ಅಮೇಠಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಅಮೇಠಿಯಲ್ಲಿ ಜನರು ರಾಹುಲ್ ಗಾಂಧಿಯ ಬದಲಿಗೆ ಬಿಜೆಪಿಯ ಸ್ಮತಿ ಇರಾನಿಯನ್ನು ಆಯ್ಕೆ ಮಾಡಿ ದ್ದಕ್ಕೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ಮತಗಳು ಬಿಜೆಪಿಗೆ ವಾಲಿದ್ದೇ ಕಾರಣ ಎನ್ನಲಾಗಿದೆ. ಅಮೇಠಿಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ನಾಯಕರು ಕಾಂಗ್ರೆಸ್‌ಗೆ ಸಹಕರಿ ಸಲಿಲ್ಲ. ರಾಹುಲ್‌ಗೆ 2014ರ ಚುನಾವಣೆಗಿಂತ ಹೆಚ್ಚಿನ ಮತಗಳು ಈ ಬಾರಿ ಸಿಕ್ಕಿವೆ. ಆದರೆ 2014ರಲ್ಲಿ ಬಿಎಸ್‌ಪಿಗೆ 57 ಸಾವಿರ ಮತ ಲಭ್ಯವಾಗಿತ್ತು. ಈ ಮತಗಳು ಕಾಂಗ್ರೆಸ್‌ಗೆ ಪರಿವರ್ತನೆಯಾಗಿದ್ದರೆ ಸ್ಮತಿ ಗೆಲ್ಲುತ್ತಿರಲಿಲ್ಲ. ಸ್ಮತಿ ಗೆದ್ದಿ ರುವುದು 50 ಸಾವಿರ ಮತ ಗಳ ಅಂತರದಿಂದ ಎಂದು ಉ.ಪ್ರ ಕಾಂಗ್ರೆಸ್ ಕಾರ್ಯದರ್ಶಿಗಳಾದ ಝಬೈರ್ ಖಾನ್ ಮತ್ತು ಕೆ.ಎಲ್.ಶರ್ಮಾ ಹೇಳಿದ್ದಾರೆ. ಇದಕ್ಕೆ ಅಮೇಠಿ ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥ ಯೋಗೇಂದ್ರ ಮಿಶ್ರಾ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪ್ರಮುಖ ವಿಪಕ್ಷ ಬೇಡಿಕೆ ಇಲ್ಲ: ರಣದೀಪ್ ಸಿಂಗ್
ಲೋಕಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗುವಷ್ಟು ಸ್ಥಾನಗಳನ್ನು ಕಾಂಗ್ರೆಸ್ ಹೊಂದಿಲ್ಲವಾದ್ದರಿಂದ, ಆ ಸ್ಥಾನಕ್ಕಾಗಿ ಬೇಡಿಕೆ ಇಡುವುದಿಲ್ಲ ಎಂದು ಕಾಂಗ್ರೆಸ್‌ನ ವಕ್ತಾರ ರಣದೀಪ್ ಸಿಂಗ್ ಸುಜೇìವಾಲ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 52 ಸ್ಥಾನಗಳನ್ನು ಗಳಿಸಿದೆ. ಪ್ರಮುಖ ವಿರೋಧ ಪಕ್ಷದ ಸ್ಥಾನಕ್ಕೆ 54 ಸ್ಥಾನಗಳ ಅಗತ್ಯವಿದೆ. ಹಾಗಾಗಿ, ಅಷ್ಟು ಸದಸ್ಯ ಬಲ ಇಲ್ಲದಿರುವುದರಿಂದ ನಾವು ಆ ಸ್ಥಾನಕ್ಕಾಗಿ ಬೇಡಿಕೆ ಇಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.