Advertisement

ಮುಂದಿನ ಶೈಕ್ಷಣಿಕ ವರ್ಷಕ್ಕೆ ಐಐಐಟಿ ಆರಂಭ: ಕುಮಾರ

05:16 PM Nov 09, 2019 | Naveen |

ರಾಯಚೂರು: ಮುಂದಿನ ಶೈಕ್ಷಣಿಕ ವರ್ಷದಿಂದ ನಗರದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಐಐಐಟಿಯನ್ನು ತಾತ್ಕಾಲಿಕವಾಗಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ ನಿರ್ದೇಶನ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಐಐಐಟಿ ಹೈದರಾಬಾದ್‌ ಅಧಿಕಾರಿಗಳ ತಂಡದೊಂದಿಗೆ ಶುಕ್ರವಾರ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಐಐಐಟಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಟ್ಟಡ ಕಾಮಗಾರಿ ನಿರ್ಮಾಣ ಹಂತದಲ್ಲಿದೆ. ಮುಖ್ಯವಾಗಿ ರಸ್ತೆ ನಿರ್ಮಾಣಕ್ಕೆ ಮೊದಲಾದ್ಯತೆ ನೀಡಬೇಕು. ನಂತರ ಕಾಂಪೌಂಡ್‌, ವಿದ್ಯುತ್‌, ನೀರು ಸರಬರಾಜು ಕಾರ್ಯಗಳನ್ನು ಶೀಘ್ರದಲ್ಲೇ ಮುಗಿಸಬೇಕು ಎಂದರು.

ಈಗಾಗಲೇ ಹೈದರಾಬಾದ್‌ ಐಐಐಟಿಯಲ್ಲಿ ಮೊದಲನೇ ವರ್ಷ ಶುರುವಾಗಿದ್ದು, 32 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮುಂದಿನ ವರ್ಷ ಇಲ್ಲಿಯೇ ಆರಂಭಿಸಲಾಗುವುದು. ಅದಕ್ಕೆ ಬೇಕಾದ ಅನುದಾನಕ್ಕಾಗಿ ಕಲ್ಯಾಣ ಕರ್ನಾಟಕ
ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ವರದಿ ಸಿದ್ಧಪಡಿಸುವಂತೆ ಸೂಚಿಸಿದರು.

ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯಕ್ಕಾಗಿ 32 ಕೊಠಡಿ, ಮೂಲ ಸೌಕರ್ಯ ಒಳಗೊಂಡ ಎರಡು ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ. ಒಂದು ವಸತಿ ನಿಲಯ ನಿರ್ಮಾಣಕ್ಕೆ 1.5 ಕೋಟಿ ರೂ. ವೆಚ್ಚವಾಗುತ್ತಿದ್ದು, ಮುಂದಿನ ವರ್ಷದ ವೇಳೆಗೆ ಕಾಮಗಾರಿ ಮುಗಿಯಲಿದೆ ಎಂದು ತಂಡದ ಸದಸ್ಯರಿಗೆ ವಿವರಿಸಿದರು.

ಹೈದರಾಬಾದ್‌ ಐಐಐಟಿ ತಂಡದೊಂದಿಗೆ ಚರ್ಚಿಸಿದ ಡಿಸಿ, ಏನೇನು ವ್ಯವಸ್ಥೆ ಕಲ್ಪಿಸಬೇಕು ಎಂಬ ಕುರಿತು ಮಾಹಿತಿ ಪಡೆದರು. ಕೂಡಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿ ತ್ವರಿತಗತಿಯಲ್ಲಿ ಎಲ್ಲ ಕಾಮಗಾರಿ ಮುಗಿಸುವಂತೆ ಸೂಚಿಸಿದರು.

Advertisement

ರಾಯಚೂರು ವಿಭಾಗೀಯ ಆಯುಕ್ತ ಸಂತೋಷ ಕುಮಾರ, ಸರ್ಕಾರಿ ಇಂಜಿನಿಯರ್‌ ಕಾಲೇಜ್‌ ಪ್ರಾಧ್ಯಾಪಕ ಕೆ.ಆರ್‌.ದಿನೇಶ್‌, ಕರ್ನಾಟಕ ನೀರಾವರಿ ನಿಗಮದ ಎಇಇ ವಿದ್ಯಾಸಾಗರ್‌, ಬಸವರಾಜ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ, ತಂಡದ ಸದಸ್ಯರಾದ ಡಾ|ಪ್ರೇಮಪಾಲ್‌, ಸಾರಂಗದಾರ, ವಿಜಯಕುಮಾರ, ಸಿ.ಎಚ್‌. ಸುಬ್ರಮಣ್ಯಂ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next