Advertisement

ಸರ್ಕಾರಿ ನೌಕರರ ಸಂಘದ ಚುನಾವಣೆ ಶಾಂತಿಯುತ

03:59 PM Jun 15, 2019 | Naveen |

ರಾಯಚೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರ 2019-24ರ ಅವಧಿವರೆಗಿನ ಆಯ್ಕೆಗೆ ಗುರುವಾರ ಚುನಾವಣೆ ನಡೆಯಿತು.

Advertisement

ಆರು ತಾಲೂಕು ಘಟಕಗಳು ಮತ್ತು ಒಂದು ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗಾಗಿ ನೌಕರರು ಮತದಾನ ಮಾಡಿದರು. ನಗರದ ಹಾಷ್ಮಿಯಾ ಶಾಲೆಯಲ್ಲಿ ಆರು ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 11:00ರಿಂದ ಶುರುವಾದ ಮತದಾನ ಮಧ್ಯಾಹ್ನ 4:00ರ ವರೆಗೆ ನಡೆಯಿತು. ತಾಲೂಕಿನಲ್ಲಿ 62 ಸ್ಥಾನಗಳ ಪೈಕಿ 56 ಅಭ್ಯರ್ಥಿಗಳು ಅವಿರೋಧ‌ ಆಯ್ಕೆಯಾಗಿದ್ದು, ಪ್ರಾಥಮಿಕ ಶಾಲೆಯ 4, ಪ್ರೌಢಶಾಲೆಯ 2 ಸ್ಥಾನಗಳಿಗೆ ಚುನಾವಣೆ ನಡೆಯಿತು. ಜಿಲ್ಲೆಯಲ್ಲಿ 3424 ಮತದಾರರಿದ್ದು ದೇವದುರ್ಗದಲ್ಲಿ 35 ಸ್ಥಾನಗಳಲ್ಲಿ 23 ಅವಿರೋಧ‌ ಆಯ್ಕೆಯಾಗಿದ್ದಾರೆ. 12 ಸ್ಥಾನಗಳಿಗೆ ಚುನಾವಣೆ ನಡೆಯಿತು. 1659 ಮತದಾರರು ಹಕ್ಕು ಚಲಾಯಿಸಿದರು. ಲಿಂಗಸುಗೂರು ತಾಲೂಕಿನಲ್ಲಿ ಒಟ್ಟು 35 ಸ್ಥಾನಗಳ ಪೈಕಿ 31ಕ್ಕೆ ಅವಿರೋಧ‌ ನಡೆದಿದ್ದು, 12 ಸ್ಥಾನಗಳಿಗೆ ಚುನಾವಣೆ ನಡೆಯಿತು. ಮಸ್ಕಿಯಲ್ಲಿ 21ರಲ್ಲಿ 11 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 1200 ಮತದಾರರಿದ್ದರು. ಸಿಂಧ‌ನೂರಿನಲ್ಲಿ 35ರಲ್ಲಿ 19 ಸ್ಥಾನಗಳಿಗೆ ಅವಿರೋಧ‌ ಆಯ್ಕೆಯಾಗಿದ್ದು ಉಳಿದ 16 ಸ್ಥಾನಗಳಿಗೆ 2381 ಜನರು ಮತದಾನ ಮಾಡಿದರು. ಮಾನ್ವಿಯಲ್ಲಿ 5ರಲ್ಲಿ 16 ಸ್ಥಾನಗಳಿಗೆ ಅವಿರೋಧ‌ ಆಯ್ಕೆಯಾಗಿದ್ದು, 11 ಸ್ಥಾನಗಳಿಗೆ 870 ಜನ ಮತದಾನ ಮಾಡಿದ್ದಾರೆ. ಇನ್ನು ಸಿರವಾರದಲ್ಲಿ 16 ಸ್ಥಾನಗಳ ಪೈಕಿ 12ಕ್ಕೆ ಅವಿರೋಧ‌ ಆಯ್ಕೆಯಾಗಿದ್ದು ನಾಲ್ಕಕ್ಕೆ ಚುನಾವಣೆ ನಡೆಯಿತು.

ಸಂಜೆ 5:30ರ ಬಳಿಕ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತದಾನ ಎಣಿಕೆ ಪ್ರಕ್ರಿಯೆ ನಡೆಸಲಾಯಿತು. ಪ್ರೌಢಶಾಲೆ ವಿಭಾಗದಲ್ಲಿ ಒಟ್ಟು 348 ನೊಂದಾಯಿತ ಮತಗಳಲ್ಲಿ 327 ಚಲಾವಣೆಯಾದವು. ಮೋಯಿನುಲ್ ಹಕ್‌, ಕೋರೆನಲ್ ಆಯ್ಕೆಯಾದರು. ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ ಒಟ್ಟು 1371 ನೊಂದಾಯಿತ ಮತಗಳಲ್ಲಿ 1165 ಚಲಾವಣೆಯಾದವು. ಎಂಟು ಅಭ್ಯರ್ಥಿಗಳಲ್ಲಿ ಮಹಾಂತೇಶ, ನಂದೇಶ, ಭೀಮೇಶ ನಾಯಕ ಪ್ರಸನ್ನಕುಮಾರ ಎಂ. ಆಯ್ಕೆಯಾದರು ಎಂದು ಜಿಲ್ಲಾ ಚುನಾವಣಾಧಿಕಾರಿ ಮೆಹಬೂಬ್‌ ಸಾಬ್‌ ಡೆಂಕೆ ತಿಳಿಸಿದರು. ಪ್ರಾಥಮಿಕ ಶಾಲೆಗಳಲ್ಲಿ 5 ಮತ್ತು ಪ್ರೌಢಶಾಲೆಗಳಲ್ಲಿ 1 ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು. ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next