Advertisement
ಪ್ರತಿ ವ್ಯಕ್ತಿಗೆ ಸಾವಿರ ರೂ. ಪಡೆದು ಲಾರಿಯಲ್ಲಿ ಕರೆ ತರಲಾಗಿದೆ. ಅಕ್ಕಿ ಮೂಟೆಗಳನ್ನು ಅಡ್ಡಗಟ್ಟಿ ಪೊಲೀಸರನ್ನು ವಂಚಿಸಲಾಗಿದೆ. ರಾತ್ರೋರಾತ್ರಿ ಪ್ರಯಾಣ ಬೆಳೆಸಿರುವ ಅವರ ವಾಹನವನ್ನು ಯಾವುದೇ ಜಿಲ್ಲೆಯಲ್ಲೂ ತಡೆದು ವಿಚಾರಣೆ ನಡೆಸಿಲ್ಲ. ಚಿಕ್ಕಮಕ್ಕಳು ಸೇರಿ 50ಕ್ಕೂ ಹೆಚ್ಚು ಜನರಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರ, ಮಾರುತಿ ನಗರ ಸೇರಿ ವಿವಿಧೆಡೆ ಕೆಲಸ ಮಾಡಿಕೊಂಡಿದ್ದರು. ಲಾರಿ ಚಾಲಕ ಸಿಕ್ಕಿಬಿದ್ದಿದ್ದಾನೆ. ಜೆಪಿ ನಗರದ ನಿವಾಸಿ ಪಾಷಾ ಎಂಬಾತನಿಗೆ ಕಾರ್ಮಿಕ ಸ್ಥಳಾಂತರಿಸುವ ಹೊಣೆ ನೀಡಿರುವುದು ಗೊತ್ತಾಗಿದೆ. ತಪ್ಪು ಗ್ರಹಿಕೆಯಿಂದ ಪ್ರಯಾಣ ಬೆಳೆಸಿದ್ದಾರೆ. ರಾಯಚೂರು, ಯಾದಗಿರಿ ಜಿಲ್ಲೆಯ ಕಾರ್ಮಿಕರು ಲಾರಿಯಲ್ಲಿದ್ದರು. ನಗರದಲ್ಲಿ ತಡೆದು ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. ಎಲ್ಲ ಕಾರ್ಮಿಕರನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಜಿಲ್ಲೆಯಲ್ಲಿ ವಾಸಿಸುತ್ತಿರುವ ಬೇರೆ ರಾಜ್ಯದ ಕೂಲಿ ಕಾರ್ಮಿಕರು ಮತ್ತು ಇತರರು ತಮ್ಮ ರಾಜ್ಯಗಳಿಗೆ ತೆರಳಲು ಇಚ್ಛಿಸಿದಲ್ಲಿ ಮತ್ತು ಪ್ರಸ್ತುತ ಬೇರೆ ರಾಜ್ಯಗಳಲ್ಲಿರುವ ಜಿಲ್ಲೆಯ ಕಾರ್ಮಿಕರು ಮತ್ತು ಇತರರು ತವರಿಗೆ ಬರಲು ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. 1950, 1077, 08532-228559, 08532-226383 ಈ ಸಂಖ್ಯೆಗಳಿಗೆ
ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಬೇಕು. ವಾಸಿಸುತ್ತಿರುವ ಸ್ಥಳ ಮತ್ತು ಜನರ ಸಂಖ್ಯೆ, ಎಲ್ಲಿಗೆ ಹೋಗಬೇಕು, ಬರಬೇಕು ಎಂಬ ಮಾಹಿತಿ ಮತ್ತು ದೂರವಾಣಿ ಸಂಖ್ಯೆ ನೋಂದಣಿ ಮಾಡಿಕೊಳ್ಳಬೇಕು. ಅವರಿಗೆ ಜಿಲ್ಲಾಡಳಿತದಿಂದ ನೆರವು ನೀಡಲಾಗುವುದು ಎಂದು ರಾಯಚೂರು ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.