Advertisement

ವಿಶಾಖಪಟ್ಟಣವೋ; ಹುಬ್ಬಳ್ಳಿ ವಲಯವೋ?

12:03 PM Sep 29, 2019 | Naveen |

ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು: ಆಡಳಿತಾತ್ಮಕ ಸಮಸ್ಯೆ ಎದುರಿಸುವ ಸ್ಪಷ್ಟ ಸೂಚನೆ ಇದ್ದಾಗ್ಯೂ ಕೇಂದ್ರ ಸರ್ಕಾರ ಗುಂತಕಲ್‌ ವಿಭಾಗವನ್ನು ವಿಶಾಖಪಟ್ಟಣದಲ್ಲಿ ಸ್ಥಾಪಿಸಲು ಹೊರಟಿರುವ ಸೌಥ್‌ ಕೋಸ್ಟಲ್‌ ರೈಲ್ವೆ ವಿಭಾಗಕ್ಕೆ ಸೇರಿಸಲು ಯೋಜನೆ ರೂಪಿಸಿದ್ದಕ್ಕೆ ಜಿಲ್ಲೆಯಲ್ಲಿ ತೀವ್ರ ಪತಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಜಿಲ್ಲೆಯ ಸಂಸದ ರಾಜಾ ಅಮರೇಶ್ವರ ನಾಯಕ ಕೇಂದ್ರ ಮತ್ತು ರಾಜ್ಯ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ವಿಶಾಖಪಟ್ಟಣಕ್ಕೆ ಸೇರಿಸದಂತೆ ಒತ್ತಾಯಿಸಿದ್ದಾರೆ.

Advertisement

ಒಂದು ವೇಳೆ ಗುಂತಕಲ್‌ ಸೇರಿಸುವುದು ಅನಿವಾರ್ಯವಾದರೆ, ರಾಯಚೂರನ್ನು ಹುಬ್ಬಳ್ಳಿ ವಲಯಕ್ಕೆ ಸೇರಿಸುವಂತೆ ತಾಕೀತು ಮಾಡಿದ್ದಾರೆ. ಆದರೆ, ಒಂದೆಡೆ ಅಂಥ ಯಾವುದೇ ಪ್ರಸ್ತಾವನೆಗಳಿಲ್ಲ ಎಂದು ಅಧಿಕಾರಿಗಳು ಹೇಳಿದರೆ, ಮತ್ತೂಂದೆಡೆ ಅಧಿಕಾರಿಗಳ ತಂಡ ಈಗಾಗಲೇ ವರದಿ ಪಡೆದು ಲಾಭ-ನಷ್ಟದ ಲೆಕ್ಕಾಚಾರ ಕೂಡ ಮಾಡುತ್ತಿದೆ ಎನ್ನುತ್ತಿವೆ ಮೂಲಗಳು.

ಅತಿ ದೊಡ್ಡ ವಿಭಾಗ: ಗುಂತಕಲ್‌ ರೈಲ್ವೆ ವಿಭಾಗದೇಶದಲ್ಲೇ ಎರಡನೇ ದೊಡ್ಡ ವಲಯ ಎನ್ನುವ ಗರಿಮೆ ಹೊಂದಿದೆ. ಸುಮಾರು 1300 ಕಿ.ಮೀ
ವ್ಯಾಪ್ತಿ ಒಳಗೊಂಡಿದೆ ಎನ್ನಲಾಗುತ್ತಿದೆ. ರಾಜ್ಯದ ರಾಯಚೂರು, ಯಾದಗಿರಿ ಜಿಲ್ಲೆಗಳ ಜತೆಗೆ ವಾಡಿ ಸಮೀಪದ ವರೆಗೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡರೆ
ಇತ್ತ ತುಂಗಭದ್ರಾ ವರೆಗೂ ಬರಲಿದೆ. ಉಳಿದ ಭಾಗ ಆಂಧ್ರಪ್ರದೇಶದಲ್ಲಿದೆ. ಆದರೆ, ಆಂಧ್ರಪ್ರದೇಶ ಇಬ್ಭಾಗವಾದ ಕಾರಣ ಅಲ್ಲಿನ ಸರ್ಕಾರಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಲಂಗಾಣದಲ್ಲಿ ಸಿಕಂದರಾಬಾದ್‌ ಹಾಗೂ ಆಂಧ್ರದಲ್ಲಿ ವಿಶಾಖಪಟ್ಟಣ ವಲಯ ನಿರ್ಮಿಸಲು ಮುಂದಾಗಿದೆ.

ವಿಶಾಖಪಟ್ಟಣಕ್ಕೆ ವಿಜಯವಾಡ, ಗುಂಟೂರು ಜತೆಗೆ ಗುಂತಕಲ್‌ ಕೂಡ ಸೇರಿಸುವ ಯೋಜನೆ ರೂಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next