Advertisement

ಕ್ರೀಡೆಯಿಂದ ವೃತ್ತಿಯಲ್ಲಿ ನವೋಲ್ಲಾಸ: ದುರುಗೇಶ್‌

04:01 PM Feb 14, 2021 | Team Udayavani |

ರಾಯಚೂರು: ಸರ್ಕಾರಿ ನೌಕರರ ಕೇವಲ·ಬೌದ್ಧಿಕ ಶ್ರಮಕ್ಕೆ ಒತ್ತು ನೀಡುವುದರ ಜತೆಗೆಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ
ಶ್ರಮಕ್ಕೂ ಒತ್ತು ನೀಡಬೇಕು. ಕ್ರೀಡೆಗಳಿಂದವೃತ್ತಿಯಲ್ಲಿ ನವೊಲ್ಲಾಸ ಮೂಡಲಿದೆ ಎಂದುಅಪರ ಜಿಲ್ಲಾ ಧಿಕಾರಿ ಕೆ.ಆರ್‌.ದುರುಗೇಶ್‌ತಿಳಿಸಿದರು.

Advertisement

ನಗರದ ಕೃಷಿ ವಿಶ್ವವಿದ್ಯಾಲಯದಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಕಾರ್ಯಕ್ರಮದ ಧ್ವಜಾರೋಹಣನೆರವೇರಿಸಿ ಮಾತನಾಡಿದರು.ಒತ್ತಡದಲ್ಲಿ ಕಾರ್ಯನಿರ್ವಹಿಸುವಸರ್ಕಾರಿ ನೌಕರರಿಗೆ ಕ್ರೀಡೆ ಅತ್ಯುತ್ತಮಮಾರ್ಗವಾಗಿದೆ. ಮಾನಸಿಕ ಹಾಗೂ ದೈಹಿಕಸದೃಢತೆ ಕಾಪಾಡುವುದು ಸರ್ಕಾರಿ ನೌಕರರಆದ್ಯತೆಯಾಗಬೇಕು. ಉತ್ತಮ ಆರೋಗ್ಯಕ್ಕೆಒಳಾಂಗಣ ಹಾಗೂ ಹೋರಾಂಗಣಕ್ರೀಡೆಗಳು ಸಹಕಾರಿ. ನಿರಂತರವಾಗಿಅವುಗಳಲ್ಲಿ ತೊಡಗಿಸಿಕೊಂಡರೆ ದೈಹಿಕದೃಢತೆ ಹಾಗೂ ಮಾನಸಿಕ ಸಬಲತೆಕಾಯ್ದುಕೊಳ್ಳಬಹುದು. ಆ ಮೂಲಕಕೆಲಸದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯಲಿದೆಎಂದರು.

ಕ್ರೀಡಾಕೂಟದಲ್ಲಿ ಸಕ್ರಿಯವಾಗಿಭಾಗವಹಿಸಬೇಕು. ಜಿಲ್ಲೆಯ ಸರ್ಕಾರಿನೌಕರರಿಗೆ ಎರಡು ದಿನ ವಿವಿಧರೀತಿಯ ಕ್ರೀಡಾಕೂಟ ಹಾಗೂವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳನ್ನುಆಯೋಜಿಸಲಾಗಿದೆ. ಎಲ್ಲರೂ ಇವುಗಳಲ್ಲಿಭಾಗವಹಿಸಿ, ತಮ್ಮಲ್ಲಿ ಅಡಗಿರುವಪ್ರತಿಭೆ ಪ್ರದರ್ಶಿಸಿ, ಕ್ರೀಡಾಕೂಟಯಶಸ್ವಿಗೊಳಿಸುವಂತೆ ಕೋರಿದರು.ಅಥ್ಲೆಟಿಕ್ಸ್‌, ಫುಟ್ಬಾಲ್‌, ವಾಲಿಬಾಲ್‌,ಥ್ರೋಬಾಲ್‌, ಕಬಡ್ಡಿ, ಟೆನಿಸ್‌, ಹಾಕಿ,ಬ್ಯಾಡ್ಮಿಂಟನ್‌, ಚೆಸ್‌, ಟೇಬಲ್‌ ಟೆನಿಸ್‌,ಟೆನ್ನಿಕಾಯ್‌, ಕ್ರಿಕೆಟ್‌, ಬಾಸ್ಕೆಟ್‌ಬಾಲ್‌, ಈಜು, ಕೇರಂ, ವೇಟ್‌ ಮತ್ತುಪವರ್‌ ಲಿಗ್‌ ಸೇರಿದಂತೆ ವಿವಿಧರೀತಿಯ ಕ್ರೀಡೆಗಳು ಹಾಗೂ ಸಾಂಸ್ಕೃತಿಕಕಾರ್ಯಕ್ರಮಗಳಲ್ಲಿ ಜಾನಪದ ನೃತ್ಯ, ಗೀತೆ,ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ವಾದ್ಯ,
ಶಾಸ್ತ್ರೀಯ ನೃತ್ಯ ಹಾಗೂ ಕಿರು ನಾಟಕಗಳಪ್ರದರ್ಶನ ಜರುಗಲಿದೆ.

ಹಿರಿಯಕ್ರೀಡಾಪಟು ನರಸಪ್ಪ ಕ್ರೀಡಾಪಟುಗಳಿಗೆಪ್ರತಿಜ್ಞಾವಿಧಿ  ಬೋ ಧಿಸಿದರು.ಎಪಿಎಂಸಿ ಅಧ್ಯಕ್ಷ ರಾಮನಗೌಡಕರಡಿಗುಡ್ಡ, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದಸುಚೇತಾ ನೆಲವಿಗೆ, ನೌಕರರ ಸಂಘದ
ಅಧ್ಯಕ್ಷ ಭೀಮಪ್ಪ ನಾಯಕ, ಮಹಾಂತೇಶಬಿರಾದಾರ, ಚಂದ್ರಶೇಖರ ಹಿರೇಮಠ,ಹನುಮಂತ್ರಾಯ ಶಾಖೆ, ಶ್ರೀಶೈಲಗೌಡ,ಅಯ್ಯನಗೌಡ, ಶಂಕರಗೌಡ, ಡಾ|ಶಂಕರಗೌಡ, ಚಂದ್ರಶೇಖರ ಇತರರುಇದ್ದರು. ರಾಣೋಜಿ ನಿರೂಪಿಸಿದರು.

ಓದಿ :·ಅಂತಾರಾಜ್ಯ ಮೊಬೈಲ್‌ ಕಳರ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next