Advertisement

Rahul Gandhi ಅಮೆರಿಕ ಪ್ರವಾಸ: ಭರ್ಜರಿ ಸ್ವಾಗತ

01:13 AM Sep 09, 2024 | Team Udayavani |

ಹ್ಯೂಸ್ಟನ್‌: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಸೆ.8ರಿಂದ ಸೆ.10ರವರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಮೊದಲಿಗೆ ಹ್ಯೂಸ್ಟನ್‌ಗೆ ಆಗಮಿಸಿದ್ದಾರೆ. ದಿಲ್ಲಿಯಿಂದ ಡಲ್ಲಾಸ್‌ಗೆ ಆಗಮಿಸಿದ ಸಂದರ್ಭದಲ್ಲಿ ಭಾರತೀಯ ಮೂಲದ ಪ್ರಮುಖರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ನಲ್ಲಿ “ಅಮೆರಿಕಕ್ಕೆ ಬಂದಿದ್ದೇನೆ. ಭಾರತೀಯ ಮೂಲದ ಪ್ರಮುಖರಿಂದ ಆತ್ಮೀಯ ಸ್ವಾಗತವೂ ಸಿಕ್ಕಿದೆ’ ಎಂದು ಬರೆದುಕೊಂಡಿದ್ದಾರೆ. ಟೆಕ್ಸಸ್‌ ವಿವಿಯಲ್ಲಿ ಆಯೋಜಿಸಲಾಗಿ ರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜತೆಗೆ ಅವರು ಸಂವಾದದಲ್ಲಿ ಭಾಗವಹಿಸಿದರು.ಈ ಬಗ್ಗೆ ಬರೆದುಕೊಂಡಿರುವ ಅವರು, “ವಿದ್ಯಾರ್ಥಿಗಳ ಜತೆಗೆ ವಿಶೇಷ ಹಾಗೂ ಅರ್ಥಪೂರ್ಣ ಸಂವಾದ ನಡೆ ಸಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

ಸೆ.9,10ರಂದು ರಾಹುಲ್‌ ಗಾಂಧಿ ಯವರು ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಜಾರ್ಜ್‌ಟೌನ್‌ ವಿವಿಯಲ್ಲಿ ವಿದ್ಯಾರ್ಥಿಗಳ ಜತೆಗೆ, ಜತೆಗೆ ಪತ್ರಕರ್ತರ ಜತೆಗೆ ಕೂಡ ಸಂವಾದ ನಡೆಸಲಿದ್ದಾರೆ. ಲೋಕಸಭೆಯ ವಿಪಕ್ಷ ನಾಯಕರಾಗಿ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ರಾಹುಲ್‌ ಗಾಂಧಿಯವರು ಅಮೆರಿಕಕ್ಕೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next