Advertisement
ಉತ್ತರಪ್ರದೇಶದ ರ್ಯಾಲಿಯೊಂದರಲ್ಲಿ ಶನಿ ವಾರ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯೊಂದು ಈಗ ವಿವಾದ ಸೃಷ್ಟಿಸಿದ್ದು, ಮೋದಿ ಹೇಳಿಕೆಗೆ ಕಾಂಗ್ರೆಸ್‌ನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು “ಭ್ರಷ್ಟಾಚಾರಿ ನಂ.1′ ಆಗಿಯೇ ಮೃತಪಟ್ಟರು ಎಂದು ಮೋದಿ ಭಾಷಣದಲ್ಲಿ ಹೇಳಿದ್ದರು. ಈ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕರಾದ ಪಿ. ಚಿದಂಬರಂ, ಅಶೋಕ್ ಗೆಹೊÉàಟ್ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿ ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, “ನಿಮ್ಮ ಹೇಳಿಕೆಗೆ ಪ್ರೀತಿ ಮತ್ತು ದೊಡ್ಡದಾದ ಆಲಿಂಗನವೇ ನನ್ನ ಉತ್ತರ’ ಎಂದು ಪ್ರತಿಕ್ರಿಯಿಸಿದ್ದಾರೆ.
ಭಟರು ಮಿಸ್ಟರ್ ಕ್ಲೀನ್ (ಸ್ವತ್ಛ ವ್ಯಕ್ತಿತ್ವವುಳ್ಳ ವರು) ಎಂದು ಬಣ್ಣಿಸಿರಬಹುದು. ಆದರೆ ರಾಜೀವ್ ಗಾಂಧಿ ಭ್ರಷ್ಟಾಚಾರಿ ನಂ.1 ಆಗಿಯೇ ಮೃತಪಟ್ಟರು’ ಎಂದಿದ್ದರು. 1980ರಲ್ಲಿ ರಾಜೀವ್ ಅವರ ಸರಕಾರಕ್ಕೆ ಕೊಡಲಿಯೇಟು ನೀಡಿದ ಬೊಫೋರ್ಸ್ ಹಗರಣವನ್ನು ಉಲ್ಲೇ ಖೀಸಿ ಮೋದಿ ಈ ಮಾತುಗಳನ್ನಾಡಿದ್ದರು.
ಸ್ವೀಡನ್‌ನ ರಕ್ಷಣಾ ಸಾಮಗ್ರಿ ತಯಾರಕ ಸಂಸ್ಥೆ ಬೊಫೋರ್ಸ್ ಮಾಜಿ ಪ್ರಧಾನಿ ರಾಜೀವ್‌ಗೆ ಕಿಕ್‌ಬ್ಯಾಕ್ ನೀಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಆದರೆ ರಾಜೀವ್ ಗಾಂಧಿ ಲಂಚ ಸ್ವೀಕರಿಸಿದ್ದಕ್ಕೆ ಯಾವುದೇ ಪುರಾವೆ ಇರದ ಕಾರಣ ಅವರಿಗೆ ಹೈಕೋರ್ಟ್ ಕ್ಲೀನ್‌ಚಿಟ್ ನೀಡಿತ್ತು.
