Advertisement

ಮುಂಗಾರು ಉತ್ಸವಕ್ಕೆ ಸರ್ಕಾರದಿಂದ ನೆರವು

10:46 AM Jun 19, 2019 | Team Udayavani |

ರಾಯಚೂರು: ಈ ಭಾಗದಲ್ಲೇ ಪ್ರಸಿದ್ಧಿ ಪಡೆಯುವ ಮೂಲಕ ವಿಶೇಷ ಆಚರಣೆಯಾಗಿ ಗುರುತಿಸಿಕೊಂಡ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಸರ್ಕಾರದಿಂದ ಅನುದಾನ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಭರವಸೆ ನೀಡಿದರು.

Advertisement

ನಗರದ ಎಪಿಎಂಸಿಯಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮುನ್ನೂರು ಕಾಪು ಸಮಾಜದಿಂದ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ಹಬ್ಬದ ಮೂರನೇ ದಿನ 2.5 ಟನ್‌ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದಿಂದ ಇಂತಿಷ್ಟು ಅನುದಾನ ಮೀಸಲಿಡುವಂತೆ ಸಿಎಂಗೆ ಮನವಿ ಮಾಡಿ ಮುಂದಿನ ವರ್ಷದಿಂದ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು. ಇದೊಂದು ಉತ್ತಮ ಆಚರಣೆಯಾಗಿದ್ದು, ಮುನ್ನೂರು ಕಾಪು ಸಮಾಜದ ಸತತ 19 ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

ಇಂಥ ಕಾರ್ಯಕ್ರಮಗಳಿಗೆ ಹಿಂದಿನ ಸರ್ಕಾರಗಳು ಆರ್ಥಿಕ ಸಹಾಯ ಮಾಡಬೇಕಿತ್ತು. ಇದೇ ಜೂ.26ರಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆಂದು ಜಿಲ್ಲೆಗೆ ಬರುತ್ತಿದ್ದಾರೆ. ಆಗ ಕಾಪು ಸಮಾಜದ ಮುಖಂಡರ ನಿಯೋಗ ಬಂದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಒತ್ತಾಯ ಮಾಡಲಾಗುವುದು ಎಂದರು.

ಈ ಹಬ್ಬ ಒಂದು ಸಮುದಾಯ, ಜಾತಿ ಧರ್ಮಕ್ಕೆ ಸೀಮಿತಗೊಂಡಿಲ್ಲ. ಎಲ್ಲರನ್ನು ಒಳಗೊಂಡ ವಿಶೇಷ ಆಚರಣೆಯಾಗಿದೆ. ನೆರೆ ಹೊರೆಯ ರಾಜ್ಯದ ರೈತರು ಕೂಡ ತಮ್ಮ ಎತ್ತುಗಳನ್ನು ಕರೆತಂದು ಪಾಲ್ಗೊಳ್ಳುತ್ತಿರುವುದು ವಿಶೇಷ. ಆ ನಿಟ್ಟಿನಲ್ಲಿ ಇದು ಎಲ್ಲರನ್ನು ಬೆಸೆಯುವ ಹಬ್ಬ ಎಂದರೆ ತಪ್ಪಲ್ಲ ಎಂದರು.

Advertisement

ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಎಷ್ಟೇ ಕಷ್ಟಗಳಿದ್ದರೂ ರೈತರ ಹಬ್ಬಗಳನ್ನು ನಿಲ್ಲಿಸಬಾರದು. ಇದು ದೇಶಿ ಸಂಸ್ಕೃತಿ ಬಿಂಬಿಸುವ ಆಚರಣೆಯಾಗಿದ್ದು, ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.

ಚಿಕ್ಕಸುಗೂರು ಚೌಕಿಮಠದ ಡಾ| ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಕ್ಷೇತ್ರ ಕೈವಾರ ಮಠದ ಧರ್ಮಾಧಿಕಾರಿ ಡಾ| ಎಂ.ಆರ್‌.ಜಯರಾಂ, ನಾರಾಯಣಪೇಟೆ ಶಾಸಕ ಎಸ್‌.ಆರ್‌.ರೆಡ್ಡಿ ಮಾತನಾಡಿದರು.

ಹಬ್ಬದ ರೂವಾರಿ ಎ.ಪಾಪಾರೆಡ್ಡಿ, ಸಮಾಜದ ಜಿಲ್ಲಾಧ್ಯಕ್ಷ ಬೆಲ್ಲಂ ನರಸರೆಡ್ಡಿ, ಮುಖಂಡರಾದ ಎಂ.ವಿರೂಪಾಕ್ಷಿ, ಮಹಾಂತೇಶ ಪಾಟೀಲ, ಕೇಶವರೆಡ್ಡಿ, ಈ. ಆಂಜನೇಯ, ಚಾಮರಸ ಮಾಲಿಪಾಟೀಲ, ಶಿವಶಂಕರ, ಲಕ್ಷ ್ಮಣಗೌಡ ಕಡಗಂದೊಡ್ಡಿ, ಯು.ದೊಡ್ಡಮಲ್ಲೇಶ, ಶ್ರೀನಿವಾಸ ರೆಡ್ಡಿ ಸೇರಿ ಸಮಾಜದ ಮುಖಂಡರು, ಹಿರಿಯರು, ನಾನಾ ಪ್ರದೇಶಗಳಿಂದ ಆಗಮಿಸಿದ್ದ ಸಾವಿರಾರು ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next