Advertisement

ವೇತನ ಒಪ್ಪಂದ ಶೀಘ್ರ ಜಾರಿಗೆ ಒತ್ತಾಯ

12:51 PM Feb 01, 2020 | |

ರಾಯಚೂರು: 11ನೇ ದ್ವಿಪಕ್ಷ ವೇತನ ಒಪ್ಪಂದವನ್ನು ಕೂಡಲೇ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖೀಲ ಭಾರತ ಬ್ಯಾಂಕ್‌ ಮುಷ್ಕರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಶುಕ್ರವಾರ ನಗರದ ಸ್ಟೇಷನ್‌ ರಸ್ತೆಯಲ್ಲಿರುವ ಎಸ್‌ಬಿಐ ಎದುರು ಪ್ರತಿಭಟನೆ ನಡೆಸಿದರು.

Advertisement

ಈಗಾಗಲೇ ಕೇಂದ್ರ ಸರ್ಕಾರವು ವೇತನ ಒಪ್ಪಂದ ಮಾಡಿದೆ. ಆದರೆ, ಇದುವರೆಗೂ ಜಾರಿಗೊಳಿಸದೇ ಇರುವ ಕ್ರಮ ಖಂಡನೀಯ. ಕೇಂದ್ರ ಸರ್ಕಾರ ಬ್ಯಾಂಕ್‌ ಉದ್ಯೋಗಿಗಳ ವಿರೋಧಿ ನೀತಿ ಜಾರಿಗೆ ತರಬಾರದು ಹಾಗೂ ಐದು ದಿನಗಳ ಬ್ಯಾಂಕಿಂಗ್‌ ವ್ಯವಸ್ಥೆಯನ್ನು
ಜಾರಿಗೊಳಿಸಬೇಕು. ವಿಶೇಷ ಭತ್ಯೆಯನ್ನು ಮೂಲಭತ್ಯೆಯೊಂದಿಗೆ ವಿಲೀನಗೊಳಿಸಬೇಕು ಎಂದು ಆಗ್ರಹಿಸಿದರು.

ಎನ್‌ಪಿಎಸ್‌ ಪಿಂಚಣಿ ಯೋಜನೆ ರದ್ದುಪಡಿಸಬೇಕು ಮತ್ತು ಪಿಂಚಣಿ ಪರಿಷ್ಕರಣೆ ಮಾಡಬೇಕು. ಕುಟುಂಬ ಪಿಂಚಣಿ ಪರಿಷ್ಕರಣೆ ಕೂಡಲೇ ಮಾಡಬೇಕು. ಬ್ಯಾಂಕ್‌ ಗಳ ನಿರ್ವಹಣೆ ಲಾಭದ ಮೇಲೆ ಸಿಬ್ಬಂದಿ ಕಲ್ಯಾಣ ನಿಧಿ ಮೀಸಲಿಡಬೇಕು ಎಂದು
ಒತ್ತಾಯಿಸಿದರು.

ನಿವೃತ್ತ ನಂತರ ದೊರೆಯುವ ಹಣದ ಮೇಲೆ ಸಂಪೂರ್ಣ ತೆರಿಗೆ ವಿನಾಯ್ತಿ
ನೀಡಬೇಕು. ಶಾಖೆಗಳ್ಲಲಿ ಒಂದೇ ತರವಾದ ವ್ಯವಹಾರ ಸಮಯ ಜಾರಿಗೆ ತರಬೇಕು.
ಬ್ಯಾಂಕ್‌ ಮಿತ್ರರಿಗೆ ಹಾಗೂ ಗುತ್ತಿಗೆ ನೌಕರರಿಗೆ ಸಮಾನ ಕೆಲಸ ಸಮಾನ ವೇತನ ಪದ್ಧತಿ ಜಾರಿಗೊಳಿಸಬೇಕು. ಬ್ಯಾಂಕ್‌ಗಳ ನಿವೃತ್ತ ನೌಕರರ ಬೇಡಿಕೆ ಈಡೇರಿಸಬೇಕು ಮತ್ತು ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಿಲ್ಲಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ ಗಳನ್ನು ದುರ್ಬಲಗೊಳಿಸಬಾರದು. ವಿಸ್ತಾರಗೊಳಿಸಬೇಕು. ವಸೂಲಾಗದ ಸಾಲ ವಸೂಲಾತಿಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಾಲ ಮರುಪಾವತಿ ಮಾಡದ ಉದ್ದೇಶ ಪೂರ್ವಕ ಸಾಲ ಸುಸ್ತಿದಾರರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.

ಬ್ಯಾಂಕ್‌ ನೌಕರರ ಸಂಘದ ಪದಾಧಿಕಾರಿಗಳಾದ ಸೋಮಶೇಖರ,
ಕುಮಾರ, ಸಲಾವುದ್ದೀನ್‌, ಗೋವಿಂದರಾವ್‌, ಜೆ. ಸಿದ್ದಯ್ಯ, ಕೆ. ಪದ್ಮಾವತಿ, ವಾಣಿಶ್ರೀ
ಕುಲಕರ್ಣಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next