Advertisement

ಇಟ್ಟಿಗೆ ಭಟ್ಟಿ ಬಂದ್‌ಗೆ ತಹಶೀಲ್ದಾರ್‌ ಆದೇಶ

03:41 PM Mar 05, 2020 | Naveen |

ರಾಯಬಾಗ: ತಾಲೂಕಿನ ಜಲಾಲಪುರ ಗ್ರಾಮದ ಜನವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಇಟ್ಟಂಗಿ ಭಟ್ಟಿಗೆ ತಹಶೀಲ್ದಾರ್‌ ಚಂದ್ರಕಾಂತ ಭಜಂತ್ರಿ ಭೇಟಿ ನೀಡಿ ಇಟ್ಟಿಗೆ ತಯಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿಲು ಆದೇಶಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಜನಪ್ರದೇಶದಲ್ಲಿರುವ ಈ ಇಟ್ಟಂಗಿ ಭಟ್ಟಿಯಿಂದ ಸ್ಥಳೀಯರಿಗೆ ಚರ್ಮ ರೋಗ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುವಂತಾಗಿದೆ. ಸುತ್ತಮುತ್ತ ಇರುವ ಬೆಳೆಗಳ ಮೇಲೆ ಬೂದಿ ಕೂಡುವದರಿಂದ ಬೆಳೆ ಸರಿಯಾಗಿ ಬರುತ್ತಿಲ್ಲ. ಕೊಳವೆ ಬಾವಿ ನೀರು ಕಲುಷತಗೊಂಡಿದ್ದರಿಂದ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲವೆಂದು ಆರೋಪಿಸಿದ ಸ್ಥಳೀಯರು, ಕೂಡಲೇ ಇಟ್ಟಿಗೆ ಭಟ್ಟಿಯನ್ನು ಬಂದ್‌ ಮಾಡಿಸಬೇಕು ಎಂದರು.

ಪ್ರಕರಣ ಹಿನ್ನಲೆ: ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಕಲ್ಲಪ್ಪ ಕಾಡಾಪೂರೆ ಎಂಬುವರು ತಮ್ಮ ಜಮೀನದಲ್ಲಿ ಅನಧಿಕೃತವಾಗಿ ಇಟ್ಟಂಗಿ ಭಟ್ಟಿ ನಡೆಸುತ್ತಿದ್ದರು. ಇದು ಜನವಸತಿ ಪ್ರದೇಶವಾಗಿದ್ದರಿಂದ ಮತ್ತು ಸುತ್ತಮುತ್ತ ಸುಮಾರು 40 ಕುಟುಂಬಗಳು ವಾಸಿಸುತ್ತಿರುವುದರಿಂದ, ಇಟ್ಟಿಂಗಿ ಭಟ್ಟಿಯಿಂದ ಹಾರುವ ಧೂಳು ಮತ್ತು ಹೊಗೆಯಿಂದ ಇಲ್ಲಿನ ನಿವಾಸಿಗಳಿಗೆ ನೀರಿನ ಮತ್ತು ಆರೋಗ್ಯ ಸಮಸ್ಯೆ ಸೇರಿದಂತೆ ನಾನಾ ರೀತಿಯ ತೊಂದರೆ ಅನುಭವಿಸುತ್ತಿದ್ದರು. ಇಟ್ಟಂಗಿ ಭಟ್ಟಿ ನಡೆಸುತ್ತಿದ್ದ ಮಾಲೀಕರ ವಿರುದ್ಧ ಗ್ರಾಮದ ಸರ್ಜೇರಾವ್‌ ಕಾಂಬಳೆ ಹಾಗೂ ಸ್ಥಳೀಯರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಜಿಲ್ಲಾ ಧಿಕಾರಿಗಳಿಗೆ ಮತ್ತು ತಹಶೀಲ್ದಾರ್‌ಗೆ ಲಿಖೀತವಾಗಿ ಮನವಿ ಸಲ್ಲಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದ್ದರಿಂದ ಕಳೆದ ವಾರ ರಾಯಬಾಗ ಕಂದಾಯ ನಿರೀಕ್ಷಕರು ಮತ್ತು ಸಿಬ್ಬಂದಿ ಭೇಟಿ ನೀಡಿ ಇಟ್ಟಂಗಿ ಭಟ್ಟಿ ಸ್ಥಗಿತಗೊಳಿಸುವಂತೆ ತಿಳಿಸಿದ್ದರು. ಆದರೆ ಇದಕ್ಕೆ ಜಗ್ಗದ ಅದರ ಮಾಲೀಕ ನಿರಂತರವಾಗಿ ಇಟ್ಟಿಗೆ ತಯಾರಿಕೆ ಮಾಡುವುದನ್ನು ಮುಂದುವರೆಸಿದ್ದರು.

ಬುಧವಾರ ರಾಯಬಾಗ ತಹಶೀಲ್ದಾರ್‌ ಚಂದ್ರಕಾಂತ ಭಜಂತ್ರಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಸ್ಥಳೀಯರ ದೂರುಗಳನ್ನು ಆಲಿಸಿ, ಅನಧಿ ಕೃತವಾಗಿ ನಡೆಸುತ್ತಿರುವ ಇಟ್ಟಂಗಿ ಭಟ್ಟಿಯನ್ನು ಕೂಡಲೇ ಸ್ಥಗೀತಗೊಳಿಸುವಂತೆ ಆದೇಶಿಸಿದರು. ಈ ವೇಳೆ ಕಂದಾಯ ನಿರೀಕ್ಷಕ ಆರ್‌.ಎಂ. ಡಬ್ಬಗೋಳ, ಗ್ರಾಮಲೆಕ್ಕಾಧಿಕಾರಿ ಪದ್ಮಾಚಲೇಕರ, ಸರ್ಜೇರಾವ ಕಾಂಬಳೆ, ದಿನಕರ ಪೋಕಳೆ, ಸದಾಶಿವ ಕಾಂಬಳೆ, ಮಹಾವೀರ ಕಾಂಬಳೆ, ದಯಾನಂದ ಕಾಂಬಳೆ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next