Advertisement

ಗಣತಿ ಕಾರ್ಯ ಯಶಸ್ವಿಯಾಗಿ ನಿರ್ವಹಿಸಿ

03:23 PM Jul 13, 2019 | Naveen |

ರಾಯಚೂರು: ಏಳನೇ ಆರ್ಥಿಕ ಗಣತಿಯಲ್ಲಿ ಸಮಗ್ರ ಮಾಹಿತಿ ದಾಖಲಿಸುವ ಮೂಲಕ ದೇಶದ ಪ್ರಗತಿಗೆ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

Advertisement

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಏಳನೇ ಆರ್ಥಿಕ ಜನಗಣತಿ-2019ರ ತರಬೇತುದಾರರಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೊದಲ ಹಂತದ ತರಬೇತಿ ಕಾರ್ಯಾಗಾರ ಇದಾಗಿದ್ದು, ಸಿಎಸ್‌ಸಿ ತರಬೇತುದಾರರು ಚೆನ್ನಾಗಿ ತಿಳಿದುಕೊಂಡು ತಮಗೆ ವಹಿಸಿದ ಕಾರ್ಯ ಯಶಸ್ಸುಗೊಳಿಸಬೇಕು ಎಂದು ಹೇಳಿದರು.

ಪ್ರತಿ ಹಳ್ಳಿಯಲ್ಲೂ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದು ದಿನನಿತ್ಯ ನವೀಕರಿಸಬೇಕು. ಹತ್ತನೆ ತರಗತಿವರೆಗೆ ಶಿಕ್ಷಣ ಪಡೆದವರು ಹಾಗೂ ಆಂಡ್ರಾಯ್ಡ ಫೋನ್‌ ಹೊಂದಿರುವವರು ಗಣತಿಯಲ್ಲಿ ಕಾರ್ಯದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.

ತರಬೇತಿಯಲ್ಲಿ ಮೊದಲು ಜಿಲ್ಲಾ ಮಟ್ಟದಲ್ಲಿ ನಂತರ ತಾಲೂಕು ಮಟ್ಟದಲ್ಲಿ ಆಯೋಜಿಸಲಾಗುತ್ತದೆ. ಇದರಲ್ಲಿ ಸರಿಯಾಗಿ ಮಾಹಿತಿ ತಿಳಿದು ನಿಮ್ಮ ಗೆಳೆಯರಿಗೆ ಸಂದೇಶ ರವಾನಿಸಬೇಕು. ಸರ್ವೆ ತರಬೇತುದಾರರು ಕೆಲಸ ಕಾರ್ಯನಿರ್ವಹಿಸಿದ ಬಳಿಕ ನಿಮ್ಮ ಖಾತೆಗೆ ನೇರವಾಗಿ ಹಣ ಸಂಗ್ರಹವಾಗುತ್ತದೆ. ಏಳನೇ ಆರ್ಥಿಕ ಗಣತಿ ಜವಾಬ್ದಾರಿಯುತವಾಗಿ ನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳು ನಿಮ್ಮ ವ್ಯಾಪ್ತಿಗೆ ಬರುತ್ತವೆ. ಅದಕ್ಕಾಗಿ ಎಲ್ಲ ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ತರಬೇತುದಾರರು ಗಣತಿ ಕಾರ್ಯ ಯಶಸ್ವಿಯಾಗಿ ಕೈಗೊಂಡು ರಾಯಚೂರು ಜಿಲ್ಲೆಯನ್ನು ಪ್ರಥಮ ಸ್ಥಾನದಲ್ಲಿ ತರಲು ಪ್ರಯತ್ನಿಸಬೇಕು ಎಂದು ಹೇಳಿದರು.

ಸಹಾಯಕ ಆಯುಕ್ತೆ ಶಿಲ್ಪಾ ಶರ್ಮಾ ಮಾತನಾಡಿ, ದೇಶಾದ್ಯಂತ 7ನೇ ಆರ್ಥಿಕ ಜನಗಣತಿ ಕಾರ್ಯಾಗಾರ ನಡೆಯುತ್ತಿದ್ದು, ಇದು ದೇಶದ ಎಲ್ಲ ಸಾಮಾನ್ಯ ಜನರಿಂದ ಹಿಡಿದು ವ್ಯವಹಾರ ಮಾಡುವವರಿಗೆ ಅನ್ವಯಿಸುತ್ತದೆ. ಆದ್ದರಿಂದ ತರಬೇತಿದಾರರು ಮನೆ ಮನೆಗೆ ಭೇಟಿ ನೀಡಿ ಸೂಕ್ತ ಮಾಹಿತಿ ದತ್ತಾಂಶದಲ್ಲಿ ಸಂಗ್ರಹಿಸಿ ಮೇಲಧಿಕಾರಿಗಳಿಗೆ ಒಪ್ಪಿಸಬೇಕು ಎಂದು ಹೇಳಿದರು.

Advertisement

ಬಳ್ಳಾರಿಯಿಂದ ಆಗಮಿಸಿದ್ದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ಚನ್ನಬಸವ ಮಾತನಾಡಿ, ಆರ್ಥಿಕ ಚಟುವಟಿಕೆಗೆ ಸಂಬಂಧಿಸಿದ ಜನಗಣತಿ ಇದಾಗಿದೆ. ಯಾವ ಯಾವ ರಾಜ್ಯಗಳು ಹಾಗೂ ಜಿಲ್ಲೆಗಳು ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿವೆ ಎಂಬುದನ್ನು ಗಣತಿಯಲ್ಲಿ ನೋಡಬಹುದು. ಕುಟುಂಬದಲ್ಲಿ ವಾಸಿಸುವ ಮನೆಗಳು. ಜನವಸತಿ ಇಲ್ಲದ ಮನೆಗಳು ಮತ್ತು ವಾಣಿಜ್ಯ ಮನೆಗಳಿರುತ್ತವೆ. ಅದಕ್ಕಾಗಿ ತರಬೇತಿಯಲ್ಲಿ ಚನ್ನಾಗಿ ಮಾಹಿತಿ ಪಡೆದು ಸರ್ವೆ ಮಾಡಬೇಕು ಎಂದು ಹೇಳಿದರು.

ಪ್ರೋಬೇಶನರಿ ಐಎಎಸ್‌ ಅಧಿಕಾರಿ ರಿತೇಶಕುಮಾರ, ರಾಯಚೂರು ತಾಲೂಕು ತಹಶೀಲ್ದಾರ್‌ ಡಾ| ಹಂಪಣ್ಣ, ಕಾರ್ಮಿಕ ನಿರೀಕ್ಷಕ ವೆಂಕಟಸ್ವಾಮಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶ್ರೀನಿವಾಸ, ಜಿಲ್ಲಾ ಮಟ್ಟದ ಅಧಿಕಾರಿ ನಾಗರಾಜ ಸೇರಿ ತರಬೇತಿಗೆ ಆಗಮಿಸಿದ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next