ರಾಯಚೂರು: ಪ್ರೌಢಶಾಲೆ ವಿದ್ಯಾರ್ಥಿನಿಯರು ಋತುಮತಿ ದಿನಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಮತ್ತು ಆರೋಗ್ಯ ರಕ್ಷಣೆ ಕ್ರಮಗಳ ಕುರಿತು ಸೂಕ್ತ ಜಾಗೃತಿ ಮೂಡಿಸುವ ಹೊಣೆ ನಿಮ್ಮ ಮೇಲಿದೆ ಎಂದು ಡಿಡಿಪಿಐ ಬಿ.ಕೆ ನಂದನೂರು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಋತುವಿನ ದಿನಗಳಲ್ಲಿ ಕೈಗೊಳ್ಳಬೇಕಾದ ಆರೋಗ್ಯ ಸಂರಕ್ಷಣೆ ಮತ್ತು ಪೌಷ್ಟಿಕ ಆಹಾರ ಸೇವನೆ ಕುರಿತು ಜಿಲ್ಲೆಯ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಆರ್
ಬಿಎಸ್‌ಕೆ ಸಂಯೋಜಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಂಆರ್‌ಪಿಎಲ್ ಮಂಗಳೂರು ಹಾಗೂ ಎಚ್ ಎಲ್‌ಎಲ್ ಲೈಫ್ ಕೇರ್ ಸಂಸ್ಥೆಯಿಂದ ಜಿಲ್ಲೆಯ 208 ಸರ್ಕಾರಿ ಪ್ರೌಢಶಾಲೆಗಳಲ್ಲಿ ಈಗಾಗಲೇ ಹೆಣ್ಣುಮಕ್ಕಳಿಗೆ ಶುಚಿ ಪ್ಯಾಡ್ ನೀಡುವ ಮತ್ತು ಪ್ಯಾಡ್ ಸುಟ್ಟು ಹಾಕುವ ಮಷಿನ್ ಗಳನ್ನು ಅಳವಡಿಸಲಾಗಿದೆ. ತರಬೇತಿಯನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿ ಕಾರಿ ಡಾ| ಎಂ.ಕೆ.ಎಸ್. ನಸೀರ್ ಮಾತನಾಡಿ, ಸರ್ಕಾರಿ ಶಾಲೆ ಹೆಣ್ಣುಮಕ್ಕಳಿಗೆ ಈ ರೀತಿಯ ಸೌಲಭ್ಯ ಕಲ್ಪಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಯಾವುದೇ ಹೆಣ್ಣು ಮಗು ಋತುಮಾನದ ದಿನಗಳಲ್ಲಿ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದು ಹೇಳಿದರು.
ಆರ್‌ಸಿಎಚ್ ಅಧಿಕಾರಿ ವಿಜಯಾ, ಕುಟುಂಬ ಕಲ್ಯಾಣಾಧಿಕಾರಿ ಲಕ್ಷ್ಮೀಬಾಯಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ, ತಾಲೂಕು ವೈದ್ಯಾಧಿ ಕಾರಿ ಶಕೀರ್, ಮಹ್ಮದ್ ಜಮಿಲ್, ವೈದ್ಯಾಧಿ ಕಾರಿ ಮನೋಹರ ಪತ್ತಾರ, ತರಬೇತಿ ಸಂಪನ್ಮೂಲ ವ್ಯಕ್ತಿ ಡಾ| ಶೋಭಾ ಮೇತ್ವಾ, ಕೇರಳ ಹಾಗೂ ಎಚ್‌ಎಲ್ ಎಲ್ ಸಂಸ್ಥೆ ಸಹಾಯಕ ವ್ಯವಸ್ಥಾಪಕ ದ್ರುವನ್, ಬಿಜಿವಿಎಸ್‌ನ ಸೈಯ್ಯದ್ ಹಫೀಜುಲ್ಲಾ ಇದ್ದರು .