Advertisement

ವಯನಾಡ್‌ ಗೆದ್ದಾರೇ ರಾಹುಲ್‌?

10:28 PM Apr 01, 2019 | mahesh |

ಅಮೇಠಿ ಜತೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೇರಳದ ವಯನಾಡ್‌ನಿಂದಲೂ ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಭದ್ರ ಕೋಟೆ ಎಂಬ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ಅವರ ಸ್ಪರ್ಧೆಯ ಸುತ್ತ ಪಕ್ಷಿನೋಟ

Advertisement

ಕಾಂಗ್ರೆಸ್‌ ನಿರೀಕ್ಷೆಗಳೇನು?
ಮುಸ್ಲಿಂ, ಕ್ರಿಶ್ಚಿಯನ್‌ ಮತ್ತು ಜೈನ್‌ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಕ್ಷೇತ್ರ ವ್ಯಾಪ್ತಿಯಲ್ಲಿದ್ದಾರೆ.
ವಯನಾಡ್‌ ಜಿಲ್ಲೆಯಲ್ಲಿ ಹಿಂದೂ ಸಮುದಾಯದ ಪ್ರಮಾಣ ಶೇ.49.7. ಕ್ರಿಶ್ಚಿಯನ್‌, ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದ ಪ್ರಮಾಣ ಕ್ರಮವಾಗಿ ಶೇ. 21.5, 28.8 ಮತ್ತು 0.5. ಮಲಪ್ಪುರಂ ಜಿಲ್ಲೆಗೆ ಸಂಬಂಧಿಸಿದಂತೆ ಶೇ.70.4ರಷ್ಟು ಮಂದಿ ಮುಸ್ಲಿಂ ಸಮುದಾಯದವರಿದ್ದಾರೆ. ಶೇ.27.5ರಷ್ಟು ಹಿಂದೂಗಳು, ಶೇ.2ರಷ್ಟು ಮಂದಿ ಕ್ರಿಶ್ಚಿ ಯನ್‌ ಸಮುದಾಯದವರು ಇದ್ದಾರೆ.

ವಯನಾಡ್‌ ಕ್ಷೇತ್ರಕ್ಕೆ ಸದ್ಯ ಸಂಸದರಿಲ್ಲ. 2014ರಲ್ಲಿ 20 ಸಾವಿರ ಮತಗಳ ಅಂತರದಲ್ಲಿ ಜಯಸಾಧಿಸಿದ್ದ ಎಂ.ಐ.ಶನ್ವಾಸ್‌ ಇತ್ತೀಚೆಗೆ ನಿಧನರಾಗಿದ್ದರು. 2009ರಲ್ಲಿ ಅವರು, 1.5 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.  ವಯನಾಡ್‌, ಮಲಪ್ಪುರಂ ಜಿಲ್ಲೆಗಳ ತಲಾ ಮೂರು ವಿಧಾನಸಭಾ ಕ್ಷೇತ್ರಗಳು, ಕಲ್ಲಿಕೋಟೆಯ 1 ಕ್ಷೇತ್ರಗಳನ್ನು ಒಳಗೊಂಡು ಈ ಲೋಕಸಭಾ ಕ್ಷೇತ್ರವಿದೆ.

ರಾಜಕೀಯ ಬಲ ವಿವರ
ಕ್ಷೇತ್ರದ ಸಮುದಾಯವಾರು ಜನಸಂಖ್ಯೆ ಶೇ.56
ಮುಸ್ಲಿಂ ಶೇ.34
ಹಿಂದೂ ಶೇ.9
ಕ್ರಿಶ್ಚಿಯನ್‌ ಶೇ.01
ಇತರರು (ವಿಶೇಷವಾಗಿ ಜೈನರು)

ಹಾಲಿ ಶಾಸಕರ ಬಲವೆಷ್ಟು?
07 ವಿಧಾನಸಭಾ ಕ್ಷೇತ್ರಗಳು
04 ಎಲ್‌ಡಿಎಫ್
03 ಯುಡಿಎಫ್

Advertisement

ಎರಡು ಕ್ಷೇತ್ರಗಳಲ್ಲಿ ಆಡಳಿತಾರೂಢ ಎಲ್‌ಡಿಎಫ್ ಅಲ್ಪಅಂತರದಿಂದ ಗೆದ್ದಿವೆ. ಉಳಿದ ಕ್ಷೇತ್ರಗಳಲ್ಲಿ ಭಾರಿ ಅಂತರದಿಂದಲೇ ಯುಡಿಎಫ್ ಗೆದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next