ಹಾಲಿ ಅಲಹಾಬಾದ್ ಹೈಕೋರ್ಟ್ ನ್ಯಾ.ವಿವೇಕ್ ಕುಮಾರ್ ಸಿಂಗ್ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ, ಗುಜರಾತ್ ಹೈಕೋರ್ಟ್‌ನ ನ್ಯಾ.ಅಲ್ಪೇಶ್ ವೈ.ಕೊಗ್ಜಿ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ, ಗುಜರಾತ್ ಹೈಕೋರ್ಟ್‌ನ ನ್ಯಾ.ಗೀತಾ ಗೋಪಿ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ, ಗುಜರಾತ್ ಹೈಕೋರ್ಟ್‌ನ ನ್ಯಾ. ಸಮೀರ್ ಜೆ.ಡೇವ್ ಅವರನ್ನು ರಾಜಸ್ಥಾನ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಕೊಲಿಜಿಯಂ ಶಿಫಾರಸು ಮಾಡಿದೆ.
Advertisement
ಅದೇ ರೀತಿ ಹಾಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ. ಅರವಿಂದ್ ಸಿಂಗ್ ಸಾಂಗ್ವಾನ್ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ, ನ್ಯಾ.ಅವ್ನಿಶ್ ಜಿಗಾನ್ ಅವರನ್ನು ಗುಜರಾತ್ ಹೈಕೋರ್ಟ್‌ಗೆ, ನ್ಯಾ. ರಾಜ್ ಮೋಹನ್ ಸಿಂಗ್ ಅವರನ್ನು ಮಧ್ಯಪ್ರದೇಶದ ಹೈಕೋರ್ಟ್‌ಗೆ ಹಾಗೂ ನ್ಯಾ.ಅರುಣ್ ಮೊಂಗಾ ಅವರನ್ನು ರಾಜಸ್ಥಾನ ಹೈಕೋರ್ಟ್‌ಗೆ ವರ್ಗಾವಣೆಗೊಳಿಸಲು ಕೊಲಿಜಿಯಂ ಶಿಫಾರಸು ಮಾಡಿದೆ.