Advertisement

ಆರ್‌ಟಿಪಿಎಸ್‌ಗೆ ಹಾರುಬೂದಿ ಚಿಂತೆ

11:46 AM Apr 25, 2020 | Naveen |

ರಾಯಚೂರು: ಲಾಕ್‌ಡೌನ್‌ ವಿನಾಯಿತಿಯಲ್ಲಿ ಸರ್ಕಾರ ಸಿಮೆಂಟ್‌ ಉತ್ಪಾದನೆಗೂ ಅವಕಾಶ ನೀಡಿರುವ ಕಾರಣ ಅದಕ್ಕೆ ಬೇಕಾದ ಹಾರುಬೂದಿಯನ್ನು ರೈಲು ರೇಕ್‌ ಗಳ ಮೂಲಕವೇ ಕಳುಹಿಸಲು ಚಿಂತನೆ ನಡೆಸಲಾಗಿದೆ.

Advertisement

ಇಷ್ಟು ದಿನ ಲಾರಿ ಟ್ಯಾಂಕರ್‌ಗಳ ಮೂಲಕ ಹಾರುಬೂದಿ ಸಾಗಿಸಲಾಗುತ್ತಿತ್ತು. ಆದರೆ, ಬಹುತೇಕ ಸಿಮೆಂಟ್‌ ಕಾರ್ಖಾನೆಗಳು ಕಲಬುರಗಿ ಜಿಲ್ಲೆಯಲ್ಲಿದ್ದು, ಅಲ್ಲಿ ಕೋವಿಡ್ ಅಟ್ಟಹಾಸವಿದೆ. 36 ಪಾಸಿಟಿವ್‌ ಪ್ರಕರಣಗಳಿದ್ದರೆ, ನಾಲ್ವರು ಮೃತಪಟ್ಟಿದ್ದಾರೆ. ಹೀಗಾಗಿ ಅಲ್ಲಿಂದ ವಾಹನಗಳ ಓಡಾಟ ಹೆಚ್ಚಾದರೆ ಈವರೆಗೆ ಪಾಸಿಟಿವ್‌ ಪ್ರಕರಣಗಳಿಲ್ಲದ ರಾಯಚೂರು ಜಿಲ್ಲೆಗೂ ಸೋಂಕು ಹರಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಆರ್‌ಟಿಪಿಎಸ್‌ ಅಧಿಕಾರಿಗಳು ರೈಲ್ವೆ ರೇಕ್‌ಗಳನ್ನು ಕಳುಹಿಸಿದರೆ ಹಾರುಬೂದಿ ಕಳುಹಿಸುವ ಚಿಂತನೆಯಲ್ಲಿದ್ದಾರೆ.

ವಿಲೇವಾರಿಗೆ ಒತ್ತಡ: ಆರ್‌ಟಿಪಿಎಸ್‌ನ ಎಂಟು ಘಟಕಗಳು ಸಕ್ರಿಯವಾಗಿದ್ದು, ಬೂದಿ ಉತ್ಪಾದನೆ ಹೆಚ್ಚಾಗಿದೆ. ಒದ್ದೆ ಬೂದಿಯನ್ನು ಹೊಂಡದಲ್ಲಿ ಸಂಗ್ರಹಿಸುತ್ತಿದ್ದು, ಎರಡು ಹೊಂಡಗಳಲ್ಲಿ 20 ಮಿಲಿಯನ್‌ ಟನ್
ಗಿಂತ ಅಧಿಕ ಬೂದಿ ಸಂಗ್ರಹವಿದೆ. ಆರ್‌ ಟಿಪಿಎಸ್‌ ಆರಂಭದ ವೇಳೆ 565 ಎಕರೆ ಪ್ರದೇಶದಲ್ಲಿ 22 ದಶಲಕ್ಷ ಕ್ಯೂಬಿಕ್‌ ಮೀಟರ್‌ ಸಾಮರ್ಥ್ಯದ ಹೊಂಡ ನಿರ್ಮಿಸಲಾಗಿತ್ತು. ಅದು ಭರ್ತಿಯಾಗುತ್ತಿದ್ದಂತೆ 2002ರಲ್ಲಿ 600 ಎಕರೆ ಪ್ರದೇಶದಲ್ಲಿ 26 ದಶಲಕ್ಷ ಕ್ಯೂಬಿಕ್‌ ಮೀಟರ್‌ ಸಾಮರ್ಥ್ಯದ ಮತ್ತೂಂದು ಹೊಂಡ ನಿರ್ಮಿಸಲಾಗಿದೆ. ಇದು ಕೂಡ ತುಂಬುವ ಹಂತಕ್ಕೆ ಬಂದಿದ್ದು, ಅದರ ಎತ್ತರವನ್ನು 5 ಮೀಟರ್‌ ಎತ್ತರಿಸುವ ಕಾರ್ಯ ನಡೆಯುತ್ತಿದೆ.

