Advertisement

ರಾಯಚೂರು; ಲಸಿಕೆಯಲ್ಲಿ ಆರ್‌ಎಚ್‌-1 ನಂಬರ್‌ ಒನ್‌!

05:56 PM Sep 09, 2021 | Team Udayavani |

ಸಿಂಧನೂರು: ಕೋವಿಡ್‌ ನಿಯಂತ್ರಣಕ್ಕೆ ಲಸಿಕೆ ಮೇಳ ಆಯೋಜಿಸುತ್ತಿರುವ ಸರ್ಕಾರದ ಮನವಿಗೆ ಬಾಂಗ್ಲಾ ವಲಸಿಗರು ಉತ್ತಮವಾಗಿ ಸ್ಪಂದಿಸಿದ್ದು, ಇಲ್ಲಿನ ಕ್ಯಾಂಪ್ ಗಳು ಶೇ.100ರ ಗುರಿ ಸಾಧನೆಯತ್ತ ದಾಪುಗಾಲಿಟ್ಟಿವೆ.

Advertisement

ತಾಲೂಕಿನ ಆರ್‌ಎಚ್‌-1 ಗ್ರಾಪಂ ಹಾಗೂ ಆರ್‌ಎಚ್‌-2 ಪ್ರಾಥಮಿಕ ಆರೋಗ್ಯ ಕೇಂದ್ರ ಇಂತಹ ಸಾಧನೆಯತ್ತ ಹೆಜ್ಜೆ ಇಟ್ಟಿವೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ನೀಡಿದ ಗುರಿಯನ್ನು ತಲುಪಲು ಸಮರೋಪಾದಿಯಲ್ಲಿ ಶ್ರಮಿಸಲಾಗಿದೆ. ರಾತ್ರಿ 9 ಗಂಟೆಯ ತನಕವೂ ಜನರು ಸರದಿಯಲ್ಲಿ ನಿಂತು ಕೋವಿಡ್‌ ಮೊದಲ ಡೋಸ್‌ ಪಡೆಯಲು ಬಂದಿದ್ದಾರೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲೇ ಇಲ್ಲಿನ ಪಂಚಾಯತ್‌ ಮೊದಲ ಸ್ಥಾನದ ಹಿರಿಮೆಗೆ ಪಾತ್ರವಾಗಿದೆ.

ಏನಿದು ಸಾಧನೆ?: ಆರ್‌ಎಚ್‌-1 ಗ್ರಾಪಂ ಬಾಂಗ್ಲಾ ವಲಸಿಗರು ನೆಲೆಸಿರುವ 5 ಕ್ಯಾಂಪ್‌ ಗಳು, ಬಸವರಾಜೇಶ್ವರಿ ಕ್ಯಾಂಪ್‌, ಈರಣ್ಣ ಕ್ಯಾಂಪ್‌, ಅರಗಿನ ಮರ ಕ್ಯಾಂಪ್‌ ಬರುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 2011ರ ಜನಗಣತಿ ಪ್ರಕಾರ 17,608 ಜನಸಂಖ್ಯೆಯಿದ್ದು, 18 ವರ್ಷಕ್ಕೂ ಮೇಲ್ಪಟ್ಟ 10,997 ಜನರಿದ್ದಾರೆ. ಬುಧವಾರ ಸಂಜೆ ತನಕವೂ ಇಲ್ಲಿ ಲಸಿಕೆ ಮೇಳ ಮುನ್ನಡೆದಿತ್ತು. ಈಗಾಗಲೇ 9,943 ಜನರಿಗೆ ಕೋವಿಡ್‌ ಮೊದಲ ಡೋಸ್‌ ಹಾಕಲಾಗಿದ್ದು, ಶೇ.95ರಷ್ಟು ಜನರಿಗೆ ಲಸಿಕೆ ಹಾಕುವ ಮುನ್ಸೂಚನೆ ಕಂಡುಬಂದಿದೆ. ಅಲರ್ಜಿ, ಅನಾರೋಗ್ಯ, ದುಡಿಮೆ ಅರಸಿ ಸುರಪುರ, ಶಹಾಪುರಕ್ಕೆ ಹೋದವರು ಹಾಗೂ ಬೇರೆ ಕಡೆಗಳಲ್ಲಿ ಲಸಿಕೆ ಹಾಕಿಸಿಕೊಂಡವರನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಕ್ಯಾಂಪ್‌ಗ್ಳಲ್ಲಿ ಇದ್ದು, ಲಸಿಕೆ ಪಡೆಯದವರನ್ನು ಶೇ.100ರಷ್ಟು ಪತ್ತೆ ಹಚ್ಚುವುದರಲ್ಲಿ ಯಶಸ್ಸು ಗಳಿಸಲಾಗಿದೆ.

