Advertisement

Uber ಕ್ಯಾಬ್‌ನಲ್ಲಿ ರಾಹುಲ್‌ ಸಂಚಾರ: ಚಾಲಕನ ಜತೆ ಸಂವಾದ

01:17 AM Aug 20, 2024 | Team Udayavani |

ಲಕ್ನೋ: ಉತ್ತರಪ್ರದೇಶದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಉಬರ್‌ ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದು, ಚಾಲಕನೊಂದಿಗಿನ ಅವರ ಸಂಭಾಷಣೆ ಈಗ ವೈರಲ್‌ ಆಗಿದೆ. ಅದರಲ್ಲಿ ಅವರು ಗಿಗ್‌ ಕಾರ್ಮಿಕರ ಕುರಿತು ಚರ್ಚೆ ನಡೆಸಿದ್ದಾರೆ. ಕಡಿಮೆ ಆದಾಯ ಹಾಗೂ ಹಣದುಬ್ಬರವು ದೇಶದ ಜನರ ಬದುಕನ್ನು ಸಂಕಷ್ಟಕ್ಕೀಡು ಮಾಡಿದ್ದು, ಕ್ಯಾಬ್‌ ಚಾಲಕರು, ಡೆಲಿವರಿ ಏಜೆಂಟ್‌ಗಳನ್ನೂ ಒಳಗೊಂಡ ಗಿಗ್‌ ಕಾರ್ಮಿಕರೂ ಇದರಿಂದ ಹೊರತಾಗಿಲ್ಲ ಎಂದು ರಾಹುಲ್‌ ಉಬರ್‌ ಚಾಲಕ ಸುನಿಲ್‌ ಉಪಾ ಧ್ಯಾಯ್‌ ಅವರೊಂದಿಗೆ ಚರ್ಚಿಸಿದ್ದಾರೆ.

Advertisement

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿರುವ ರಾಹುಲ್‌, ಸುನಿಲ್‌ ಅವರ ಕುಟುಂಬವನ್ನೂ ಭೇಟಿ ಮಾಡಿ ಅವರ ಕಷ್ಟದ ಬಗ್ಗೆ ಅರಿಯಲು ಪ್ರಯತ್ನಿಸಿದ್ದಾಗೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next