Advertisement
ಕಾಸರಗೋಡಿನಲ್ಲಿ ಆಯೋಜಿಸಲಾದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಹುಲ್ ಅವರು ತಮ್ಮ ರಾಜಕೀಯ ಉದ್ದೇಶಕ್ಕಾಗಿ ನ್ಯಾಯಾಲಯದ ಆದೇಶವನ್ನೇ ಬೇರೆ ರೀತಿಯಲ್ಲಿ ಉಲ್ಲೇಖೀಸುತ್ತಿದ್ದಾರೆ. ರಾಜಕೀಯದಲ್ಲಿ ನ್ಯಾಯಾಲಯವನ್ನು ಎಳೆದು ತರುವ ಮೂಲಕ ಕೆಟ್ಟ ರಾಜಕೀಯ ಮಾಡಿದ್ದಾರೆ. ಇದು ಖಂಡನೀಯ ಎಂದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಮೂರನೇ ಎರಡು ಭಾಗ ಮತಗಳನ್ನು ಪಡೆಯುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ. ಕರ್ನಾಟಕದಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರದ ಲಾಲಸೆಯಲ್ಲಿ ಆಡಳಿತ ನಡೆಸುತ್ತಿದೆಯೇ ವಿನಹ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಿಲ್ಲ. ರಾಜ್ಯ ಸರಕಾರವು ಕೇಂದ್ರದಿಂದ ನೀಡಿದ ಅನುದಾನ ಬಳಕೆಯಲ್ಲೂ ವಿಫಲವಾಗಿದ್ದು, ಕೇಂದ್ರಕ್ಕೆ ಅನುದಾನ ಬಳಕೆಯ ಪ್ರಮಾಣ ಪತ್ರವನ್ನೂ ಒದಗಿಸಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆಲ್ಲಲಿದೆ ಎಂದರು. ವಿಪಕ್ಷ ವಿಕಾಸವಾದದ ಬಗ್ಗೆ ಮಾತನಾಡುವ ಬದಲು ಜನರನ್ನು ಗೊಂದಲಕ್ಕೀಡುಮಾಡುವ ಉದ್ದೇಶದಿಂದ ಆರೋಪಗಳನ್ನು, ಅಸತ್ಯವನ್ನು ಮಾತ್ರವೇ ಹೇಳುತ್ತಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೂ ಇಂದಿನ ಸೋನಿಯಾ ಗಾಂಧಿ, ರಾಹುಲ್
ಗಾಂಧಿ ನೇತೃತ್ವದ ಸರಕಾರಕ್ಕೂ ಯಾವುದೇ ಸಮಾನತೆ ಇಲ್ಲ. ಸ್ವಾತಂತ್ರ್ಯ
ಸಂದರ್ಭದಲ್ಲಿ ಗಾಂಧಿಯವರು ವಂದೇಮಾತರಂ ಮೂಲಕ ಹೋರಾಟ
ನಡೆಸಿದ್ದರೆ, ಇಂದಿನ ಗಾಂಧಿ ಕುಟುಂಬಕ್ಕೆ ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳು ಅಪಥ್ಯವಾಗಿವೆ. ದೇಶವನ್ನು ವಿಭಜಿಸುವ ವಿಷಯಗಳಿಗೆ ಅವರು ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
Related Articles
ದೇಶದಲ್ಲಿ ವಿಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ವಂಶವಾದವನ್ನು ಮುಂದುವರಿಸುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ವ್ಯಕ್ತಿಗಳಿದ್ದರೂ ಅವರಿಗೆ ಅವಕಾಶ ನೀಡಲಾಗುತ್ತಿಲ್ಲ. ಈಗಾಗಲೇ ನಡೆದಿರುವ ಪ್ರಥಮ ಹಂತದ ಮತದಾನದ ವೇಳೆ ಪ್ರಧಾನಿ ನರೇಂದ್ರ ಮೋದಿ ಹವಾ
ಕಂಡುಬಂದಿದ್ದು, ಎ. 18ರಂದು ನಡೆಯಲಿರುವ ದ್ವಿತೀಯ ಹಂತದ ಮತದಾನಕ್ಕೂ ಈ ಅಲೆ ಎಲ್ಲೆಡೆ ವ್ಯಕ್ತವಾಗಿದೆ. ದೇವೇಗೌಡರು ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇಶದ ಜನತೆ ವಂಶವಾದವನ್ನು ನಿರಾಕರಿಸುವ ಹುಮ್ಮಸ್ಸಿನಲ್ಲಿದ್ದಾರೆ ಎಂದರು.
Advertisement
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ಗೆ 3 ದಿನಗಳ ಪ್ರಚಾರನಿಷೇಧ ಮಾಡಿರುವ ಚುನಾವಣಾ ಆಯೋಗದ ಕ್ರಮದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ದೂರಿನ ಮೇರೆಗೆ ಕ್ರಮ ಕೈಗೊಳ್ಳುತ್ತದೆ. ಸ್ವಯಂ ಪ್ರೇರಿತವಾಗಿಯೂ ಕ್ರಮ ಕೈಗೊಳ್ಳುವ ಅವಕಾಶ ಆಯೋಗಕ್ಕಿದೆ. ಹಾಗಾಗಿ ಅದು ಮಾಡಿರುವ ಕ್ರಮ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ, ನಾಯಕರಾದ ಮೋನಪ್ಪ ಭಂಡಾರಿ, ಕ್ಯಾ|ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.