ವೈಟಿಪಿಎಸ್‌ ಕೂಡ ಉತ್ಪಾದನೆ ಆರಂಭಿಸಿದೆ. ಅದಕ್ಕೆ ಪ್ರತ್ಯೇಕ ಹೊಂಡ ಇಲ್ಲದ ಕಾರಣ ಅಲ್ಲಿನ ಬೂದಿ ಇಲ್ಲಿಗೇ ರವಾನಿಸುವ ಚಿಂತನೆ ಇದೆ. ಇಲ್ಲಿನ ಒತ್ತಡ ನಿವಾರಣೆಗಾಗಿ ñ ‌ಳಬೂದಿಯನ್ನು ಬ್ರಿಕ್ಸ್‌ ಫ್ಯಾಕ್ಟರಿಗಳಿಗೆ, ಸಿಮೆಂಟ್‌ ಫ್ಯಾಕ್ಟರಿಗಳು, ಸಿಸಿ ರಸ್ತೆ ನಿರ್ಮಾಣ ಕಾರ್ಯಗಳಿಗೆ ನೀಡಲಾಗಿತ್ತು. 500ಕ್ಕೂ ಅಧಿಕ ಲಾರಿಗಳಿಂದ ಸಾಗಿಸಲಾಗುತ್ತಿತ್ತು. ಆದರೆ, ಲಾಕ್‌ ಡೌನ್‌ ಶುರುವಾಗುತ್ತಿದ್ದಂತೆ ಬೂದಿ ಸಾಗಣೆ ನಿಂತಿದೆ. ಈಗ ಆರ್‌ಟಿಪಿಎಸ್‌ನಲ್ಲಿ ನಿತ್ಯ 8 ರೇಕ್‌ ಕಲ್ಲಿದ್ದಿಲು ಉರಿಸಲಾಗುತ್ತಿದೆ. ಇದರಿಂದ ಬೂದಿ ಉತ್ಪಾದನೆ ಹೆಚ್ಚುತ್ತಿದ್ದು, ವಿಲೇವಾರಿ ಕೂಡ ಅನಿವಾರ್ಯವಾಗಿದೆ.

ಸಿಮೆಂಟ್‌ ಕಾರ್ಖಾನೆಗಳು ಇನ್ನೂ ಉತ್ಪಾದನೆ ಆರಂಭಿಸಿಲ್ಲ. ಆದರೂ ಹಾರುಬೂದಿ ಬೇಕಿದ್ದಲ್ಲಿ ರೈಲು ರೇಕ್‌ಗಳ ಮೂಲಕವೇ ಸಾಗಿಸುವ ಚಿಂತನೆ ಇದೆ. ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್‌ ಹೆಚ್ಚಾಗಿದ್ದು, ವಾಹನ ಓಡಾಟಕ್ಕೆ ಅವಕಾಶ ನೀಡಿದರೆ ಅಪಾಯ ಆಹ್ವಾನಿಸಿದಂತೆ. ಈ ಬಗ್ಗೆ ಜಿಲ್ಲಾಡಳಿತದ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ವೇಣುಗೋಪಾಲ
ಕಾರ್ಯನಿರ್ವಾಹಕ ನಿರ್ದೇಶಕ
ಆರ್‌ಟಿಪಿಎಸ್‌

Advertisement

ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next