Advertisement
ಸಮೀಪದ ಯರಮರಸ್ ಬಳಿ ಉದ್ದೇಶಿತ ವಿಮಾನನಿಲ್ದಾಣ ಸ್ಥಳವನ್ನು ಶನಿವಾರ ಪರಿಶೀಲಿಸಿದ ಬಳಿಕ ನಿಲ್ದಾಣಸ್ಥಳಾಂತರಕ್ಕೆ ನಿಗದಿ ಮಾಡಿದ ಸಿಂಗನೋಡಿಗೂಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ವರದಿ ಪಡೆದರು. ಯರಮರಸ್ ವಿಐಪಿ ಸರ್ಕ್ನೂಟ್ ಹೌಸ್‌ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕ್ಯಾ. ಶಮಂತ್, ಉದ್ದೇಶಿತನಿಲ್ದಾಣ ಸ್ಥಳ ಕುರಿತು ಮಾಹಿತಿ ಪಡೆದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಮೂಲನಕ್ಷೆ ವೀಕ್ಷಿಸಿದರು. ನಕ್ಷೆ ಪ್ರಕಾರ ನಿಲ್ದಾಣ ನಿರ್ಮಿಸಿದರೆ ವೈಟಿಪಿಎಸ್ ಚಿಮಣಿ ಅಡ್ಡಿಯಾಗುವ ಸಾಧ್ಯತೆ ಇದೆ. ಆದರೆ, ಇನ್ನೂ ಸಾಕಷ್ಟು ಸ್ಥಳಾವಕಾಶವಿದ್ದು, ಮಾರ್ಗ ಬದಲಾವಣೆಗೆ ಅವಕಾಶವಿದೆ ಎಂದರು.
Related Articles
Advertisement
ಕೆಪಿಟಿಸಿಎಲ್ ಅಧಿಕಾರಿ ಪ್ರತಿಕ್ರಿಯಿಸಿ, 110, 210 ಕೆವಿ ವಿದ್ಯುತ್ ಕಂಬಗಳು ಹಾದು ಹೋಗಿವೆ. ಎಷ್ಟು ಕಂಬಗಳನ್ನು ಸ್ಥಳಾಂತರಿಸಬೇಕು ಎಂಬುದನ್ನು ತಿಳಿಸಿದರೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಒಂದೇ ಕಂಬ ಬದಲಿಸುವುದು ಕಷ್ಟ. ಕನಿಷ್ಟ ನಾಲ್ಕೈದು ಕಂಬಗಳಾದರೂಸ್ಥಳಾಂತರ ಮಾಡಬೇಕಾಗುತ್ತದೆ ಎಂದರು. ಕ್ಯಾ.ಶಮಂತ್ ಪ್ರತಿಕ್ರಿಯಿಸಿ, ಈಗಲೇ ಹೇಳುವುದು ಕಷ್ಟ.
ನಮ್ಮ ತಾಂತ್ರಿಕ ತಂಡ ಬಂದು ಪರಿಶೀಲನೆ ನಡೆಸಲಿದೆ. ಆಗ ಮಾರ್ಗ ಬದಲಾವಣೆ ಕಂಬಗಳ ಸ್ಥಳಾಂತರ ಬೇಕೆ ಬೇಡವೇ ಎಂಬ ಬಗ್ಗೆ ನಿರ್ಧರಿಸಬಹುದು. ಅದರ ಅಂದಾಜು ಮೊತ್ತ ಎಷ್ಟಾಗಬಹುದು ಎಂಬುದು ಕೂಡ ಆ ಮೇಲೆಯೇ ತಿಳಿಯಲಿದೆ ಎಂದರು.
ಸ್ಥಳದಲ್ಲಿದ್ದ ಸರ್ವೇ ಅಧಿಕಾರಿ ಅನಿಲಕುಮಾರಪ್ರತಿಕ್ರಿಯಿಸಿ, ಈಗಾಗಲೇ ಸ್ವಾ ಧೀನಪಡಿಸಿಕೊಂಡ ಎಲ್ಲ ಸ್ಥಳದ ಸರ್ವೆ ಮಾಡಿದ್ದು, ಗಡಿ ಗುರುತಿಸಲಾಗಿದೆ ಎಂದರು. ಎಡಿಸಿ ದುರುಗೇಶ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ತಹಶೀಲ್ದಾರ್ ಡಾ| ಹಂಪಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.