ರಾಯಚೂರು (ಸಿರವಾರ): ಕಳೆದೆರಡು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಹೊಸ ತಾಲೂಕುಗಳ ಸಾಲಿನಲ್ಲಿ ಜಿಲ್ಲೆಯ ಸಿರವಾರ ಕೂಡಾ ಇದೆ.
Advertisement
ತಾಲೂಕು ರಚನೆಯಾದಾಗ ಆ ಭಾಗದ ಜನರಲ್ಲಿ ಎಷ್ಟು ಖುಷಿಯಾಗಿತ್ತೋ ಈಗ ಅಷ್ಟೇ ಬೇಸರವೂ ಆವರಿಸಿದೆ.
Related Articles
Advertisement
ಕಟ್ಟಡದ್ದೇ ಚಿಂತೆ: ಸಿರವಾರ ತಾಲೂಕು ಕೇಂದ್ರವಾಗಿಮೇಲ್ದರ್ಜೆಗೇರಿದರೂ ತಹಶೀಲ್ ಕಚೇರಿಗೆ ಇಂದಿಗೂ
ಸ್ಥಳಾಭಾವ ನೀಗಿಲ್ಲ. ಹಿಂದಿನ ನಾಡ ಕಚೇರಿಯ ಶಿಥಿಲಾವಸ್ಥೆ ಕಟ್ಟಡದಲ್ಲೇ ಹೊಸ ತಾಲೂಕು ಕಾರ್ಯ ಕಲಾಪಗಳು ನಡೆಯುತ್ತಿವೆ. ಹೊಸ ತಾಲೂಕು ವ್ಯಾಪ್ತಿಗೆ 12 ಗ್ರಾಮ ಪಂಚಾಯಿತಿಗಳು, 2 ಜಿಪಂ ಕ್ಷೇತ್ರಗಳು ಮತ್ತು 59 ಗ್ರಾಮಗಳು ಒಳಗೊಂಡಿವೆ. ತಹಶೀಲ್ದಾರ ಹೊರತುಪಡಿಸಿ ಇನ್ಯಾವುದೇ ಇಲಾಖೆಗೆ ಕಾಯಂ ಅಧಿಕಾರಿಗಳನ್ನು ನಿಯೋಜಿಸಿಲ್ಲ. ಹೀಗಾಗಿ ತಾಲೂಕು ಕೇಂದ್ರ ಘೋಷಣೆಗೂ ಮುನ್ನ ಹೇಗೆ ಕೆಲಸ ಕಾರ್ಯ ನಡೆದಿದ್ದವೋ ಇಂದಿಗೂ ಅದೇ ಮಾದರಿ ಮುಂದುವರಿದಿದೆ. ಹೊಸ ತಾಲೂಕು ಘೋಷಣೆಯ ಬಳಿಕ ಪಟ್ಟಣದಲ್ಲಿ ಸರ್ಕಾರದ ಎಲ್ಲ ಸೇವೆಗಳು ಸಿಗುತ್ತವೆ. ಪಟ್ಟಣವು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಈಗ ನಿರಾಸೆ ಮೂಡಿದೆ. ಅನುದಾನವೇ ಬಂದಿಲ್ಲ: ರಾಜ್ಯ ಸರ್ಕಾರ ಹೊಸ ತಾಲೂಕುಗಳನ್ನು ಘೋಷಿಸಿ, ಪ್ರತಿ ತಾಲೂಕಿಗೆ 2 ಕೋಟಿ ಅನುದಾನ ನೀಡುವುದಾಗಿ ತಿಳಿಸಿತ್ತು. ಆದರೆ, ಈವರೆಗೂ ಸಿರವಾರ ತಾಲೂಕಿಗೆ ಬಿಡಿಗಾಸು ಬಂದಿಲ್ಲ. ಅನುದಾನವೇ ಇಲ್ಲ ಎಂದ ಮೇಲೆ ಅಭಿವೃದ್ಧಿ ನಿರೀಕ್ಷಿಸುವುದಾದರೂ ಹೇಗೆ ಎಂಬುದು ತಾಲೂಕು ಹೋರಾಟ ಸಮಿತಿ ಪ್ರಶ್ನೆ. ಸಿರವಾರದಲ್ಲಿ ಈಗ ತಹಶೀಲ್ದಾರ್ ಕಚೇರಿ ಬಿಟ್ಟರೆ ಮತ್ಯಾವ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಕಟ್ಟಡಗಳನ್ನು ಮಾತ್ರ ಗುರುತಿಸಿದ್ದು, ಪ್ರಭಾರ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೀಗಾಗಿ ಜನ ವಿಧಿ ಇಲ್ಲದೇ ಮುಂಚಿನಂತೆ ಪ್ರತಿಯೊಂದಕ್ಕೂ ಮಾನ್ವಿಗೆ ಓಡಾಡಬೇಕಿದೆ. ಕಟ್ಟಡಗಳ ಕೊರತೆ: ನೂತನ ತಾಲೂಕಿನಲ್ಲಿ ಅನೇಕ
ಇಲಾಖೆಗಳು ಕಟ್ಟಡದ ಕೊರತೆಯಿಂದ ಸೇವೆ ಆರಂಭಿಸದೇ ಹಾಗೆಯೇ ಉಳಿದಿವೆ. ತಹಶೀಲ್ದಾರ್ ಕಚೇರಿ ಪ್ರಸ್ತುತ ಹಳೆ ಕಟ್ಟಡದಲ್ಲಿ ನಡೆಯುತ್ತಿದ್ದು, ಅದರಲ್ಲಿ ತಹಶೀಲ್ದಾರ್ ಹಾಗೂ ಸಿಬ್ಬಂದಿಗೆ ಸ್ಥಳಾಭಾವವಿದೆ. ಈಗಾಗಲೇ ತಹಶೀಲ್ ಕಚೇರಿ ನಿರ್ಮಿಸಲು 8 ಎಕರೆ ಸ್ಥಳ ಗುರುತಿಸಿದ್ದು, ಅನುದಾನ
ಬಿಡುಗಡೆಗಾಗಿ ಕಾದು ಕೂರುವಂತಾಗಿದೆ.