ಕುಂಬಳೆ: ಕೇಂದ್ರ ಬಿ.ಜೆ.ಪಿ. ಸರಕಾರದ ದುರಾಡಳಿತ ಮತ್ತು ಕೇರಳ ಎಡರಂಗ ಸರಕಾರದ ಕೊಲೆ ರಾಜಕೀಯದಿಂದಾಗಿ ಈ ಬಾರಿ ಕೇಂದ್ರದಲ್ಲಿ ರಾಹುಲ್‌ಗಾಂಧಿ ಅವರ ನೇತೃತ್ವದ ಯು.ಪಿ.ಎ. ಜಾತ್ಯತೀತ ಸರಕಾರ ಬಹುಮತದಿಂದ ಅಧಿಕಾರಕ್ಕೇರುವುದಾಗಿ ಕಾಸರಗೋಡು ಲೋಕಸಭಾ ಐಕ್ಯ ರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಅವರು ಹೇಳಿದರು.
ಕಾಸರಗೋಡು ಪ್ರಸ್‌ಕ್ಲಬ್‌ನಲ್ಲಿ ಜರಗಿದ ಅಭ್ಯರ್ಥಿಯೊಂದಿಗೆ ಮುಖಾಮುಖೀ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಕಳೆದ ಯು.ಪಿ.ಎ. ಆಡಳಿತದ ಕಾಲದ ಕೇಂದ್ರ ಸರಕಾರದ ಅಭಿವೃದ್ಧಿಯನ್ನು ಜನ ಇನ್ನೂ ಮರೆತಿಲ್ಲ. ಪ್ರದಾನಿ ಮೋದಿಯವರ ಆಡಳಿತದಲ್ಲಿ ಬಡವರ ಏಳಿಗೆಯಾಗದೆ ಶ್ರೀಮಂತರ ಏಳಿಗೆಯಾಗಿದೆ.ಮಾತ್ರವಲ್ಲದೆ ಕೋಮುವಾದ ಬೆಳೆದಿದೆ ಎಂದು ಆರೋಪಿಸಿದರು.
ಹಾಲಿ ಕಾಸರಗೋಡು ಸಂಸದರ ಕಾಲದಲ್ಲಿ ಕಾಸರಗೋಡು ಕೇÒತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಣಿಯೂರು ಕಾಞಂಗಾಡು ರೈಲು ಹಳಿ ಸಂಪರ್ಕಕ್ಕೆ ರಾಜ್ಯ ಸರಕಾರ ನಿಧಿ ನೀಡದೆ ಒಪ್ಪಿಗೆ ನೀಡಲು ವಿಳಂವಾಗಿ ಅನಾಸ್ಥೆ ತೋರಿದೆ. ಕರ್ನಾಟಕದ ಖಾಸಗೀ ಆಸ್ಪತ್ರೆಗಳ ಲಾಬಿಗೆ ಮಣಿದು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಾಧ್ಯವಾಗಿಲ್ಲ. ಕೃಷಿ ಮತ್ತು ವಿದ್ಯಾಭ್ಯಾಸಕ್ಕೆ ಪೋÅತ್ಸಾಹ ನೀಡಿಲ್ಲವೆಂದು ಆರೋಪಿಸಿದರು.
ವಿಪಕ್ಷಗಳ ಹುರುಳಿಲ್ಲದ ಅಪಪ್ರಚಾರಕ್ಕೆ ಮತದಾರರು ಮಣಿಯದೆ ತನ್ನನ್ನು ಗೆಲ್ಲಿಸುವರೆಂಬ ವಿಶ್ವಾಸವಿದೆ. ಮಂಜೇಶ್ವರದಿಂದ ಕಲ್ಯಾಶೇÂರಿವಿಧಾನಸಭಾ ಕ್ಷೇತ್ರ ತನಕದ ತನ್ನ ಪರ್ಯಟನೆಯಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಬರಿಮಲೆ ಆಚಾರ ಸಂರಕ್ಷಣೆಗೆ ಯಾವುದೇ ಹೋರಾಟಕ್ಕೂ ತಾನು ಮತ್ತು ತನ್ನ ಬದ್ಧವೆಂದರು.
ತಾನು ಆಯ್ಕೆಯಾದಲ್ಲಿ ಕಾಣಿ ಯೂರು- ಕಾಞಂಗಾಡು ರೈಲು ಹಳಿ ಸಂಪರ್ಕ,ಕಾಸರಗೋಡಿನ ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗೆ ಪರಿಹಾರ,ಕಾಸರಗೋಡು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ಕೃಷಿಕರ ಮತ್ತು ಭಾಷಾ ಅಲ್ಪಸಂಖ್ಯಾಕರ ರಕ್ಷಣೆ, ಪೆರಿಯಾದ ಅವಳಿ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಶ್ರಮಿಸುವುದಲ್ಲದೆ ಜನರ ವಿವಿಧ ಸಮಸ್ಯೆಗಳಿಗೆ ಪರಿಹಾರ ಮತ್ತು ಜಾತಿ, ಮತ, ಪಕ್ಷ ಭೇದವೆನ್ನದೆ ಕ್ಷೇತ್ರದ ಅಭಿವೃದ್ಧಿಗೆ ತಾನು ಶ್ರಮಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಪ್ರಸ್ ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ ಅಧ್ಯಕ್ಷತೆ ಅಧ್ಯಕ್ಷತೆ ವಹಿಸಿದರು.ಕಾರ್ಯದರ್ಶಿ ಪದ್ಮೇಶ್ ಕೆ.ಪಿ. ಸ್ವಾಗತಿಸಿದರು.
ಬಹುಮತ ವಿಶ್ವಾಸ
ಈ ಬಾರಿ ಮತದಾರರು ಕೇಂದ್ರದಲ್ಲಿ ಮತ್ತು ಕೇರಳದಲ್ಲಿ ಜನ ಬದಲಾವಣೆಗೆ ಬಯಸಿದ್ದಾರೆ. ಕಾಸರಗೋಡಿನಲ್ಲಿ ಎಡರಂಗ ಮತ್ತು ಐಕ್ಯರಂಗದ ಮಧ್ಯೆ ಸ್ಫರ್ಧೆಯಾಗಿದೆ.ಕಳೆದ ಬಾರಿ ಕೇವಲ 6,921 ಮತಗಳ ಅಂತರಂಗದಿಂದ ಐಕ್ಯರಂಗದ ಅಭ್ಯರ್ಥಿ ಸೋಲಬೇಕಾಯಿತು. ಆದರೆ ಈ ಬಾರಿ ಐಕ್ಯರಂಗದ ನಾನು ಬಹುಮತದಿಂದ ಗೆಲ್ಲುವ ವಾತಾವಾರಣವಿದೆ ಎಂದು ಉಣ್ಣಿತ್ತಾನ್ ಅವರು ಹೇಳಿದರು.