Advertisement
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿತ್ತು. ಆದರೆ, ಕಾರ್ಯಕ್ರಮ ಶುರುವಾಗುವ ಹೊತ್ತಿಗೆ 3.30 ಮೇಲಾಗಿತ್ತು, ಆದರೂ ರಾಹುಲ್ ಗಾಂಧಿ ಬಂದಿರಲಿಲ್ಲ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮಾತು ಆರಂಭಿಸುತ್ತಿದ್ದಂತೆ ಜನ ಜೋರಾಗಿ ಕೂಗಾಡಿದರು. ಬಳಿಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಮಾತನಾಡಿದರು.
ಸಿಗದಂತಾಗಿತ್ತು. ಇದರಿಂದ ಜನ ಎಳನೀರು, ತಂಪು ಪಾನೀಯ
ಅಂಗಡಿಗಳನ್ನು ಹುಡುಕಿಕೊಂಡು ಹೋಗುವಂತಾಗಿತ್ತು. ರಾರಾಜಿಸಿದ ಟಿಡಿಪಿ ಧ್ವಜಗಳು: ನಡೆದಿದ್ದು ಕಾಂಗ್ರೆಸ್-ಜೆಡಿಎಸ್
ಮೈತ್ರಿ ಸಮಾವೇಶವಾದರೂ ಸಮಾವೇಶದಲ್ಲಿ ತೆಲುಗು
ದೇಶಂ ಪಕ್ಷದ ಧ್ವಜಗಳು ರಾರಾಜಿಸಿದವು. ರಾಯಚೂರು
ಹೇಳಿ ಕೇಳಿ ಆಂಧ್ರದ ಗಡಿಭಾಗವಾಗಿದ್ದು, ಇಲ್ಲಿ ಆಂಧ್ರದ ಜನ
ಸಾಕಷ್ಟು ಜನ ನೆಲೆಸಿದ್ದಾರೆ. ಚಂದ್ರಬಾಬು ನಾಯ್ಡು ಬರುವ
ಸಂಗತಿ ಕೇಳಿ ಸಾಕಷ್ಟು ಜನ ಆಗಮಿಸಿದ್ದರು. ಧ್ವಜ ಪ್ರದರ್ಶಿಸಿ
ಟಿಡಿಪಿಗೆ ಜಯಘೋಷ ಕೂಗಿದ್ದು ಕಂಡು ಬಂತು. ಇನ್ನೂ
ಆಂಧ್ರದಿಂದ ಆಗಮಿಸಿದ್ದ ಶಾಮು ತಾಡಪತ್ರಿ ಎನ್ನುವವರು
ಟಿಡಿಪಿ ಸಂಸ್ಥಾಪಕ ಎನ್.ಟಿ. ರಾಮಾರಾವ್ ವೇಷ ಧರಿಸಿ ನೆರೆದ
ಜನರ ರಂಜಿಸಿದರು. ಅವರ ಹಾವಭಾವಗಳು ಎನ್‌ಟಿಆರ್
ಹೋಲುವಂತೆ ಇದ್ದದ್ದು ಗಮನ ಸೆಳೆಯಿತು.
Related Articles
ಮಿತಿಮೀರಿದ್ದರಿಂದ ಆಯೋಜಕರು ಸಮಾವೇಶಕ್ಕೆ ಆಗಮಿಸಿದ್ದ
ಜನರಿಗೆ ಮಜ್ಜಿಗೆ ಪ್ಯಾಕೇಟ್ ವಿತರಿಸಿದರು. ಆದರೆ, ಲಾರಿಯಲ್ಲಿ
ತಂದರೂ ಕೆಲವೇ ಕ್ಷಣಗಳಲ್ಲಿ ಖಾಲಿ ಆಗಿದ್ದವು. ಜನ ಎಂದೂ
ಕಾಣದವರಂತೆ ಮುಗಿಬಿದ್ದು, ಒಬ್ಬೊಬ್ಬರು ಮೂರ್‍ನಾಲ್ಕು
ಪ್ಯಾಕೇಟ್ ಪಡೆದರು. ಈ ವೇಳೆ ನೂಕು ನುಗ್ಗಲು ಏರ್ಪಟ್ಟು
ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
Advertisement
ಟ್ರಾಫಿಕ್ ಜಾಮ್ನಗರದ ಹೃದಯ ಭಾಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ವಾಹನ ದಟ್ಟಣೆ ಏರ್ಪಟ್ಟು ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಯಿತು. ಸಂಜೆ ಸಮಾವೇಶ ಮುಗಿಯುತ್ತಿದ್ದಂತೆ ಜನ ಏಕಕಾಲಕ್ಕೆ ನಿರ್ಗಮಿಸಿದರು. ಇದರಿಂದ ಜಿಲ್ಲಾ ಕ್ರೀಡಾಂಗಣದ ಮುಂಭಾಗದ ರಸ್ತೆ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಯಿತು. ವಾತಾವರಣ ತಿಳಿಗೊಳಿಸಲು
ಪೊಲೀಸರು ಹೆೃರಾಣಾದರು. ಕೃಷಿ ವಿವಿವರೆಗೂ ವಾಹನ ದಟ್ಟಣೆ ಏರ್ಪಟ್ಟಿತ್ತು. ಎಂಟು ಕ್ಷೇತ್ರಗಳಿಂದ ಜನ ಆಗಮಿಸಿದ್ದರಿಂದ ಎಲ್ಲ ವಾಹನಗಳು ಒಂದೇ ದಾರಿಯಲ್ಲಿ ಏಕಕಾಲಕ್ಕೆ ಸಾಗಿದ್ದರಿಂದ ಸಮಸ್ಯೆ ಸೃಷ್ಟಿಯಾಯಿತು. ಚೌಕಿದಾರ್ ಚೋರ್ ಹೈ
ಮೋದಿ ಸಮಾವೇಶದಲ್ಲಿ ಮೋದಿ ಮೋದಿ ಎಂಬ ಉದ್ಘೋಷ ಬರುವಂತೆ ಕಾಂಗ್ರೆಸ್ ಸಮಾವೇಶದಲ್ಲಿ ಚೌಕಿದಾರ್ ಚೋರ್ ಹೈ ಎಂಬ ಘೋಷಣೆ ಕೇಳಿ ಬಂತು. ರಾಹುಲ್ ಗಾಂಧಿ ಮಾತು ಆರಂಭಿಸುತ್ತಿದ್ದಂತೆ ಕೆಲ ಯುವಕರು ಚೌಕಿದಾರ್ ಚೋರ್ ಹೈ ಎಂದು ಕೂಗಿದರು. ಇದೇ ವೇಳೆ ರಾಹುಲ್ ಗಾಂಧಿ ಇಲ್ಲಿ
ಮಾತ್ರವಲ್ಲ ದೇಶದ ಯಾವ ಭಾಗಕ್ಕೂ ಹೋದರೂ ಇದೇ ಮಾತು ಕೇಳುತ್ತಿದೆ ಎಂದರು.