು ಆರಾಧಿಸುವ ದೊಡ್ಡ ವರ್ಗವಿದೆ. ಶ್ರೀಕೃಷ್ಣನ ಕುಲ ಬಾಂಧವರಾದ ಯಾದವ ಸಮಾಜದವರು ಪ್ರಗತಿಯಾಗಬೇಕು. ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿದ ವಿಶೇಷ ಸೌಲಭ್ಯಗಳಿಂದ ಇಂದು ನಾವು ಮೇಲ್ಮಟ್ಟಕ್ಕೆ ಬರಲು ಸಾಧ್ಯವಾಯಿತು. ಕೇಂದ್ರ ಸರ್ಕಾರದಿಂದ ಬಂದ ಯೋಜನೆಗಳಲ್ಲಿ ತಮ್ಮ ಸಮುದಾಯದಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಎಲ್ಲಿ ಅಧರ್ಮ ಹೆಚ್ಚುತ್ತದೆ ಅಲ್ಲಿ ಶ್ರೀಕೃಷ್ಣ ಜನ್ಮ ತಾಳುತ್ತಾನೆ. ಅದು ಯಾವುದೇ ರೂಪದಲ್ಲಿರಬಹುದು, ಶ್ರೀಕೃಷ್ಣ ವಂಶದವರಾದ ಯಾದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು. ಸಮುದಾಯಗಳು ಯಾವುದೇ ಪಕ್ಷಕ್ಕೆ ಸೀಮಿತವಾಗದೆ ಎಲ್ಲ ಪಕ್ಷಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಶ್ರೀಕೃಷ್ಣ ಜಯಂತಿಗೆ ಸರಕಾರಿ ರಜೆ ಘೋಷಿಸುವಂತೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಪ್ರಸ್ತಾಪಿಸುತ್ತೆನೆ ಎಂದರು.