Advertisement
ಚುನಾವಣ ಫಲಿತಾಂಶದ ಬಳಿಕ ಪಕ್ಷದ ಅಧಿಕೃತ ಕಾರ್ಯ ಕ್ರಮಗಳಿಂದ ಅವರು ದೂರ ಉಳಿಯಲಾರಂಭಿಸಿರುವುದೂ ಈ ವದಂತಿಗಳಿಗೆ ಪುಷ್ಟಿ ನೀಡಿದೆ. ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಸಂಸದರ ಸಭೆಗೆ ಹಾಜರಾಗಲು ಅವರು ನಿರಾಕರಿಸಿದ್ದು, ಅವರ ಉಪಸ್ಥಿತಿಯಲ್ಲಿ ನಡೆಯಬೇಕಿದ್ದ ಪಕ್ಷದ ಹಲವು ಕಾರ್ಯಕ್ರಮಗಳು ಹಾಗೂ ಸಭೆಗಳು ರದ್ದಾಗಿವೆ ಎಂದು ಹೇಳಲಾಗಿದೆ.
ಅವರ ಈ ನಿರ್ಧಾರವನ್ನು ಬದಲಿಸಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್ಸಿನ ಹಿರಿಯ ನಾಯಕರು ಪ್ರಯತ್ನಿಸಿದ್ದರೂ ಅದು ಫಲ ನೀಡಿಲ್ಲ. ಹಾಗಾಗಿಯೇ, ಸಿಡಬ್ಲ್ಯುಸಿ ಸಭೆಯಲ್ಲಿ ಪರ್ಯಾಯ ನಾಯಕರನ್ನು ಹುಡುಕುವಂತೆ ಸೂಚಿಸಿದ್ದ ರಾಹುಲ್, ಕಾಂಗ್ರೆಸ್ಸಿಗೆ ಗಾಂಧಿ ಕುಟುಂಬದವರೇ ಅಧ್ಯಕ್ಷರಾಗಬೇಕೆಂದೇನೂ ಇಲ್ಲ ಎಂದಿದ್ದರು. ಆಗ, ರಾಹುಲ್‌ಗೆ ಅವರಿಗೆ ಪರ್ಯಾ ಯವಾಗಿ ಪ್ರಿಯಾಂಕಾ ಅವರ ಹೆಸರು ಪ್ರಸ್ತಾವವಾದಾಗ, “ದಯವಿಟ್ಟು ನನ್ನ ತಂಗಿ ಯನ್ನು ಇದರೊಳಗೆ ಎಳೆದು ತರಬೇಡಿ’ ಎಂದು ಕೇಳಿಕೊಂಡರೆಂದು ಮೂಲ ಗಳು ತಿಳಿಸಿವೆ.
Related Articles
ಮಾಧ್ಯಮಗಳಿಗೆ ಮನವಿ ಮಾಡಿರುವ ಕಾಂಗ್ರೆಸ್, ಮುಚ್ಚಿದ ಕೊಠಡಿಯಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯ ನಿರ್ಧಾರಗಳಿಗೆ ಗೌರವ ನೀಡಬೇಕು. ಸಭೆಯಲ್ಲಿ ನಡೆದಿರುವ ವಿಚಾರಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಕಿವಿಗೊಡಬಾರದು ಎಂದು ಮನವಿ ಮಾಡಿದೆ. ಜತೆಗೆ ದಯವಿಟ್ಟು ವದಂತಿಗಳನ್ನು ಹಬ್ಬಿಸದಂತೆ ಕೋರಿದೆ.
Advertisement
ಮತ್ತೆ ಮೂವರು ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆಲೋಕಸಭೆ ಚುನಾವಣೆಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಮುಂದುವರಿದಿದೆ. ಸೋಮವಾರ ಕಾಂಗ್ರೆಸ್‌ನ ಮೂವರು ರಾಜ್ಯ ಘಟಕದ ಅಧ್ಯಕ್ಷರು ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಈ ಮೂಲಕ ಫಲಿತಾಂಶದ ಬಳಿಕ ರಾಜೀನಾಮೆ ನೀಡಿದವರ ಸಂಖ್ಯೆ 6ಕ್ಕೇರಿದಂತಾಗಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಜಾಖರ್, ಜಾರ್ಖಂಡ್‌ನ ಅಜಯ್ ರಾಯ್ ಮತ್ತು ಅಸ್ಸಾಂ ಘಟಕದ ಅಧ್ಯಕ್ಷ ರಿಪುನ್ ಬೋರಾ ಅವರೇ ನೈತಿಕ ಹೊಣೆ ಹೊತ್ತು ಸೋಮವಾರ ರಾಜೀನಾಮೆ ನೀಡಿದವರು.