Related Articles
ಪ್ರಧಾನಿ ಮೋದಿ ಹೇಳಿಕೆಗೆ ಸಂಬಂಧಿಸಿ ರವಿವಾರ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಮೋದಿಯವರೇ, ಹೋರಾಟ ಅಂತ್ಯವಾಗಿದೆ. ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ. ನಿಮ್ಮ ಕುರಿತು ನಿಮ್ಮೊಳಗೇ ಇರುವಂಥ ನಂಬಿಕೆಯನ್ನು ನನ್ನ ತಂದೆಯ ಮೇಲೆ ಹೊರಿಸುವುದರಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಲಾರಿರಿ. ನಿಮಗಿದೋ ಪ್ರೀತಿ ಮತ್ತು ಅಪ್ಪುಗೆಯನ್ನು ನೀಡಬಯಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಇದೇ ವೇಳೆ, ಪ್ರಿಯಾಂಕಾ ವಾದ್ರಾ ಅವರೂ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದು,“ರಾಜೀವ್‌ಗಾಂಧಿ ಅವರು ಅಮೇಠಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟರು. ಅದೇ ಅಮೇಠಿಯ ಜನರು ನಿಮಗೆ ಉತ್ತರ ಕೊಡುತ್ತಾರೆ. ನಿಜ ಮೋದಿಜೀ, ವಿಶ್ವಾಸ ಘಾತಕರನ್ನು ಈ ದೇಶ ಎಂದಿಗೂ ಕ್ಷಮಿಸಲ್ಲ’ ಎಂದು ಹೇಳಿದ್ದಾರೆ. ಕಾಂಗ್ರೆಸ್‌ಗೆ ಮತ ನೀಡಿ: ಮಾಯಾ
ಕಾಂಗ್ರೆಸ್ ಅನ್ನು ದೂರವಿಟ್ಟು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ ನಾಯಕಿ ಮಾಯಾವತಿ ಅವರು ರವಿವಾರ, “ಉತ್ತರಪ್ರದೇಶದ ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ಗೆà ಮತ ನೀಡಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಸೋಮವಾರ 5ನೇ ಹಂತದಲ್ಲಿ ಈ ಎರಡೂ ಕ್ಷೇತ್ರಗಳಿಗೂ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಾಯಾ ಅವರು ಪ್ರಕಟನೆ ಹೊರಡಿಸಿದ್ದು, ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ನಾವು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದೇವೆ. ಎಲ್ಲರೂ ಕಾಂಗ್ರೆಸ್‌ಗೆ ಮತ ಚಲಾಯಿಸಿ ಎಂದು ಕರೆ ನೀಡಿದ್ದಾರೆ. ಘಟಾನುಘಟಿಗಳ ಭವಿಷ್ಯ ಇಂದು ನಿರ್ಧಾರ
ಬಿಜೆಪಿ, ಕಾಂಗ್ರೆಸ್, ಎಸ್‌ಪಿ-ಬಿಎಸ್ಪಿ ಸಹಿತ ಪ್ರಮುಖ ರಾಜಕೀಯ ಪಕ್ಷಗಳಿಗೆ ಮಹತ್ವವೆನಿಸಿರುವ 5ನೇ ಹಂತದ ಮತದಾನ ಸೋಮವಾರ ನಡೆಯ ಲಿದೆ. 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಈ ಪೈಕಿ ಉತ್ತರಪ್ರದೇಶದ 14, ಪಶ್ಚಿಮ ಬಂಗಾಲದ 7, ಬಿಹಾರದ 5 ಕ್ಷೇತ್ರಗಳೂ ಸೇರಿವೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸ್ಮತಿ ಇರಾನಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎಸ್‌ಪಿ ನಾಯಕಿ ಪೂನಂ ಸಿನ್ಹಾ, ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಮತ್ತಿತರ ಘಟಾನುಘಟಿಗಳ ಭವಿಷ್ಯವೂ ಈ ಹಂತದಲ್ಲೇ ನಿರ್ಧಾರವಾಗಲಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತು ಪ್ರಧಾನಿ ಮೋದಿ ಆಡಿರುವ ಮಾತುಗಳು ಅವರ ಹತಾಶೆ ಮತ್ತು ಸೋಲುವ ಭೀತಿಯನ್ನು ತೋರಿ ಸಿವೆ. ಮೃತ ವ್ಯಕ್ತಿ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದನ್ನು ಯಾವುದಾದರೂ
ಧರ್ಮ ಒಪ್ಪುತ್ತದೆಯೇ?
– ಪಿ.ಚಿದಂಬರಂ, ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಕುರಿತು ಪ್ರಧಾನಿ ಮೋದಿ ಆಡಿರುವ ಪ್ರತಿಯೊಂದು ಪದವೂ ಸತ್ಯ. 1984ರ ಗಲಭೆಯಲ್ಲಿ ಸಿಕ್ಖರ ಹತ್ಯೆ ಯಾದಾಗ ಅದನ್ನು ರಾಜೀವ್‌ಗಾಂಧಿ ಬೆಂಬಲಿಸಿರಲಿಲ್ಲವೇ? ದೇಶದ ಜನರಿಗೆ ಎಲ್ಲವೂ ಗೊತ್ತಿದೆ.
– ಪ್ರಕಾಶ್ ಜಾಬ್ಡೇಕರ್, ಕೇಂದ್ರ ಸಚಿವ