ಒಗ್ಗಟ್ಟಿನ ಪ್ರಯತ್ನಕ್ಕೆ ಫಲ: ಶಾಸಕ ವೆಂಕಟರಾವ್‌ ನಾಡಗೌಡ ಭೇಟಿ ನೀಡಿ ಇಲ್ಲಿನ ಕ್ಯಾಂಪ್‌ಗ್ಳಲ್ಲಿ ಜನರ ಮನವೊಲಿಸಿದ್ದರು. ತಹಶೀಲ್ದಾರ್‌ ಮಂಜುನಾಥ ಭೋಗಾವತಿ, ಇಒ ಪವನ್‌ಕುಮಾರ್‌, ಪಿಎಚ್‌ಸಿ ವೈದ್ಯಾಧಿಕಾರಿ ಡಾ| ನಾಗರಾಜ್‌ ಕೆ.ವಿ., ಪಿಡಿಒ ಶಿವಪ್ಪ ಹಲವು ಬಾರಿ ಸಂಚರಿಸಿ, ಲಸಿಕೆ ಪಡೆಯುವಂತೆ ಮನವಿ ಮಾಡಿದ್ದರು. ಜತೆಗೆ ಸಮರೋಪಾದಿಯಲ್ಲಿ ಲಸಿಕೆ ಮೇಳ ಯಶಸ್ವಿಗೊಳಿಸಲು ಹಗಲಿರುಳು ಲಸಿಕೆ ಹಾಕಿಸಲಾಗಿತ್ತು. ಆಶಾ ಕಾರ್ಯಕರ್ತೆಯರು,
ಅಂಗನವಾಡಿ ಸಹಾಯಕರು, ಪಿಎಚ್‌ಸಿ ಸಿಬ್ಬಂದಿಗಳಾದ ಕಲಮೇಶ್‌, ಶೇಖರ್‌, ಸರಸ್ವತಿ ನೇತೃತ್ವದ ತಂಡ ಮಿಂಚಿನ ಸಂಚಾರ ನಡೆಸಿತ್ತು. ಮನೆ-ಮನೆ ಸರ್ವೇ, ಕ್ಯಾಂಪ್ ಗಳಲ್ಲಿ ವಾಸವಾಗಿರುವ ಪ್ರತಿಯೊಬ್ಬರನ್ನು ಕರೆತರುವ ನಿಟ್ಟಿನಲ್ಲಿ ಒಗ್ಗಟ್ಟಿನ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ತಾಲೂಕಿನ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಗುರಿ ಸಾಧನೆ ಗಮನಿಸಿದಾಗ ಆರ್‌ಎಚ್‌ ಕ್ಯಾಂಪ್‌-2ರ ಪಿಎಚ್‌ಸಿ ನಂಬರ್‌ ಸ್ಥಾನ ಗಳಿಸಿದೆ. ಇದರೊಟ್ಟಿಗೆ ಇಲ್ಲಿನ ಪಂಚಾಯಿತಿಗೂ ಕೀರ್ತಿ ಸಂದಿದೆ.

ಎಲ್ಲ ಸಿಬ್ಬಂದಿ ಸಹಕಾರ ಇದಕ್ಕೆಕಾರಣ. ಶಾಸಕರುಕೂಡ ಎರಡೂ¾ರು ಮೀಟಿಂಗ್‌ ಮಾಡಿದ್ದರು. ಸ್ಥಳೀಯ ಜನಪ್ರತಿನಿಧಿಗಳು, ಜನರ ಸಹಕಾರದಿಂದಾಗಿ ಶೇ.100ರಷ್ಟುಕೋವಿಡ್‌ ವ್ಯಾಕ್ಸಿನೇಟೆಡ್‌ ಪಂಚಾಯತ್‌ ಎಂಬಹಿರಿಮೆ ಆರ್‌ಎಚ್‌-1 ಪಾತ್ರವಾಗುವ ನಿರೀಕ್ಷೆಯಿದೆ.
ಪವನ್‌ಕುಮಾರ್‌, ಕಾರ್ಯನಿರ್ವಾಹಕ ಅಧಿಕಾರಿ, ತಾಪಂ, ಸಿಂಧನೂರು

Advertisement

ನಮ್ಮೆಲ್ಲ ಸಿಬ್ಬಂದಿ, ಗ್ರಾಪಂ ಸಹಭಾಗಿತ್ವ, ಜನರ ಸಹಕಾರದಿಂದಾಗಿ ಕೋವಿಡ್‌ ಮೊದಲ ಲಸಿಕೆಹಾಕುವ ನಿಟ್ಟಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶೇ.95ರ ಹೊಸ್ತಿಲಲ್ಲಿದ್ದು, ಬಾಕಿ ಉಳಿದವರನ್ನೂ ಪತ್ತೆಹಚ್ಚಿ ಲಸಿಕೆ ಹಾಕಿಸಲಾಗುತ್ತಿದೆ.
ಡಾ| ನಾಗರಾಜ್‌ ಕೆ.ವಿ., ವೈದ್ಯಾಧಿಕಾರಿ,
ಆರ್‌ಎಚ್‌-2 ಪ್ರಾಥಮಿಕ ಆರೋಗ್ಯಕೇಂದ್ರ

ಜಿಲ್ಲೆಯಲ್ಲೇ ಆರ್‌ಎಚ್‌-1 ಗ್ರಾಪಂ ಲಸಿಕೆ ಗುರಿ ಸಾಧನೆಯಲ್ಲಿ ನಂ.1 ಸ್ಥಾನದಲ್ಲಿದೆ. ಸಿಂಧನೂರು ನಗರ ಆರೋಗ್ಯ ಕೇಂದ್ರ 2ನೇಹಂತದಲ್ಲಿದೆ.ಕೋವಿಡ್‌ ಮೊದಲ ಡೋಸ್‌ ಶೇ.100ರಷ್ಟು ಜನರಿಗೆ ಹಾಕಲು ಲಸಿಕೆ ಮೇಳ ಮುಂದುವರಿಸಲಾಗಿದೆ.
ಡಾ| ಅಯ್ಯನಗೌಡ, ತಾಲೂಕು
ವೈದ್ಯಾಧಿಕಾರಿ, ಆರೋಗ್ಯ ಇಲಾಖೆ, ಸಿಂಧನೂರು

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next